Marriage Age: ಹೆಣ್ಣು ಮಕ್ಕಳ ವಿವಾಹದ ವಯಸ್ಸಿನ ಮಿತಿ ಏರಿಕೆ, ಅಧಿಕೃತ ಘೋಷಣೆ ಮಾತ್ರ ಭಾಕಿ.

ಹೆಣ್ಣು ಮಕ್ಕಳ ಮದುವೆ ವಯಸ್ಸಿನ ಬಗ್ಗೆ ಮಹತ್ವದ ನಿರ್ಧಾರ, ಇನ್ನು ಮುಂದೆ ಈ ನಿಯಮ ಕಡ್ಡಾಯ

Girls Marriage Age Limit: ಹೆಣ್ಣು ಮಕ್ಕಳ ಜೀವನದಲ್ಲಿ ಮದುವೆ ಎನ್ನುವುದು ಬಹಳ ಪ್ರಮುಖವಾದ ಹಂತ. ಆಕೆ ಯಾವ ವಯಸ್ಸಿನಲ್ಲಿ ವಿವಾಹ ಆದರೆ ಅವರ ಜೀವನ ಒಂದು ಘಟ್ಟವನ್ನು ತಲುಪುತ್ತದೆ ಎನ್ನುವುದು ಬಹಳ ಮುಖ್ಯ ವಿಷಯ. ಈ ಹಿಂದೆ ಬಾಲ್ಯ ವಿವಾಹ ಪದ್ಧತಿ ಮೂಲಕ ಹೆಣ್ಣಿನ ಜೀವನವನ್ನೇ ಅತಂತ್ರ ಸ್ಥಿತಿಗೆ ತರಲಾಗುತ್ತಿತ್ತು. ಆಟ ಆಡುವ ವಯಸ್ಸಲ್ಲಿ ಮದುವೆ, ಶಿಕ್ಷಣ ಪಡೆಯುವ ಸಮಯದಲ್ಲಿ ಮಕ್ಕಳು ಎಂದು ಇಡೀ ಹೆಣ್ಣಿನ ಭವಿಷ್ಯವನ್ನೇ ಹಾಳು ಮಾಡಲಾಗುತ್ತಿತ್ತು.

ತದನಂತರ ಬಾಲ್ಯ ವಿವಾಹ ಪದ್ದತಿ ರದ್ದು ಮಾಡಿ ಹೆಣ್ಣಿನ ಮದುವೆ ವಯಸ್ಸನ್ನು 18 ವರ್ಷಕ್ಕೆ ನಿಗದಿ ಪಡಿಸಲಾಯಿತು. 18 ವರ್ಷ ದಾಟದ ಹೆಣ್ಣು ಮಗಳಿಗೆ ಮದುವೆ ಮಾಡಿಸಿದರೆ ಕಾನೂನು ಶಿಕ್ಷೆಯನ್ನು ವಿಧಿಸುದಾಗಿ ಹಾಗು ಜನರಿಗೆ ಬಾಲ್ಯ ವಿವಾಹದಿಂದ ಆಗುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.

Girls Marriage Age
Image Credit: Vidhikarya

ವಿವಾಹ ವಯಸ್ಸು 18 ರಿಂದ 21 ಕ್ಕೆ ಹೆಚ್ಚಿಸಲಾಗಿದೆ

ಹೆಣ್ಣು ಮಕ್ಕಳ ವಿವಾಹಕ್ಕೆ ಸಂಬಂಧಿಸಿದಂತೆ ಮಸೂದೆಯನ್ನು ಮಂಡಿಸಲಾಗಿತ್ತು. ಹೆಣ್ಣು ಮಕ್ಕಳ ಮದುವೆ ವಯಸ್ಸು 18 ರಿಂದ 21ಕ್ಕೆ ಏರಿಸುವ ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸದೀಯ ಸಮಿತಿಗೆ ವರದಿ ಸಲ್ಲಿಸಲು ನೀಡಿದ್ದ ಗಡುವನ್ನು ಮತ್ತೆ ಮೂರು ತಿಂಗಳು ವಿಸ್ತರಿಸಲಾಗಿದೆ. ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್‌ ಅವರು, ಸಮಿತಿಗೆ ಮಸೂದೆಯನ್ನು ಪರಿಶೀಲಿಸಿ ವರದಿ ಸಲ್ಲಿಸಲು ನೀಡಿದ್ದ ಗಡುವನ್ನು 2024 ರ ಜನವರಿ 24 ರ ವರೆಗೆ ವಿಸ್ತರಿಸಿದ್ದಾರೆ ಎಂದು ರಾಜ್ಯಸಭೆಯ ಪ್ರಕಟಣೆಯಲ್ಲಿ ಮಂಗಳವಾರ ತಿಳಿಸಲಾಗಿದೆ.

Girls Marriage Age Limit
Image Credit: Keralakaumudi

ಈ ಹಿಂದೆಯೂ ಗಡುವನ್ನು ವಿಸ್ತರಿಸಲಾಗಿತ್ತು.

2021ರ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಮಸೂದೆ-2021 ಮಂಡಿಸಲಾಗಿತ್ತು. ಇದಕ್ಕೂ ಮುನ್ನ ಸಹ ವರದಿ ಸಲ್ಲಿಸಲು ನೀಡಿದ್ದ ಗಡುವನ್ನು ವಿಸ್ತರಿಸಲಾಗಿತ್ತು. ಬಳಿಕ ಇದನ್ನು ಶಿಕ್ಷಣ, ಮಹಿಳೆ, ಮಕ್ಕಳು, ಯುವಜನತೆ ಮತ್ತು ಕ್ರೀಡೆ ಕುರಿತ ಸ್ಥಾಯಿ ಸಮಿತಿಗೆ ಒಪ್ಪಿಸಲಾಗಿತ್ತು.ಈಗ ಮತ್ತೆ ಗಡುವನ್ನು ವಿಸ್ತರಿಸುವ ಮೂಲಕ ಇನ್ನು ಸಮಯವನ್ನು ಪಡೆಯಲಾಗಿದೆ.

Leave A Reply

Your email address will not be published.