Bank Loan: ದೇಶದ ಯಾವುದೇ ಬ್ಯಾಂಕಿನಲ್ಲಿ ಸಾಲ ಇದ್ದವರಿಗೆ ಸಿಹಿಸುದ್ದಿ
Bank Loan Rules: ಕೆಲವು ವರ್ಷ ಗಳ ಹಿಂದೆ ಠೇವಣಿ ಸಂಗ್ರಹಿಸಲು ಮಾರ್ಕೆಟಿಂಗ್ ಮಾಡುತ್ತಿದ್ದ ಬ್ಯಾಂಕುಗಳು ಈಗ ಸಾಲ ನೀಡಲು ಮಾರ್ಕೆಂಟಿಂಗ್ ಮಾಡುತ್ತಿವೆ.ವಾಹನ ಸಾಲ ಬೇಕಾ? ವೈಯಕ್ತಿಕ ಸಾಲ ಬೇಕಾ? ನಾವು ನಿಮಗೆ ಆಕರ್ಷಕ ಬಡ್ಡಿ ದರದಲ್ಲಿ ಸಾಲ ಕೊಡ್ತೀವಿ ಎಂದು ಒತ್ತಾಯ ಮಾಡಿ ಸಾಲ ನೀಡುತ್ತಿವೆ.
ಬೇಡ ಎಂದರು ಕೇಳದೆ ಪದೇ ಪದೇ ಕರೆ ಮಾಡಿ , ಒತ್ತಾಯ ಮಾಡಿ ಸಾಲ ನೀಡುತ್ತಿವೆ ಬ್ಯಾಂಕುಗಳು!
ವೈಯಕ್ತಿಕ ಸಾಲ ಬೇಕೆ? ನಾವು ನಿಮಗೆ ಆಕರ್ಷಕ ಬಡ್ಡಿ ದರದಲ್ಲಿ ಸಾಲ ಕೊಡ್ತೀವಿ”.
ಕ”ನಿಮಗೆ 8 ಲಕ್ಷ ರೂ. ಸಾಲ ಮಂಜೂರಾಗಿದೆ. ಆದಾಯದ ಪ್ರೂಫ್ ಬೇಡವೇ ಬೇಡ. ಕನಿಷ್ಠ ದಾಖಲೆಗಳು ಸಾಕು”,ನಿಮ್ಮ ಹಳೇ ಸಾಲವಿದ್ದರೆ, ಅದನ್ನು ಕ್ಲೋಸ್ ಮಾಡಿ ಹೊಸ ಸಾಲ ಕೊಡಿಸ್ತೀವಿ ಹಾಗೆ ಹೀಗೆ ಎಂದು ಹೇಳಿ ಸಾಲ ಕೊಡಲು ಮುಂದಾಗುತ್ತದೆ.
ವಾರಕ್ಕೆ ಒಂದೆರಡು ಸಲವಾದರೂ ಇಂಥ ಕರೆಗಳು ಬಹುತೇಕರಿಗೆ ಹೋಗುತ್ತಿವೆ. ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳಿಂದಲೂ ಇಂಥ ಕರೆಗಳು ಬರುತ್ತದೆ.ಕರೆ ಕೇಳಿ, ನೀವು ಸಿಡಿಮಿಡಿಗೊಂಡರೂ ಅವರು ಬೇಸರಿಸುವುದಿಲ್ಲ.ಪುನಃ ಪೋನ್ ಮಾಡಬೇಡಿ ಎಂದರು , ಗದರಿದರೂ, ಅವರು ಬಿಡುವುದಿಲ್ಲ.ಫೋನ್ ಕರೆ ಸ್ವೀಕರಿಸದವರಾರೂ, ಆ ಹಣಕಾಸು ಸಂಸ್ಥೆಗಳನ್ನು ಅಥವಾ ಆ ಬ್ಯಾಂಕುಗಳನ್ನು ಸಾಲಕ್ಕೆ ಸಂಪರ್ಕಿಸಿರುವುದಿಲ್ಲ. ನಿಮ್ಮ ಫೋನ್ ನಂಬರ್ ಅವರಿಗೆ ಹೇಗೆ ದೊರಕಿತು ಎನ್ನುವುದು ನಮಗೆ ತಿಳಿದೇ ಇರುವುದಿಲ್ಲ.
ಬ್ಯಾಂಕುಗಳ ನಿರ್ವಹಣಾ ವೆಚ್ಚ ದಿನದಿಂದ ದಿನಕ್ಕೆ ಏರುತ್ತಿದೆ. ಬಡ್ಡಿ ದರ ಏರುತ್ತಿದೆ. ಸುಸ್ತಿ ಸಾಲ ಹೆಚ್ಚುತ್ತಿದೆ. ಬ್ಯಾಂಕುಗಳಲ್ಲಿ ಸಾಲ ವಿತರಣೆ ನಿರೀಕ್ಷೆ ಮಟ್ಟದಲ್ಲಿ ಇಲ್ಲ ಎನ್ನಲಾಗುತ್ತಿದೆ. ಬಡ್ಡಿಯೇತರ ಆದಾಯದಲ್ಲಿ ಇಳಿಕೆ ಕಾಣುತ್ತಿದೆ. ಬ್ಯಾಂಕುಗಳ ಬಡ್ಡಿಯೇತರ ಆದಾಯವೂ ಸರಕಾರದ ಹಲವು ನಿಯಂತ್ರಣಗಳಿಗೆ ಒಳಪಟ್ಟಿದೆ.ಬ್ಯಾಂಕುಗಳು ಹೆಚ್ಚಿಗೆ ಸಾಲ ನೀಡಿ ಬ್ಯಾಂಕುಗಳ ಆದಾಯ ಹೆಚ್ಚಿಸುವ ಅನಿವಾರ್ಯತೆ ಇದೆ.
ಸಾಲದ ಮಾರ್ಕೆಟಿಂಗ್ನಲ್ಲಿ ಎಲ್ಲವೂ ಕಾನೂನಿನ ಮತ್ತು ವ್ಯವಹಾರದ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಆದರೆ, ಕೆಲವು ಹಿರಿಯ ಮತ್ತು ನಿವೃತ್ತ ಬ್ಯಾಂಕರುಗಳ ಮತ್ತು ಅರ್ಥಿಕ ತಜ್ಞರ ಪ್ರಕಾರ, ಸಾಲ ಬೇಕೇ ಎಂದು ಕೇಳಿ, ಪ್ರಚೋದಿಸಿ, ಒತ್ತಾಯ ಮಾಡಿ ಸಾಲ ನೀಡುವುದು ಒಳ್ಳೆಯ ಅರ್ಥಿಕತೆಯ ಲಕ್ಷಣವಲ್ಲ ಎನ್ನುತ್ತಾರೆ.ಗ್ರಾಹಕ ಹೆಚ್ಚು ಕೇಳದೆ, ಬ್ಯಾಂಕಿನವರೇ ಮುಗಿಬಿದ್ದು ಸಾಲ ನೀಡಿದರೆ, ಮರುಪಾವತಿಯೂ ಸುಲಭವಾಗಿ ಬರುವುದಿಲ್ಲ. ಈ ಪೃವೃತ್ತಿ ಬ್ಯಾಂಕುಗಳಲ್ಲಿಅನುತ್ಪಾದಕ ಅಸ್ತಿಯ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ.