Gruha Lakshmi: ಗೃಹ ಲಕ್ಷ್ಮಿ ಯೋಜನೆಯ ಹಣ ಸಿಗದ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ, ಇನ್ನೊಂದು ಘೋಷಣೆ.

ಗೃಹ ಲಕ್ಷ್ಮಿ ಯೋಜನೆಯ ಹಣ ಸಿಗದ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ.

CM Siddaramaiah About Gruha Lakshmi: ಇತೀಚಿನ ದಿನಗಳಲ್ಲಿ ಹಲವಾರು ಯೋಜನೆಗಳು ರಾಜ್ಯ ಸರ್ಕಾರದಿಂದ ಜಾರಿ ಬರುತ್ತಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದಾಗಿದ್ದು, ಈ ಯೋಜನೆಯ ಅಡಿಯಲ್ಲಿ ರಾಜ್ಯದ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ ಸಹಾಯಧನ ನೀಡಲಾಗುತ್ತಿದೆ.

ಈಗಾಗಲೇ ಹಲವು ಮಹಿಳೆಯರು ಈ ಯೋಜನೆಯಡಿ ಕೆಲವು ಕಂತುಗಳ ಹಣವನ್ನು ಪಡೆದಿದ್ದಾರೆ ಇಂತಹ ಹಣ ಕೆಲ ಯಜಮಾನಿಯರ ಖಾತೆಗೆ ವರ್ಗಾವಣೆಯಾಗಿರಲಿಲ್ಲ,ಇವರಿಗೆ ಸಿಎಂ ಸಿದ್ಧರಾಮಯ್ಯ ಸಿಹಿಸುದ್ದಿ ನೀಡಿದ್ದಾರೆ.                                                                                                                                                                 

Gruha Lakshmi scheme latest news
Image Credit: News18

                         

ತಾಂತ್ರಿಕ ಸಮಸ್ಯೆ ಪರಿಹಾರದ ಬಗ್ಗೆ CM ಸಿದ್ದರಾಮಯ್ಯ ಹೇಳಿಕೆ

ಕೆಲವು ಯಜಮಾನಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2000 ರೂ. ಹಣ ತಾಂತ್ರಿಕ ಸಮಸ್ಯೆಯಿಂದ ಜಮಾ ಆಗಿಲ್ಲ. ಇವರಿಗೂ ತಾಂತ್ರಿಕ ಸಮಸ್ಯೆ ಸರಿ ಪಡಿಸೋ ಮೂಲಕ 2000 ರೂ ಹಣವನ್ನು ಡಿಬಿಟಿ ಮೂಲಕ ಖಾತೆಗೆ ಜಮಾ ಮಾಡಲಾಗುತ್ತದೆ ಅಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರದಂದು ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದರು.

ಬ್ಯಾಂಕ್ ಖಾತೆ ಹಾಗು ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ರಾಜ್ಯ ಸರ್ಕಾರದ ಗ್ರಹಲಕ್ಷ್ಮಿ ಯೋಜನೆಯಡಿ ಹಣ ನಿಮ್ಮ ಖಾತೆಗೆ ಬರಲು ಆಧಾರ ಕಾರ್ಡ್ ಲಿಂಕ್ ಕಡ್ಡಾಯ ಎಂದು ಸರ್ಕಾರ ಆದೇಶಿಸಿದ್ದು, ಈಗಾಗಲೇ ರಾಜ್ಯದಲ್ಲಿನ ಸುಮಾರು 1.26 ಕೋಟಿ ಯಜಮಾನಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಈಗಾಗಲೇ ಇವರಲ್ಲಿ 1.10 ಕೋಟಿ ಯಜಮಾನಿ ಮಹಿಳೆಯರ ಖಾತೆಗೆ ಡಿಬಿಟಿ ಮೂಲಕ 2000 ರೂ ಹಣವನ್ನು ಜಮಾ ಮಾಡಲಾಗಿದೆ. ಆದರೇ 16 ಲಕ್ಷ ಜನರಿಗೆ ಬ್ಯಾಂಕ್ ಖಾತೆ, ಆಧಾರ್ ಜೋಡಣೆಯಾಗದ ತಾಂತ್ರಿಕ ಕಾರಣದಿಂದ ಜಮಾ ಆಗಿಲ್ಲ. ಈ ಸಮಸ್ಯೆ ಸರಿ ಪಡಿಸಿ ಕೆಲವೇ ದಿನಗಳಲ್ಲಿ ಹಣವನ್ನು ಯಜಮಾನಿಯರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಅಂತ CM ತಿಳಿಸಿದ್ದಾರೆ.

CM Siddaramaiah About Gruha Lakshmi
Image Credit: Kannadanews

ಮಹಿಳೆಯರಿಗೆ ಈ ಯೋಜನೆಯಡಿ ಭರವಸೆ

ಗ್ರಹಲಕ್ಷ್ಮಿ ಯೋಜನೆಯಡಿ ಹಣ ಬಂದಿಲ್ಲ ಎಂದು ಚಿಂತೆಯಲ್ಲಿರುವ ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವಾಗಿದೆ ಹಾಗು ತಮಗೂ ಈ ಯೋಜನೆಯಡಿ ಹಣ ದೊರೆಯುತ್ತದೆ ಎಂಬ ಸಂತೋಷ ಕೊಡ ಹೆಚ್ಚಾಗಿದೆ. ಯಾಕೆಂದರೆ CM ಅವರು ಈಗಾಗಲೇ ತಾಂತ್ರಿಕ ದೋಷಗಳನ್ನು ಸರಿ ಪಡಿಸುದಾಗಿ ಭರವಸೆ ನೀಡಿದ್ದು, ಆದಷ್ಟು ಬೇಗ ಖಾತೆಗೆ ಹಣ ಬರಲಿದೆ ಎಂದಿದ್ದಾರೆ.

Leave A Reply

Your email address will not be published.