Google Search: ಗೂಗಲ್ ನಲ್ಲಿ ಈ ಮೂರೂ ವಿಷಯ ಹುಡುಕಿದರೆ ಜೈಲಿನಲ್ಲಿ ಕಂಬಿ ಎಣಿಸುವುದು ಖಂಡಿತ, ಕೇಂದ್ರದ ನಿಯಮ.

ಇನ್ನುಮುಂದೆ ಗೂಗಲ್ ನಲ್ಲಿ ಈ ಮೂರೂ ವಿಷಯಗಳನ್ನ ಹುಡುಕಿದರೆ ಜೈಲು ಶಿಕ್ಷೆ ಖಂಡಿತ.

Google Search Rules And Regulations: ಗೂಗಲ್ (Google) ಅನ್ನುವುದು ನಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೂಡುವ ಸಾಧನ ಆಗಿದೆ. ಚಿಕ್ಕ ಮಕ್ಕಳು ಕೂಡ ತಮ್ಮ ಪ್ರಶ್ನೆಗಳಿಗೆ ಇದರಲ್ಲೇ ಉತ್ತರ ಪಡೆಯುತ್ತಿದ್ದಾರೆ. ಏನಾದರೂ ಒಂದು ಸಣ್ಣ ಕುತೂಹಲ, ಅನುಮಾನ ಮೂಡಿದರೆ ಸಾಕು ನಮಗೆ ಮೊದಲು ನೆನಪಿಗೆ ಬರುವುದು ಗೂಗಲ್. ನಮ್ಮ ಎಲ್ಲಾ ಪ್ರಶ್ನೆಗಳಿಗೆ ಗೂಗಲ್ ಉತ್ತರ ಆಗಿದೆ. ಜನರು ಗೂಗಲ್ ನಲ್ಲಿ ಎಲ್ಲಾ ರೀತಿಯ ಮಾಹಿತಿಯನ್ನು ಹುಡುಕಲು ಇದು ಕಾರಣವಾಗಿದೆ.

ಅಷ್ಟೇ ಅಲ್ಲದೆ ನಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವಲ್ಲಿ ಗೂಗಲ್ ಯಶಸ್ವಿ ಆಗಿದೆ. ಆದರೆ ಗೂಗಲ್ ನಲ್ಲಿ ಕೆಲವು ರೀತಿಯ ವಿಷಯವನ್ನು ಹುಡುಕುವುದು ಅಥವಾ ಹಂಚಿಕೊಳ್ಳುವುದು ಅಪರಾಧವಾಗಿದೆ. ಇಂತಹ ಒಂದು ಕಾನೂನು ಕೂಡ ಭಾರತದಲ್ಲಿದೆ ನಾವು ಇದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ . ಈ ಕಾನೂನುಗಳ ಉಲ್ಲಂಘನೆಯು ಜೈಲು ಶಿಕ್ಷೆಗೆ ಕಾರಣವಾಗಬಹುದು.

Google Search Rules
Image Credit: Economictimes

ಗೂಗಲ್ ನಲ್ಲಿ ಭಯೋತ್ಪಾದನೆ ಕುರಿತು ಸರ್ಚ್ ಮಾಡಬೇಡಿ

ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಬಹಳ ಪ್ರಮುಖ ವಿಚಾರ ಇದಾಗಿದೆ. ನಾವು ಯಾವತ್ತಿಗೂ ಕೂಡ ಕುತೂಹಲಕ್ಕಾಗಿಯೂ ಈ ತಪ್ಪನ್ನು ಮಾಡಬಾರದಾಗಿದೆ. ಅದೇನೆಂದರೆ ಭಯೋತ್ಪಾದನೆಗೆ ಸಂಬಂಧಿಸಿದ ಮಾಹಿತಿ ಅಥವಾ ವಿಷಯವನ್ನು ಹುಡುಕುವುದು ಅಥವಾ ಹಂಚಿಕೊಳ್ಳುವುದು. ಈ ಒಂದು ತಪ್ಪು ನಿಮ್ಮನ್ನು ಜೈಲಿಗೆ ತಳ್ಳಬಹುದು ಮತ್ತು ದಂಡವನ್ನು ಪಾವತಿಸಬಹುದು.ಭಯೋತ್ಪಾದನೆಯನ್ನು ಭಾರತದಲ್ಲಿ ಗಂಭೀರ ಅಪರಾಧವೆಂದು ಪರಿಗಣಿಸಲಾಗಿದೆ.

ಬಾಂಬ್ ತಯಾರಿಕೆಯ ಬಗ್ಗೆ ಸರ್ಚ್ ಮಾಡುವಂತಿಲ್ಲ
ಬಾಂಬ್ ತಯಾರಿಕೆ ಬಗ್ಗೆ ನಾವು ಯಾವತ್ತಿಗೂ ಗೂಗಲ್ ನಲ್ಲಿ ಸರ್ಚ್ ಮಾಡಬಾರದು ಯಾಕೆಂದರೆ ನಮಗೆ ಇದು ಅವಶ್ಯಕವಾದ ವಿಚಾರ ಆಗಿರುವುದಿಲ್ಲ. ಭಾರತದಲ್ಲಿ, ಬಾಂಬ್ ತಯಾರಿಸುವ ವಿಧಾನವನ್ನು ಸಹ ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಅಂತಹ ಮಾಹಿತಿ ಅಥವಾ ವಿಷಯವನ್ನು ಹುಡುಕುವುದು ಅಥವಾ ಹಂಚಿಕೊಳ್ಳುವುದು ನಿಮಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.

Google Search Latest Update
Image Credit: Times Now News

ಮಕ್ಕಳ ಅಶ್ಲೀಲತೆಯ ಬಗ್ಗೆ ಪರಿಶೀಲಿಸುವುದು ಕಾನೂನು ಬಾಹಿರ ಅಪರಾಧವಾಗಿದೆ

ಮಕ್ಕಳ ಅಶ್ಲೀಲತೆಯಂತಹ ವಿಚಾರಗಳನ್ನು ನಾವು ಗೂಗಲ್ ನಲ್ಲಿ ಸರ್ಚ್ ಮಾಡಬಾರದು. ಮಕ್ಕಳ ಅಶ್ಲೀಲತೆಯನ್ನು ಭಾರತದಲ್ಲಿ ಗಂಭೀರ ಅಪರಾಧವೆಂದು ಪರಿಗಣಿಸಲಾಗಿದೆ. ಅಂತಹ ವಿಷಯವನ್ನು ಹುಡುಕಿದರೆ ಅಥವಾ ಹಂಚಿಕೊಂಡರೆ ನೀವು ಜೈಲು ಶಿಕ್ಷೆಯೊಂದಿಗೆ ದಂಡವನ್ನು ಪಾವತಿಸಬೇಕಾಗಬಹುದು. ಆದ್ದರಿಂದ ಇಂತಹ ವಿಚಾರಗಳ ಬಗ್ಗೆ ನಾವು ತುಂಬ ಜಾಗರೂಕರಾಗಿರಬೇಕಾಗುತ್ತದೆ.

Leave A Reply

Your email address will not be published.