Gmail Account: ಡಿಸೆಂಬರ್ ತಿಂಗಳಲ್ಲಿ ಬಂದ್ ಆಗಲಿದೆ ಇಂತಹ ಜನರ Gmail ಖಾತೆ, ಗೂಗಲ್ ನಿಂದ ಮಹತ್ವದ ನಿರ್ಧಾರ.
ಇಂತಹ Gmail ಖಾತೆಗಳನ್ನ ಡಿಲೀಟ್ ಮಾಡಲು ನಿರ್ಧಾರ ಮಾಡಿದ ಗೂಗಲ್.
Gmail Account Delete : Gmail ಖಾತೆ ಹೊಂದಿದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ . ಯಾಕೆಂದರೆ Gmail ಇದು ಸೇಫ್ ಮಾಧ್ಯಮ ಆಗಿದ್ದು, ನಮ್ಮ ಸಂದೇಶಗಳ ಹಾಗು ಕೆಲವು ಮಾಹಿತಿಗಳ ಗೌಪ್ಯತೆ ಯನ್ನು ಕಾಪಾಡುತ್ತದೆ. ಕೆಲವರು ಹೆಸರಿಗೆ ಮಾತ್ರ ಅಕೌಂಟ್ ಅನ್ನು ಓಪನ್ ಮಾಡಿರುತ್ತಾರೆ.
ಆದರೆ ಅದರ ಬಳಕೆ ಆಗುತ್ತಿರುವುದಿಲ್ಲ.
ಇನ್ನು ಕೆಲವರಿಗೆ ಎರಡು ಮೂರೂ Gmail ಅಕೌಂಟ್ ಗಳಿದ್ದು, ಸುಮ್ಮನೆ ಕಾಟಾಚಾರಕ್ಕೆಂದು ಇಟ್ಟುಕೊಂಡಿರುತ್ತಾರೆ. ಆದರೆ ಇನ್ನು ಮುಂದೆ Gmail ಖಾತೆ ಹೊಂದಿರುವವರು ಅದನ್ನು ನಿರಂತರವಾಗಿ ಬಳಕೆ ಮಾಡದಿದ್ದರೆ, ಮುಂದಿನ ತಿಂಗಳು ನಿಮ್ಮ ಖಾತೆ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಲಕ್ಷಾಂತರ Gmail ಖಾತೆಗಳು ರದ್ದಾಗುತ್ತದೆ
ಒಂದು ವೇಳೆ ಗೂಗಲ್ ಖಾತೆಯನ್ನು ಕನಿಷ್ಠ ಎರಡು ವರ್ಷಗಳಿಂದ ಉಪಯೋಗಿಸದಿದ್ದಲ್ಲಿ ಅಥವಾ ಸೈನ್ ಇನ್ ಮಾಡದಿದ್ದಲ್ಲಿ ನಾವು ಖಾತೆ ಮತ್ತು ಅದರ ಕಂಟೆಂಟ್ ಅನ್ನು ಡಿಲೀಟ್ ಮಾಡಬೇಕಾಗುತ್ತದೆ ಎಂದು ಮೇ ತಿಂಗಳಿನಲ್ಲಿ ಗೂಗಲ್ ನ ಪ್ರಾಡಕ್ಟ್ ಮ್ಯಾನೇಜ್ ಮೆಂಟ್ ರುಚ್ ಕ್ರಿಚೇಲಿ ಬ್ಲಾಗ್ ಪೋಸ್ಟ್ ನಲ್ಲಿ ಉಲ್ಲೇಖಿಸಿದೆ, ಅದರಂತೆ ಎರಡು ವರ್ಷಗಳ ಕಾಲ ಬಳಕೆ ಮಾಡದಿರುವ ನಿಷ್ಕ್ರಿಯ ಖಾತೆಗಳನ್ನು ಡಿಲೀಟ್ ಮಾಡಲು ಗೂಗಲ್ ನಿರ್ಧರಿಸಿದೆ.
ಇದರಲ್ಲಿ ಜಿ ಮೇಲ್, ಡಾಕ್ಯುಮೆಂಟ್, ಡ್ರೈವ್, ಮೀಟ್, ಕ್ಯಾಲೆಂಡರ್ ಮತ್ತು ಗೂಗಲ್ ಫೋಟೊಸ್ ಕೂಡಾ ಸೇರಿದೆ ಎಂದು ತಿಳಿಸಿದ್ದರು. 2023ರ ಡಿಸೆಂಬರ್ ನಲ್ಲಿ ಕನಿಷ್ಠ ಎರಡು ವರ್ಷಗಳಿಂದ ಬಳಕೆ ಮಾಡದಿರುವ ಜಿ ಮೇಲ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇದರಿಂದಾಗಿ ಲಕ್ಷಾಂತರ ಜಿ ಮೇಲ್ ಖಾತೆಗಳು ರದ್ದಾಗುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ.
ಕೆಲವು ಆಯ್ದ ಸಂಸ್ಥೆಗಳ Gmail ರದ್ದಾಗುವುದಿಲ್ಲ
Gmail ರದ್ದು ಮಾಡುವ ನಿಯಮ ಶಾಲೆ, ಉದ್ಯಮದಂತಹ ಸಂಘ, ಸಂಸ್ಥೆಗಳ Gmail ಖಾತೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವರದಿ ತಿಳಿಸಿದೆ. ನಮ್ಮ ಆಂತರಿಕ ಅಂಕಿಅಂಶದ ಪ್ರಕಾರ, ಅಂದಾಜು 10 ಲಕ್ಷ ನಿಷ್ಕ್ರಿಯ ಖಾತೆಗಳಿವೆ. ಆದರೆ ಜಿ ಮೇಲ್ ವೈಯಕ್ತಿಕ ಖಾತೆಗಳನ್ನು ಮಾತ್ರ ರದ್ದು ಮಾಡಲಾಗುತ್ತಿದೆ ಎನ್ನಲಾಗಿದೆ.