Gold Shopping: ದೀಪಾವಳಿ ಹಬ್ಬದ ದಿನ ಚಿನ್ನ ಖರೀದಿಯಲ್ಲಿ ದಾಖಲೆ ಮಾಡಿದ ಭಾರತ, ಒಟ್ಟು ಎಷ್ಟು ಚಿನ್ನ ಮಾರಾಟವಾಗಿದೆ ಗೊತ್ತಾ.

ದೀಪಾವಳಿ ಹಬ್ಬದ ದಿನ ಭಾರತದಲ್ಲಿ ಒಟ್ಟು ಎಷ್ಟು ಕೆಜಿ ಚಿನ್ನ ಮಾರಾಟವಾಗಿದೆ ಗೊತ್ತಾ...?

Diwali Gold Shopping In India: ದೇಶದಲ್ಲಿ ದೀಪಾವಳಿ (Deepavali) ಹಬ್ಬದ ಸಂಭ್ರಮ. ಹಬ್ಬದ ಸಲುವಾಗಿ ಪ್ರಯಾಣ, ಶಾಪಿಂಗ್ ಗಳಲ್ಲಿ ಜನ ಬ್ಯುಸಿ ಆಗಿದ್ದಾರೆ. ಇದರಲ್ಲಿ ಬಹಳ ಮುಖ್ಯ ವಿಷಯ ಅಂದರೆ ಚಿನ್ನ ಹಾಗು ಬೆಳ್ಳಿ ಖರೀದಿ. ಹೌದು , ಚಿನ್ನ (Gold) ಹಾಗು ಬೆಳ್ಳಿ (Silver) ದರ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ.

ಆದ್ರೆ ಇವುಗಳ ಬೇಡಿಕೆ ಮಾತ್ರ ಹೆಚ್ಚಾಗುತ್ತಲೇ ಇದೆ. ಭಾರತ ದೇಶದಲ್ಲಿ ಹಬ್ಬ, ಮದುವೆ ಇನ್ನಿತರ ಕಾರ್ಯಕ್ರಮ ಅಂದ ಕೂಡಲೇ ನೆನಪಿಗೆ ಬರುವುದೇ ಚಿನ್ನ. ಹಾಗೆಯೆ ಈ ವರ್ಷದ ದೀಪಾವಳಿ ಕೂಡ ಚಿನ್ನದ ಖರೀದಿಯಲ್ಲೇ ಜನ ಪ್ರಾರಂಭಿಸಿದ್ದಾರೆ .ದೀಪಾವಳಿ ಹಬ್ಬದ ಪ್ರಯುಕ್ತ ದೇಶಾದ್ಯಂತ ಅನೇಕರು ಚಿನ್ನ, ಬೆಳ್ಳಿ ಖರೀದಿ ಮಾಡಿದ್ದು, ಭಾರತದಲ್ಲಿ ಹಿಂದೆಂದಿಗಿಂತಲೂ ಶೇ.20 ರಷ್ಟು ಹೆಚ್ಚಾಗಿಯೇ ಕೊಂಡುಕೊಂಡಿದ್ದು, 30 ಸಾವಿರ ಕೋಟಿಯಷ್ಟು ವ್ಯವಹಾರ ನಡೆದಿದೆ ಎಂದು ಹೇಳಲಾಗುತ್ತಿದೆ.               

Gold Shopping In India
Image Credit: Bayut

 

ಚಿನ್ನ ಬೆಲೆ ಕಡಿಮೆ ಇದ್ದಿದ್ದರಿಂದ ಅಧಿಕ ಖರೀದಿ ಆಗಿದೆ

ಇತೀಚಿಗೆ ಚಿನ್ನದ ಬೆಲೆ ತಟಸ್ಥ ಸ್ಥಿತಿಯಲ್ಲಿದೆ. ಹೆಚ್ಚು ಆಗದೆ ಕಡಿಮೆಯೂ ಆಗದೆ ಇರುವುದರಿಂದ ಜನರು ಚಿನ್ನ ಖರೀದಿ ಮಾಡಿದ್ದಾರೆ. ಕಳೆದ 10 ದಿನಗಳ ಹಿಂದೆ ಬಂಗಾರವು ಪ್ರತಿ 10 ಗ್ರಾಂಗೆ ₹ 63,000 ಇತ್ತು. ದಿನ ಕಳೆದಂತೆ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಅಂದರೆ ಅಕ್ಟೋಬರ್ 28ರಿಂದ 24 ಕ್ಯಾರೆಟ್​ನ 10 ಗ್ರಾಂ ಬಂಗಾರದ ಬೆಲೆ 800 ರಿಂದ 1500 ರೂ. ವರೆಗೆ ಬೆಲೆ ಕುಸಿಯುತ್ತ ಬಂದು 61,200 ರೂಪಾಯಿಗೆ ಬಂದು ನಿಂತಿದೆ. ಇದರಿಂದಲೇ ಖರೀದಿ ಅಧಿಕವಾಗಿದೆ. ಅಷ್ಟೇ ಅಲ್ಲದೆ ಆನ್ ಲೈನ್ ನಲ್ಲೆ ಅಧಿಕ ಚಿನ್ನ ಖರೀದಿ ಆಗಿದೆ ಎಂಬ ವರದಿ ಸಿಕ್ಕಿದೆ.

gold sell in india
Image Credit: Khaleejtimes

ಚಿನ್ನ ಸುಮಾರು 41 ಟನ್​ ಮತ್ತು ಬೆಳ್ಳಿ 400 ಟನ್​ಗಳಷ್ಟು ಮಾರಾಟವಾಗಿದೆ

ಆಲ್ ಇಂಡಿಯಾ ಜೆಮ್ ಅಂಡ್ ಜ್ಯುವೆಲರಿ ಡೊಮೆಸ್ಟಿಕ್ ಕೌನ್ಸಿಲ್ (All India Gem & Jewellery Domestic Council ) ನಿರ್ದೇಶಕ ದಿನೇಶ್ ಜೈನ್ (Dinesh Jain ) ಅವರು ಈ ಕುರಿತು ಮಾತನಾಡಿ ಈ ಬಾರಿ ಒಟ್ಟು ₹30,000 ಕೋಟಿ ರೂಪಾಯಿಯಷ್ಟು ವಹಿವಾಟು ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಕಳೆದ ವರ್ಷ ದೀಪಾವಳಿಯಂದು ತೆರಿಗೆಗಳನ್ನು ಹೊರತುಪಡಿಸಿ, ಪ್ರತಿ 10 ಗ್ರಾಂಗೆ ₹50,139 ಬೆಲೆ ಇತ್ತು. ಅಲ್ಲದೇ 22 ಟನ್ ಚಿನ್ನ ಖರೀದಿಯಾಗಿತ್ತು ಎಂದು ತಿಳಿಸಿದರು . ದೀಪಾವಳಿ ಹಬ್ಬದ ಹಿನ್ನೆಲೆ ಇಡೀ ದೇಶಾದ್ಯಂತ ಬಂಗಾರ, ಬೆಳ್ಳಿ ಖರೀದಿಸುವವರ ಸಂಖ್ಯೆ ತುಸು ಏರಿಕೆ ಆಗಿದ್ದು, ಸುಮಾರು 41 ಟನ್​ ಚಿನ್ನ ಮತ್ತು 400 ಟನ್​ಗಳಷ್ಟು ಬೆಳ್ಳಿ ಮಾರಾಟವಾಗಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.