Kantara Movie: ವಿಶೇಷ ಸಾಧನೆ ಮಾಡಿದ ಕಾಂತಾರ ಚಿತ್ರದ ಫಸ್ಟ್ ಲುಕ್, ಗೂಗಲ್ ಕೂಡ ಮೆಚ್ಚುಗೆ ಹೊರಹಾಕಿದೆ.

ಕನ್ನಡ ಚಿತ್ರದ ಕುರಿತು ಪಸ್ಟ್ ರಿಯಾಕ್ಟ್ ಮಾಡಿದ ಗೂಗಲ್.

Google India Tweet About Kantara Movie: ಈಗ ಸದ್ಯಕ್ಕೆ ಎಲ್ಲಾ ಕಡೆ ಕಾಂತಾರ (Kaa ಸಿನಿಮಾದ್ದೇ ಸುದ್ದಿ ಯಾಕೆಂದರೆ ನವೆಂಬರ್‌ 27 ಚಾಪ್ಟರ್‌ ಒಂದರ ಮುಹೂರ್ತ ಆಚರಿಸಿಕೊಂಡ ಕಾಂತಾರ ಚಿತ್ರತಂಡ ವಿಶೇಷ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆ ಮಾಡುವ ಮೂಲಕ ಕಾಂತಾರ ಪ್ರೀಕ್ವೆಲ್‌ ಮೇಲೆ ವೀಕ್ಷರಿಗಿದ್ದ ನಿರೀಕ್ಷೆಯನ್ನು ದುಪ್ಪಟ್ಟಾಗುವಂತೆ ಮಾಡಿದೆ.

ಮೊದಲು ಕಾಂತಾರ ಸಿನಿಮಾ ನೋಡಿದವರು ಇದೆಂಥ ಲುಕ್ ಎಂದು ಅಚ್ಚರಿ ಪಟ್ಟಿದ್ದರು, ಈಗ ಫಸ್ಟ್‌ಲುಕ್‌ ಟೀಸರ್‌ ನೋಡಿದರೆ ಅಬ್ಬಬ್ಬಾ ಎಂದು ಮೈ ಜುಮ್ ಅನ್ನಿಸಿಕೊಂಡಿದ್ದನ್ನು ಕಾಣಬಹುದಾಗಿದೆ. ರಿಷಬ್ ಶೆಟ್ಟಿ ಅಂತಾನೆ ಗುರುತು ಸಿಗದಷ್ಟು ವಿಶೇಷ ಲುಕ್ ನಲ್ಲಿ ಈ ಫೋಟೋ ನೋಡಿದ್ದು, ಅಭಿಮಾನಿಗಳ ಜೊತೆ ಗೂಗಲ್ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.

Google India Tweet About Kantara Movie
Image Credit: Jagran

ದೈವಗಳ ಬಗ್ಗೆ ಅರಿವು ಮೂಡಿಸಿದ ಸಿನಿಮಾ

ಕರಾವಳಿ ಭಾಗದ ನಂಬಿಕೆಯೇ ದೈವಾರಾಧನೆ, ಭೂತಕೋಲ ಆಗಿದ್ದು, ಅವುಗಳ ಮಹತ್ವವನ್ನು ವಿಶ್ವದಾದ್ಯಂತ ತೋರಿಸಿಕೊಟ್ಟ ಕಾಂತಾರ ಸಿನಿಮಾ ಇನ್ನಷ್ಟು ವಿಶೇಶ ಕಥೆಯೊಂದಿಗೆ ಮತ್ತೆ ಬರಲು ಸಿದ್ದವಾಗಿದ್ದು, ಕಾಂತಾರ 2ನಲ್ಲಿ ನಿರ್ದೇಶಕ ರಿಷಬ್‌ ಶೆಟ್ಟಿ ಇಡೀ ದೇಶದ ಜನತೆಯ ಮನಸ್ಸನ್ನು ಗೆದ್ದಿದ್ದರು.ಈ ಬೃಹತ್ ಗೆಲುವಿನ ಬೆನ್ನಲ್ಲೇ ರಿಷಬ್‌ ಶೆಟ್ಟಿ ಕಾಂತಾರ ಮೊದಲ ಭಾಗವನ್ನು ಘೋಷಿಸಿ ಭೂತಾರಾಧನೆ, ಪಂಜುರ್ಲಿ ಹಾಗೂ ಗುಳಿಗ ದೇವರುಗಳ ಇತಿಹಾಸವನ್ನು ಬಿಚ್ಚಿಡಲು ಮುಂದಾಗಿದ್ದಾರೆ.

ವೋಹ್‌….. ಎಂದು ಕೂಗಬೇಕೆನಿಸುತ್ತಿದೆ” ಎಂದ ಗೂಗಲ್‌ ಇಂಡಿಯಾ

“2024 ಮತ್ತಷ್ಟು ಕಾತರತೆಯನ್ನು ಪಡೆದುಕೊಂಡಿದೆ. ಈಗ ತಾನೇ ಕಾಂತಾರ ಫಸ್ಟ್‌ಲುಕ್‌ ಟೀಸರ್‌ ನೋಡಿದೆ ಹಾಗೂ ವೋಹ್‌….. ಎಂದು ಕೂಗಬೇಕೆನಿಸುತ್ತಿದೆ” ಎಂದು ಗೂಗಲ್‌ ಇಂಡಿಯಾ ಬರೆದುಕೊಂಡಿದೆ. ಕನ್ನಡ ಚಿತ್ರವೊಂದರ ಬಗ್ಗೆ ಗೂಗಲ್‌ ಈ ರೀತಿಯ ಟ್ವೀಟ್‌ ಮಾಡಿರುವುದನ್ನು ಕಂಡು ಕನ್ನಡಿಗರು ಹಾಗೂ ಕಾಂತಾರ ಚಿತ್ರತಂಡ ಸಂತಸ ವ್ಯಕ್ತಪಡಿಸಿದ್ದಾರೆ ಈ ಬಾರಿ ದೊಡ್ಡ ಬಜೆಟ್‌ನೊಂದಿಗೆ ಚಿತ್ರವನ್ನು ಆರಂಭಿಸಿರುವ ಚಿತ್ರತಂಡ ಈ ಫಸ್ಟ್‌ಲುಕ್‌ ಟೀಸರ್‌ ಮೂಲಕ ದೇಶವ್ಯಾಪಿ ಸದ್ದು ಮಾಡಿದೆ. ಈ ಸದ್ದು ಎಷ್ಟರ ಮಟ್ಟಿಗೆ ಇದೆ ಎಂದರೆ ಗೂಗಲ್‌ ಇಂಡಿಯಾ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಕಾಂತಾರ ಅಧ್ಯಾಯ 1ರ ಬಿಡುಗಡೆ ದಿನಾಂಕದ ಫೋಟೊವನ್ನು ಹಂಚಿಕೊಂಡು ಫಸ್ಟ್‌ಲುಕ್‌ ಬಗ್ಗೆ ಬರೆದುಕೊಂಡಿದೆ.

Leave A Reply

Your email address will not be published.