Gattimela Serial End: ಜನರ ಮೆಚ್ಚಿನ ಇನ್ನೊಂದು ಧಾರವಾಹಿ ಮುಕ್ತಾಯ, ಬೇಸರ ಹೊರಹಾಕಿದ ಸೀರಿಯಲ್ ಪ್ರಿಯರು.

ಮುಕ್ತಾಯದ ಹಂತ ತಲುಪಿದ ಸೂಪರ್ ಹಿಟ್ ಧಾರಾವಾಹಿ, ಇನ್ನುಮುಂದೆ ನಿಮ್ಮ ನೆಚ್ಚಿನ ಈ ಧಾರಾವಾಹಿ ಪ್ರಸಾರ ಆಗುವುದಿಲ್ಲ

Gattimela Serial End: ಗಟ್ಟಿಮೇಳ ಧಾರಾವಾಹಿ (Gattimela Serial) ವೀಕ್ಷಕರಿಗೆ ಒಂದು ಬೇಸರದ ಸದ್ದಿ ಅದೇನೆಂದರೆ ಇನ್ನು ಮುಂದೆ ನಿಮ್ಮ ನೆಚ್ಚಿನ ಗಟ್ಟಿಮೇಳ ಧಾರಾವಾಹಿ ಪ್ರಸಾರ ಆಗುವುದಿಲ್ಲ ಯಾಕೆಂದರೆ ಈ ಧಾರಾವಾಹಿ ಅಂತಿಮ ಘಟ್ಟ ತಲುಪಿದ್ದು, ಈ ಧಾರಾವಾಹಿ ಮುಕ್ತಯಗೊಳ್ಳಲಿದೆ. ಗಟ್ಟಿಮೇಳ ಧಾರಾವಾಹಿ 2019ರ ಮಾರ್ಚ್ 11 ರಂದು ಪ್ರಾರಂಭವಾಯ್ತು.

ಇದುವರೆಗೂ 1215 ಸಂಚಿಕೆಗಳು ಪ್ರಸಾರಗೊಂಡಿದೆ. ಒಂದು ದಿನವೂ ಗಟ್ಟಿಮೇಳ ಧಾರಾವಾಹಿ ಟಿಆರ್‌ಪಿಯಲ್ಲಿ ಕಾಂಪ್ರಮೈಸ್ ಆಗಿಲ್ಲ. ವೇದ್ಯಾ ಜೋಡಿ ಟಾಪ್ ಲಿಸ್ಟ್‌ನಲ್ಲೇ ಇದ್ದು ಮುಂದೆ ಸಾಗಿದ್ದಾರೆ. ಹಬ್ಬ ಹರಿದಿನಗಳಲ್ಲಿ ವಿಶೇಷ ಸಂಚಿಕೆಯನ್ನು ಪ್ರಸಾರ ಮಾಡುತ್ತಾ, ಸತ್ಯಕ್ಕೆ ಯಾವತ್ತೂ ಸೋಲಿಲ್ಲ. ನ್ಯಾಯ ಒಂದಲ್ಲ ಒಂದು ದಿನ ಗೆದ್ದೆ ಗೆಲ್ಲುತ್ತದೆ ಎಂಬುದನ್ನು ಧಾರಾವಾಹಿಯಲ್ಲಿ ತೋರಿಸುತ್ತಾ ಬರಲಾಗುತ್ತಿದೆ.

Gattimela Serial
Image Credit: Kannada TV

ವೇದಾಂತ್ ಅಮೂಲ್ಯ ಜೋಡಿಯ ಫ್ಯಾನ್ ಪೇಜ್

ಗಟ್ಟಿಮೇಳ ಧಾರಾವಾಹಿ ಶುರುವಾದಾಗಿನಿಂದಲೂ, ವೇದಾಂತ್ ಹಾಗು ಅಮೂಲ್ಯ ಅವರನ್ನು ಬಹಳ ವಿಶೇಷವಾಗಿ ಸ್ಕ್ರೀನ್ ಮೇಲೆ ತೋರಿಸಲಾಗಿದೆ, ರೌಡಿ ಬೇಬಿ ಎಂದೇ ಅಮೂಲ್ಯ ಅವರನ್ನು ಹೈಲೇಟ್ ಮಾಡಲಾಗಿದ್ದು, ಈ ಧಾರಾವಾಹಿ ನಂಬರ್ ಒನ್ ಸ್ಥಾನವನ್ನು ತಲುಪಿದೆ. ಕಳೆದ ನಾಲ್ಕೂವರೆ ವರ್ಷದಿಂದ ಗಟ್ಟಿಮೇಳ ಧಾರಾವಾಹಿ ಪ್ರೈಮ್ 8ಗಂಟೆಯನ್ನು ಯಾವ ಧಾರಾವಾಹಿಗೂ ಬಿಟ್ಟುಕೊಟ್ಟಿಲ್ಲ.

TRP ಅಲ್ಲೂ ಕೂಡ ಕಾಂಪ್ರಮೈಸ್ ಆಗಿಲ್ಲ. ಈ ಧಾರಾವಾಹಿಯಲ್ಲಿ ಅಮೂಲ್ಯ ಹಾಗೂ ವೇದಾಂತ್ ಜೋಡಿಯನ್ನು ಅಭಿಮಾನಿಗಳು ಬಹಳ ಇಷ್ಟಪಡುತ್ತಾರೆ. ಇವರಿಬ್ಬರ ರೊಮ್ಯಾಂಟಿಕ್ ಸೀನ್‌ಗಳನ್ನು ನೋಡಲು ಬಯಸುತ್ತಾರೆ. ವೇದ್ಯಾ ಎಂದೇ ಇಬ್ಬರ ಫ್ಯಾನ್ಸ್ ಪೇಜ್ ಅನ್ನು ಕೂಡ ಅಭಿಮಾನಿಗಳು ತೆರೆದಿದ್ದಾರೆ. ಟಾಪ್ ಸ್ಥಾನದಲ್ಲಿದ್ದುಕೊಂಡೇ ಈಗ ಮುಕ್ತಾಯದ ಹಂತ ತಲುಪಿದೆ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ ಎನ್ನಬಹುದು .

ಸತ್ಯಕ್ಕೆ ಗೆಲುವು ಎಂಬುದನ್ನು ತೋರಿಸಿಕೊಟ್ಟ ಧಾರಾವಾಹಿ

ಗಟ್ಟಿಮೇಳ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರವು ಬಹಳ ಮುಖ್ಯವಾಗಿತ್ತು. 04 ಹೆಣ್ಣು ಮಕ್ಕಳನ್ನು ಹೊಂದಿದ ತಂದೆ ತಾಯಿಯ ಕಷ್ಟ ಹಾಗು ತಂದೆ ತಾಯಿ ಇಲ್ಲದೇ ಸುಹಾಸಿನಿಯ ಮೋಸಕ್ಕೆ ಒಳಗಾದ ವಸಿಷ್ಠ ಕುಟುಂಬಕ್ಕೆ ಸೇರಿದ ಮೂವರು ಗಂಡು ಮಕ್ಕಳಾದ ವೇದಾಂತ್, ವಿಕ್ರಾಂತ್, ಧ್ರುವ ಹಾಗೂ ಹೆಣ್ಣು ಮಗು ಆದ್ಯ. ಸೂರ್ಯ ನಾರಾಯಣ ವಸಿಷ್ಠ ಹಾಗೂ ವೈದೇಹಿಯನ್ನು ಕೊಂದ ಸುಹಾಸಿನಿ. ಮಕ್ಕಳಿಂದ ಸತ್ಯ ಮುಚ್ಚಿಟ್ಟು, ಬೆಂಕಿ ಅವಘಢದಲ್ಲಿ ಅಪ್ಪ-ಅಮ್ಮ ತೀರಿ ಹೋದರು ಎಂದು ಹೇಳಿರುತ್ತಾಳೆ. ಆದರೆ, ವೈದೇಹಿಯನ್ನು 25 ವರ್ಷಗಳ ಕಾಲ ಕೂಡಿ ಹಾಕಿರುತ್ತಾಳೆ.

ಸುಹಾಸಿನಿಯನ್ನು ವೇದಾಂತ್ ಸಂಪೂರ್ಣವಾಗಿ ನಂಬಿರುತ್ತಾನೆ. ಪರಿಮಳ ಹಾಗೂ ಮಂಜುನಾಥ್ ಅವರ ನಾಲ್ವರು ಹೆಣ್ಣು ಮಕ್ಕಳಲ್ಲಿ ಮೂವರು ವಸಿಷ್ಠ ಕುಟುಂಬದವರನ್ನೇ ಪ್ರೀತಿಸಿ ಮದುವೆಯಾಗುತ್ತಾರೆ. ಈಗ ವೇದಾಂತ್ ತಾಯಿ ಮತ್ತು ತಂದೆಯನ್ನು ಹುಡುಕಲಾಗಿದೆ. ಸುಹಾಸಿನಿ ಕಥೆಯು ಅಂತ್ಯವಾಗುತ್ತಿದೆ. ವೈದೇಹಿಗೆ ವಸಿಷ್ಢ ಕಂಪನಿಯ ಸಿಇಒ ಸ್ಥಾನವನ್ನು ನೀಡಲಾಗಿದೆ. ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದ್ದು, ವೈದೇಹಿಗೆ ಅಮೂಲ್ಯ ನ್ಯಾಯ ಒದಗಿಸಿ ಕೊಟ್ಟಿದ್ದಾಳೆ. ಸುಹಾಸಿನಿಗೆ ಮಾಡಿದ ತಪ್ಪಿಗೆ ಶಿಕ್ಷೆಯಾಗುವುದೊಂದೇ ಬಾಕಿ ಇದೆ.

Gattimela Serial End
Image Credit: timesofindia

ಲಕ್ಷ್ಮೀ ನಿವಾಸ ಹೊಸ ಧಾರಾವಾಹಿ ಆರಂಭ

ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಜೀ ಕನ್ನಡ ವಾಹಿನಿ ಪ್ರೋಮೋ ರಿಲೀಸ್ ಮಾಡಿದೆ. ಲಕ್ಷ್ಮೀ ನಿವಾಸ ಧಾರಾವಾಹಿಯ ಪ್ರೋಮೋ ನೋಡಿ ಜನ ಖುಷಿ ಪಟ್ಟಿದ್ದಾರೆ. ಈ ಧಾರಾವಾಹಿ ಪ್ರಸಾರದ ಬಗ್ಗೆ ವಾಹಿನಿ ಇನ್ನೂ ಯಾವುದೇ ಖಚಿತ ಮಾಹಿತಿಯನ್ನು ನೀಡಿಲ್ಲ. ಇದರಲ್ಲಿ ಚೈತ್ರದ ಪ್ರೇಮಾಂಜಲಿ ಚಿತ್ರದ ನಟಿ ಶ್ವೇತಾ ನಟಿಸಿದ್ದಾರೆ. ಶ್ವೇತಾ ಅವರು ಕಮ್ ಬ್ಯಾಕ್ ಮಾಡಿರುವುದಕ್ಕೆ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಹಾಗು ಈ ಹೊಸ ಧಾರಾವಾಹಿ ತುಂಬ ಸುಂದರವಾದ ಕುಟುಂಬದ ಕಥೆ ಆಗಲಿದೆ ಎನ್ನಲಾಗಿದೆ.

Leave A Reply

Your email address will not be published.