Ghost Kannada: ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡಿದ ಶಿವಣ್ಣನ ಘೋಸ್ಟ್ ಸಿನಿಮಾ, ದಾಖಲೆಗಳು ಪುಡಿಪುಡಿ.
ಭರ್ಜರಿ ರೆಸ್ಪಾನ್ಸ್ ಪಡೆದ ಕನ್ನಡ ಘೋಸ್ಟ್ ಸಿನಿಮಾ, ಮೊದಲ ದಿನವೇ ಸಖತ್ ಕಲೆಕ್ಷನ್.
Ghost Box Office Collection Day 1: ಅಕ್ಟೋಬರ್ 19 , 2023 ರಂದು ಹ್ಯಾಟ್ರಿಕ್ ಹೀರೋ ಶಿವ ರಾಜಕುಮಾರ್ (Shiva Rajkumar) ಅಭಿನಯದ ಬಹಳ ನಿರೀಕ್ಷಿತ ಸಿನಿಮಾ ಘೋಸ್ಟ್ (Ghost) ತೆರೆಕಂಡಿದೆ. ಮೊದಲ ದಿನವೇ ನಿರೀಕ್ಷೆಯ ಹಂತ ತಲುಪಿದ ಈ ಸಿನಿಮಾ, ಅಭಿಮಾನಿಗಳ ಮನ ಗೆದ್ದಿದೆ.
ಎಂ ಜಿ ಶ್ರೀನಿವಾಸ್ ನಿರ್ದೇಶಿಸಿದ ಈ ಸಿನಿಮಾ,ಕನ್ನಡ ಭಾಷೆಯ ಆಕ್ಷನ್ ಥ್ರಿಲರ್ ಸಿನಿಮಾ ಎಂದೆನಿಸಿಕೊಂಡಿದೆ , ಮುಖ್ಯ ಪಾತ್ರದಲ್ಲಿ ಶಿವರಾಜಕುಮಾರ್ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಜಯರಾಮ್, ಅನುಪಮ್ ಖೇರ್, ಪ್ರಶಾಂತ್ ನಾರಾಯಣನ್, ಅರ್ಚನ ಜೋಯಿಸ್ , ಸತ್ಯ ಪ್ರಕಾಶ್ ಹಾಗು ಇನ್ನಿತರ ಹಲವು ಖ್ಯಾತ ನಾಯಕರನ್ನು ಈ ಸಿನಿಮಾದಲ್ಲಿ ಕಾಣಬಹುದು.
ಗೆಲುವಿನತ್ತ ಘೋಸ್ಟ್ ಸಿನಿಮಾ
ಸಂದೇಶ್ ನಾಗರಾಜ್ ನಿರ್ಮಿಸಿದ, ಎಂ ಜಿ ಶ್ರೀನಿವಾಸ್ ನಿರ್ದೇಶಿಸಿದ ಘೋಸ್ಟ್ ಸಿನಿಮಾ ಮೊದಲನೇ ದಿನದಿಂದಲೇ ಕಲೆಕ್ಷನ್ ಆರಂಭಿಸಿದೆ. 10 ರಿಂದ 15 ಕೋಟಿ ಬಜೆಟ್ ನಲ್ಲಿ ಮಾಡಿದ ಸಿನಿಮಾ ಇದಾಗಿದ್ದು ಶಿವರಾಜ್ ಕುಮಾರ್ ಅವರ ಅಸಾಧಾರಣ ಅಭಿನಯ ಹಾಗು ಉಳಿದ ತಾರಂಗಣದೊಂದಿಗೆ ವೀಕ್ಷಣೆಯ ಅನುಭವವನು ಹೆಚ್ಚಿಸಿದೆ. ಈ ಸಿನಿಮಾದ ಎಲ್ಲಾ ಹಾಡುಗಳು ಬಹಳ ಸೊಗಸಾಗಿದ್ದು, ಈ ಸಿನಿಮಾದ ಹಾಡುಗಳನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ.
ಕೋಟಿ ಕೋಟಿ ಕಲೆಕ್ಷನ್ ಗಳಿಸಿದ ಘೋಸ್ಟ್ ಸಿನಿಮಾ
ಘೋಸ್ಟ್ ಸಿನಿಮಾ ನಿನ್ನೆ ಅಕ್ಟೋಬರ್ 19 ರಂದು ರಿಲೀಜ್ ಆಗಿದ್ದು, ಈಗಾಗಲೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ ಎನ್ನಲಾಗಿದೆ. 15 ಕೋಟಿ ಬಜೆಟ್ ನ ಈ ಸಿನಿಮಾ ಈಗಾಗಲೇ 10 ರಿಂದ 12 ಕೋಟಿ ಗಳಿಸಿದೆ ಎಂಬ ಮಾಹಿತಿ ಹರಿದಾಡುತ್ತಿದೆ . ಈ ಸಲದ ದಸರಾ ಹಬ್ಬಕ್ಕೆ ಈ ಸಿನಿಮಾ ರಿಲೀಜ್ ಆಗಿದ್ದು, ಹಬ್ಬದ ಸಂದರ್ಭದಲ್ಲೂ ಜನ ಥಿಯೇಟರ್ ನಲ್ಲಿ ಮುಗಿ ಬಿದ್ದಿದ್ದಾರೆ ಅಂದರೆ ಈ ಸಿನಿಮಾ ಯಶಸ್ಸಿನತ್ತ ಸಾಗುತ್ತಿದೆ ಎನ್ನಬಹದು. ಅಷ್ಟೇ ಅಲ್ಲದೆ ಎರಡೇ ದಿನದಲ್ಲಿ ಭರ್ಜರಿ ಕಲೆಕ್ಷನ್ ಕಂಡ ಸಿನಿಮಾ ಇನ್ನು ಬಾಕ್ಸ್ ಆಫೀಸ್ ಗಲ್ಲ ಪಟ್ಟಿಗೆ ತುಂಬಲು ಸಜ್ಜಾಗಿದೆ.