Pixel 7: ಗೂಗಲ್ ಪಿಕ್ಸೆಲ್ ಖರೀದಿಸುವವರಿಗೆ ಬಂಪರ್ ಆಫರ್, ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಣೆ.
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಸೇಲ್ನಲ್ಲಿGoogle Pixel 7 ಸ್ಮಾರ್ಟ್ ಫೋನ್ ಅನ್ನು ರಿಯಾಯಿತಿ ಬೆಲೆಯಲ್ಲಿ ಖರೀದಿಸಿ
Google Pixel 7 Flipkart Offer: ದೀಪಾವಳಿಗೆ FlipKart Big Billion Days sale ಆರಂಭಿಸಿದ್ದು, Google Pixel 7 ಅತ್ಯಂತ ಕಡಿಮೆ ಬೆಲೆ ಮಾರಾಟವಾಗುತ್ತಿದೆ. Google Pixel 8 ಮೊಬೈಲ್ ಸದ್ಯದಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಈ ಹಿನ್ನೆಲೆಯಲ್ಲಿ ಗೂಗಲ್ ಫಿಕ್ಸೆಲ್ 7 ಪ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ (Flipkart Big Billion Day Sale) ಬಾರೀ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. Google Pixel ಈಗಾಗಲೇ ಹಲವು ಮಾದರಿಯ ಪೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಬಾರಿ ರಿಯಾಯಿತಿ ದರದಲ್ಲಿ ಗೂಗಲ್ ಫಿಕ್ಸೆಲ್ 7
ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ನಲ್ಲಿ ಪಿಕ್ಸೆಲ್ 7 ಖರೀದಿಸುವ ಗ್ರಾಹಕರಿಗೆ ಉತ್ತಮ ಅವಕಾಶವನ್ನು ಒದಗಿಸಲಿದೆ. Google Pixel 7 ಬೆಲೆ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ 36,499 ರೂ.ಗೆ ಇಳಿಯಲಿದೆ. ಅಲ್ಲದೇ ಇನ್ನೂ ಕಡಿಮೆ ಬೆಲೆಯನ್ನು ಘೋಷಣೆ ಮಾಡುವ ಸಾಧ್ಯತೆಯಿದೆ. flipkart ಹಾಗೂ Amazon ಈ ಬಾರಿಯ ದೀಪಾವಳಿಯಲ್ಲಿ ಎಲ್ಲಾ ವಸ್ತುಗಳ ಬೆಲೆಯಲ್ಲಿ ಬಾರೀ ರಿಯಾಯಿತಿ ಘೋಷಣೆ ಮಾಡಿವೆ.
ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಹಲವು ಸ್ಮಾರ್ಟ್ ಫೋನ್ ಗಳ ಮಾರಾಟ
ಗೂಗಲ್ ಫಿಕ್ಸೆಲ್ 7 (Google Pixel 7 ) ಹೊರತುಪಡಿಸಿ, ರೆಡ್ ಮಿ ನೋಟ್ 12 5ಜಿ ( Redmi Note 12 5G), ಐಪೋನ್ 12 (iPhone 12), ಐಪೋನ್ 14 (iPhone 14), ವಿವೋ ಟಿ2 ಪ್ರೋ ( Vivo T2 Pro), ನಥಿಂಗ್ ಫೋನ್ (2)ಗಳು ಕೂಡ ಈ ಬಾರಿ ದೀಪಾವಳಿಯ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಬಾರೀ ರಿಯಾಯಿತಿ ದರದಲ್ಲಿ ಮಾರಾಟವಾಗಲಿದೆ.

ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್ಫೋನ್ ಬೆಲೆ
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್ಫೋನ್ ರೂ 36,499 ಕ್ಕೆ ಲಭ್ಯವಿರುತ್ತದೆ. ಗೂಗಲ್ ಫಿಕ್ಸೆಲ್ ಬೆಲೆ ಸದ್ಯ 59,999ರೂ. ಇದೆ. ಆದರೆ 5G ಫೋನ್ನ ಪ್ರಸ್ತುತ ಬೆಲೆ ಫ್ಲಿಪ್ಕಾರ್ಟ್ನಲ್ಲಿ ರೂ 41,999 ಆಗಿದೆ.
ಗ್ರಾಹಕರು ಈ ಬಾರಿಯ ಮಾರಾಟದಲ್ಲಿ 5,500 ರೂಪಾಯಿ ವರೆಗೆ ರಿಯಾಯಿತಿ ಪಡೆಯಲಿದ್ದಾರೆ. ಇನ್ನು ಫ್ಲಿಪ್ಕಾರ್ಟ್ ಇದರ ಮೇಲೆ ಫ್ಲಾಟ್ ಡಿಸ್ಕೌಂಟ್ ನೀಡುತ್ತದೆಯೇ ಅಥವಾ ಒಪ್ಪಂದವು ಬ್ಯಾಂಕ್ ಕಾರ್ಡ್ ಕೊಡುಗೆಯನ್ನು ಒಳಗೊಂಡಿರುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಗೂಗಲ್ ಫಿಕ್ಸೆಲ್ ಬೆಲೆ 40,000 ರೂ.ಗಿಂತ ಕಡಿಮೆ ಇರಲಿದೆ ಎಂದು ತಿಳಿದು ಬಂದಿದೆ.