DA Hike: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್‌, ಸಂಬಳ ಮತ್ತೆ ಇಷ್ಟು ಹೆಚ್ಚಳ.

ಸರ್ಕಾರಿ ನೌಕರರಿಗೆ ಹಾಗು ಪಿಂಚಣಿದಾರರಿಗೆ ಈ ಹಬ್ಬದ ಸೀಸನ್ ನಲ್ಲಿ ಭರ್ಜರಿ ಆಫರ್ ಕೊಡುಗೆ, ವೇತನದಲ್ಲಿ ಬಾರಿ ಹೆಚ್ಚಳ.

Government Employees DA Hike: ಸರ್ಕಾರಿ ಉದ್ಯೋಗಿಗಳಿಗೆ ಹಾಗು ಪಿಂಚಣಿದಾರರಿಗೆ ಸರ್ಕಾರ ಶುಭ ಸುದ್ದಿಯನ್ನು ನೀಡಲಿದೆ. ಉದ್ಯೋಗಿಗಳು ಬಹಳ ಕಾತುರದಿಂದ ಕಾಯುತ್ತಿರುವ ವೇತನ ಹೆಚ್ಚಳ ಬಗ್ಗೆ ಸರ್ಕಾರ ಮಹತ್ವದ ನಿರ್ಧಾರ ಮಾಡಲಿದೆ. ಈಗ ನವರಾತ್ರಿ ಹಬ್ಬ ಪ್ರಾರಂಭ ವಾಗಿದ್ದು ಇನ್ನು ದೀಪಾವಳಿ ಹಬ್ಬ ಬರಲಿದೆ, ಅದರಂತೆ ಸರ್ಕಾರೀ ನೌಕರರ ಮುಖದಲ್ಲಿ ನಗು ಮೂಡುವ ದಿನವೂ ಸದ್ಯದಲ್ಲೇ ಬರಲಿದೆ ಎನ್ನಲಾಗಿದೆ.

ಅದೇನೆಂದರೆ ದಸರಾ, ದೀಪಾವಳಿ ಹಬ್ಬದ ಹೊತ್ತಲ್ಲೇ ಸರಕಾರಿ ನೌಕರರಿಗೆ ಉತ್ತಮ ಸುದ್ದಿ ಸಿಕ್ಕಿದೆ. ಇದೇ ತಿಂಗಳು ಸರಕಾರಿ ನೌಕರರ ವೇತನದಲ್ಲಿ ಬಾರೀ ಏರಿಕೆ ಆಗಲಿದೆ. 7 ನೇ ವೇತನ ಆಯೋಗದ ( 7th Pay Commission) ಅನ್ವಯ 4% ರಷ್ಟು ಡಿಎ (DA Hike) ಹೆಚ್ಚಳವಾಗಲಿದೆ ಇದರಿಂದಾಗಿ ನೌಕರರ ಮಾಸಿಕ ವೇತನವು ಕನಿಷ್ಠ 8,280 ರೂ. ಏರಿಕೆಯಾಗಲಿದೆ.

DA Hike latest Update
Image Credit: Informalnewz

ಶೇ.4 ರಷ್ಟು ತುಟ್ಟಿಭತ್ಯೆ ಯಲ್ಲಿ ಹೆಚ್ಚಳವಾಗುವ ನಿರೀಕ್ಷೆ

ಈಗ ಸದ್ಯಕ್ಕೆ ದೇಶದಲ್ಲಿ 7ನೇ ವೇತನ ಆಯೋಗದ ನಿಯಮಗಳು ಜಾರಿಯಲ್ಲಿವೆ ಇದರಂತೆಯೇ ಈ ಬಾರಿ ಕೇಂದ್ರ ಸರಕಾರಿ ನೌಕರರು, ಪಿಂಚಣಿದಾರರಿಗೆ ತುಟ್ಟಿಭತ್ಯೆಯಲ್ಲಿ ಭಾರೀ ಏರಿಕೆಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಈ ವರದಿಯ ಪ್ರಕಾರ ಕೇಂದ್ರ ಸರಕಾರ ಈ ಬಾರಿ ಶೇ.4 ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಒಂದೊಮ್ಮೆ ಶೇಕಡಾ 4 ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿದ್ರೆ, ಕೇಂದ್ರ ಸರಕಾರಿ ನೌಕರರ ವೇತನದಲ್ಲಿ ಬಾರಿ ಏರಿಕೆಯಾಗುತ್ತಿದೆ. ಪ್ರಸ್ತುತ ತುಟ್ಟಿಭತ್ಯೆಯಲ್ಲಿ ಶೇಕಡಾ 42 ರಿಂದ ಶೇಕಡಾ 46ಕ್ಕೆ ಹೆಚ್ಚಳವಾಗಲಿದೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ.

ತುಟ್ಟಿಭತ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ

ಸಾಮಾನ್ಯವಾಗಿ ಸಾರ್ವಜನಿಕ ವಲಯ ನೌಕರರು ಮತ್ತು ಪಿಂಚಣಿದಾರರಿಗೆ ಸರಕಾರ ನೀಡುವ ಜೀವನ ವೆಚ್ಚವನ್ನು ತುಟ್ಟಿಭತ್ಯೆ ಎಂದು ಕರೆಯುತ್ತಾರೆ. ಇದನ್ನು ಹೊಂದಾಣಿಕೆ ಭತ್ಯೆ ಎಂದು ಪರಿಗಣಿಸಲಾಗುತ್ತದೆ. ಸರಕಾರಿ ನೌಕರರಿಗೆ DA ನೀಡಿದ್ರೆ, ನಿವೃತ್ತ ನೌಕರರಿಗೆ ನೀಡುವ ತುಟ್ಟಿಭತ್ಯೆಯನ್ನು ಡDR ಎಂದು ಕರೆಯಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರ ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ನೀಡುತ್ತವೆ.

Government Employees DA Hike
Image Credit: India

ತುಟ್ಟಿಭತ್ಯೆ ಏರಿಕೆಯಿಂದ ನೌಕರರಿಗೆ ಸಿಗುವ ವೇತನ

ನೌಕರರು ಕಾಯುತ್ತಿರುವ ತುಟ್ಟಿಭತ್ಯೆ ಹೆಚ್ಚಳವಾದರೆ ಶೇ.4 ರಷ್ಟು ಡಿಎ ಹೆಚ್ಚಳದಿಂದ ಸರಕಾರಿ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ ಅನ್ನೋ ಲೆಕ್ಕಾಚಾರವನ್ನು ಹಾಕುವುದಾದ್ರೆ, ಸರಕಾರಿ ನೌಕರನ ಕನಿಷ್ಠ ಮೂಲ ವೇತನ ರೂ 18,000 ಇದ್ದರೆ, ಡಿಎ 42% ಮಾಸಿಕ ರೂ 7,560 ಹೆಚ್ಚಳವನ್ನು ನೀಡುತ್ತದೆ. ಒಂದೊಮ್ಮೆ 46% ರಷ್ಟು ಹೊಸ DA ರಷ್ಟು ಹೆಚ್ಚಳವಾದ್ರೆ ಮಾಸಿಕ ವೇತನದಲ್ಲಿ 8,280 ರೂ.ವರೆಗೆ ಹೆಚ್ಚಳವಾಗುತ್ತದೆ.

56,900 ರೂ.ಗಳ ಗರಿಷ್ಠ ಮೂಲ ವೇತನವನ್ನು ಹೊಂದಿರುವ ಉದ್ಯೋಗಿ ಪ್ರಸ್ತುತ ಡಿಎ 42% ಅವರ ಮಾಸಿಕ ಗಳಿಕೆಗೆ ರೂ 23,898 ನೀಡುತ್ತದೆ, 46% ಗೆ ಡಿಎ ಹೆಚ್ಚಳದ ನಂತರ, ಈ ಮಾಸಿಕ ಹೆಚ್ಚಳವು ರೂ 26,174ರಷ್ಟು ಏರಿಕೆ ಆಗಲಿದೆ. ದೀಪಾವಳಿ ಹಾಗೂ ದಸರಾ ಹಬ್ಬದ ನಡುವಲ್ಲಿ, ಅಂದ್ರೆ ಅಕ್ಟೋಬರ್‌ ತಿಂಗಳಿನಲ್ಲಿಯೇ ಸರಕಾರಿ ನೌಕರರಿಗೆ ಭರ್ಜರಿ ಸುದ್ದಿಯೊಂದು ಸಿಗಲಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸರಕಾರ ಈ ಬಾರಿ ನೌಕರರಿಗೆ ಭರ್ಜರಿ ಗಿಫ್ಟ್‌ ನೀಡಲಿದೆ ಎನ್ನಬಹದು.

Leave A Reply

Your email address will not be published.