Gmail: Gmail ಖಾತೆ ಇದ್ದವರಿಗೆ ಗೂಗಲ್ ನಿಂದ ಗುಡ್ ನ್ಯೂಸ್, ಗೂಗಲ್ ನಿಂದ ಹೊಸ ಸೇವೆ ಆರಂಭ.
ಇದೀಗ Gmail ಬಳಕೆದಾರರಿಗೆ ಗೂಗಲ್ ಹೊಸ ಸೇವೆಯನ್ನು ಆರಂಭಿಸಿದೆ.
Gmail Multi language Feature: Gmail Google ನಿಂದ ಒದಗಿಸಲಾದ ಉಚಿತ ಸೇವೆಯಾಗಿದೆ. Gmail ವಿಶ್ವದಾದ್ಯಂತ 1 .8 ಬಿಲಿಯನ್ ಬಳಕೆದಾರರನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಸೇವೆಯಾಗಿದೆ. ಬಳಕೆದಾರರು ಸಾಮಾನ್ಯವಾಗಿ Gmail ಅನ್ನು ವೆಬ್ ಬ್ರೌಸರ್ ನಲ್ಲಿ ಅಥವಾ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರವೇಶಿಸುತ್ತಾರೆ. ಇದೀಗ Gmail ಬಳಕೆದಾರರಿಗೆ ಗೂಗಲ್ ಹೊಸ ಸೇವೆಯನ್ನು ಆರಂಭಿಸಿದೆ. ಇದರ ಬಗ್ಗೆ ನಾವೀಗ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.
Gmail ಖಾತೆ ಇದ್ದವರಿಗೆ ಗೂಗಲ್ ನಿಂದ ಗುಡ್ ನ್ಯೂಸ್
Gmail ಮೂಲಕ ನೀವು ಪ್ರತಿ ದಿನ ನೂರಾರು Gmail ಗಳನ್ನೂ ಕಳುಹಿಸುತ್ತೀರಿ ಹಾಗೂ ಸ್ವೀಕರಿಸುತ್ತೀರಿ. Gmail ಗಳು ಕೆಲವೊಮ್ಮೆ ಬೇರೆ ಭಾಷೆಗಳಲ್ಲಿ ಇರುತ್ತವೆ. Gmail ಗಳು English ಹಾಗೂ Hindi ಭಾಷೆಯಲ್ಲಿದ್ದರೆ ಅವುಗಳನ್ನು ಓದಲು ನಿಮಗೆ ಹೆಚ್ಚು ತೊಂದರೆ ಆಗುದಿಲ್ಲ, ಆದರೆ English ಹಾಗೂ Hindi ಭಾಷೆ ಹೊರತುಪಡಿಸಿ ಮೂರನೇ ಭಾಷೆಯಲ್ಲಿದ್ದರೆ ಆಗ ನೀವು ಚಿಂತಿಸಬೇಕಾಗುತ್ತದೆ. ಹಾಗಾಗಿ Google Gmail ಬಳಕೆದಾರರಿಗೆ ಗೂಗಲ್ ಹೊಸ ಸೇವೆಯನ್ನು ಆರಂಭಿಸಿದೆ ಹಾಗಾದರೆ ಆ ಹೊಸ ಸೇವೆ ಯಾವುದೆಂದು ನಾವೀಗ ತಿಳಿಯೋಣ.
ಬಹುಭಾಷಾ ಅನುವಾದ ವೈಶಿಷ್ಟ್ಯ
ಬಹುಭಾಷಾ ಅನುವಾದ ವೈಶಿಷ್ಟ್ಯ ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ಲಭ್ಯವಿರುತ್ತದೆ. ಇದರಲ್ಲಿ Gmail ಅನ್ನು 100 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಬಹುದು. ಇದನ್ನು ಕೆಲವೇ ಸೆಕೆಂಡುಗಳಲ್ಲಿ ಸಕ್ರಿಯಗೊಳಿಸಬಹುದಾಗಿದೆ. ಇದೀಗ ಈ ವೈಶಿಷ್ಟ್ಯವನ್ನು ಹೇಗೆ ಬಳಕೆ ಮಾಡುದು ಎನ್ನುವ ಬಗ್ಗೆ ನಾವೀಗ ತಿಳಿಯೋಣ.
Gmail ಆಪ್ ನಲ್ಲಿ Email ಗಳನ್ನೂ ಭಾಷಾಂತರಿಸುದು ಹೇಗೆ…?
ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ Gmail ಆಪ್ ತೆರೆದು ನೀವು ಅನುವಾದಿಸಲು ಬಯಸುವ Email ಗೆ ಹೋಗಿ, ಇಮೇಲ್ ನ ಬಲಬದಿಯಲ್ಲಿ ಇರುವ ಮೂರೂ ಚುಕ್ಕೆಗಳನ್ನು ಟ್ಯಾಪ್ ಮಾಡಿ ನಂತರ ಭಾಷಾಂತರ ಮಾಡಲು ಬಯಸುವ ಭಾಷೆಯನ್ನು ಆಯ್ಕೆಮಾಡಿ ಇಮೇಲ್ ಅನ್ನು ಹೊಸ ಭಾಷೆಗೆ ಅನುವಾದಿಸಿ. ನೀವು ಓದಬಹುದಾಗಿದೆ.
ಈ ವೈಶಿಷ್ಟ್ಯ ಇನ್ನು ಅಭಿವೃದ್ಧಿಯ ಹಂತದಲ್ಲಿದೆ ಇದರರ್ಥ ಇದ್ರಲ್ಲಿ ಮತ್ತಷ್ಟು ಅಭಿವೃದ್ಧಿಗೆ ಅವಕಾಶವಿದೆ. ಈ ಅನುವಾದ ಸಂಪೂರ್ಣವಾಗಿ ನಿಕರವಾಗಿಲ್ಲದಿರಬಹುದು. ಈ ವೈಶಿಷ್ಟ್ಯವು ಒಂದು ಸಮಯದಲ್ಲಿ ಒಂದು Gmail ಅನ್ನು ಮಾತ್ರ ಅನುವಾದಿಸಲು ಸಾಧ್ಯ. ಉಳಿದ Email ಗಳನ್ನೂ ಪ್ರತ್ಯೇಕವಾಗಿ ಅನುವಾದಿಸಬೇಕಾಗುತ್ತದೆ.