ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯಾವುದೇ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕಿದ್ದರೆ ನಿಮ್ಮ ಬಳಿ ರೇಷನ್ ಕಾರ್ಡ್(Ration Card) ಇರಲೇಬೇಕು. ಅದರಲ್ಲೂ ಬಿಪಿಎಲ್ ಕಾರ್ಡ್(BPL Card)ಇದ್ದರೆ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕು. ಈಗಾಗಲೇ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯ ಬದಲು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ.
ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಕೂಡ ಮಹಿಳೆಯರಿಗೆ ಉಚಿತವಾಗಿ ಅವರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ ಇತ್ತೀಚಿಗೆ ರೇಷನ್ ಕಾರ್ಡ್ ವಿಚಾರವಾಗಿ ಸಾಕಷ್ಟು ಗೊಂದಲಗಳು ಏರ್ಪಟ್ಟಿತ್ತು. ಇದಕ್ಕೆಲ್ಲ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿರುವ ಕೆ.ಎಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.

ನಾಲ್ಕು ಚಕ್ರದ ಕಾರು ಹೊಂದಿದ್ದರು ರೇಷನ್ ಕಾರ್ಡ್ ರದ್ದಾಗುವುದಿಲ್ಲ
ವೈಟ್ ಬೋರ್ಡ್ ಇರುವ ನಾಲ್ಕು ಚಕ್ರದ ಕಾರನ್ನು ಹೊಂದಿರುವವರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ತಕ್ಷಣವೇ ಅವರ ಕಾರ್ಡ್ ರದ್ದು ಪಡಿಸುತ್ತಿದೆ ಸರ್ಕಾರ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ತುಂಬಾನೇ ಹಬ್ಬಿತ್ತು. ಆದರೆ ಈಗ ಈ ರೀತಿ ಕಾರ್ ಇದ್ದರೂ ರೇಷನ್ ಕಾರ್ಡ್ ಹೊಂದಿರುವವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಇದರ ಬಗ್ಗೆ ಮಾನ್ಯ ಸಚಿವರಾಗಿರುವ ಕೆಎಚ್ ಮುನಿಯಪ್ಪ ಹಾಸನದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದು ಆ ಸಂದರ್ಭದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ಸ್ಪಷ್ಟ ನೀಡಿದ್ದಾರೆ.
“ಹಿಂದೆ ಬಿಜೆಪಿ ಸರ್ಕಾರ ಇರುವಾಗ ನಾಲ್ಕು ಚಕ್ರದ ವಾಹನ ಹೊಂದಿದವರು ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ನಿಯಮ ಜಾರಿಗೆ ತಂದಿತ್ತು. ಆದರೆ ಈಗ ನಾವು ಇದರ ಬಗ್ಗೆ ಯಾವುದೇ ರೀತಿಯ ತೀರ್ಮಾನವನ್ನು ಕೈಗೊಂಡಿಲ್ಲ. ಹಾಗಾಗಿ ಫಲಾನುಭವಿಗಳ ರೇಷನ್ ಕಾರ್ಡ್ ರದ್ದಾಗುವುದಿಲ್ಲ. ಈಗಾಗಲೇ 1.28 ಕೋಟಿ ಜನರು ರೇಷನ್ ಕಾರ್ಡ್ ಹೊಂದಿದ್ದು ಅವರಿಗೆ ಅಕ್ಕಿ ಕೊಡುವ ಬಗ್ಗೆ ನಾವು ಚಿಂತನೆ ನಡೆಸಿದ್ದೇವೆ. ಅರ್ಹರ ರೇಷನ್ ಕಾರ್ಡ್ ಸದ್ಯಕ್ಕೆ ರದ್ದಾಗುವುದಿಲ್ಲ. ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಆಗದೆ ಇರುವುದರಿಂದ ಕೆಲವು ರೇಷನ್ ಕಾರ್ಡ್ ರದ್ದಾಗಿದೆ ಇದರ ಬಗ್ಗೆ ಕೂಡ ಹೆಚ್ಚಿನ ಪರಿಶೀಲನೆ ನಡೆಸಲಾಗುವುದು” ಎಂದು ಮಾನ್ಯ ಸಚಿವರು ತಿಳಿಸಿದ್ದಾರೆ.

ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ
ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರುವಾಗಲೇ ಸುಮಾರು ಎರಡು ಲಕ್ಷ ಪಡಿತರ ಚೀಟಿ ಪಡೆದುಕೊಳ್ಳುವ ಅರ್ಜಿಗಳು ಬಂದು ಸೇರಿದೆ ಆದರೆ ಎಲೆಕ್ಷನ್ ಸಮಯದಲ್ಲಿ ವೆಬ್ ಪೋರ್ಟಲ್ ಅನ್ನು ಸ್ಥಗಿತಗೊಳಿಸಲಾಗಿತ್ತು ಈಗ ಮತ್ತೆ ಮುಂದಿನ ಮೂರು ತಿಂಗಳ ಒಳಗೆ ಅರ್ಜಿಗಳನ್ನು ಸಮನಾಗಿ ಪರಿಶೀಲಿಸಿ ಅರ್ಹರಿಗೆ ಬಿಪಿಎಲ್ ಪಡಿತರ ಚೀಟಿ ನೀಡಲಾಗುವುದು ಎಂದು ಹೇಳಿದ್ದಾರೆ. ಜೊತೆಗೆ ಅರ್ಜಿ ಸಲ್ಲಿಸಿರುವವರ ಪೈಕಿ ಎಪಿಎಲ್ ಕಾರ್ಡ್ ಅರ್ಹರು ಕೂಡ ಇದ್ದು ಅವರಿಗೂ ಇನ್ನೂ ಮೂರು ತಿಂಗಳಿನಲ್ಲಿ ಕಾರ್ಡ್ ಸಿಗಲಿದೆ’.
ಈಗಾಗಲೇ 2 ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ಸರ್ಕಾರದ ಬಳಿ ಇರುವುದರಿಂದ ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಸದ್ಯಕ್ಕೆ ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ ಆದರೆ ಹೊಸದಾಗಿ ಯಾಕೆ ಅರ್ಜಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿಲ್ಲ. ಈಗಾಗಲೇ ಅರ್ಜಿ ಸಲ್ಲಿಸಿರುವವರ ರೇಷನ್ ಕಾರ್ಡ್ ಅಂತೂ ಫಲಾನುಭವಿಗಳ ಕೈಗೆ ಸೇರುವ ನಿರೀಕ್ಷೆ ಇದೆ.

ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿ ಒದಗಿಸಲು ಸರ್ಕಾರ ಶತಾಯಗತಾಯ ಪ್ರಯತ್ನ ಮಾಡುತ್ತಿದೆ ಆದರೆ ಅಕ್ಕಿ ಒದಗಿಸಲು ಸಾಧ್ಯವಾಗದೆ ಇರುವ ಕಾರಣ ಈ ತಿಂಗಳಿನಲ್ಲಿ ಮತ್ತೆ ಅಕ್ಕಿಯ ಬದಲು ಹಣ ಹಾಕಲು ಸರ್ಕಾರ ಮುಂದಾಗಿದೆ. ಇದರ ಜೊತೆಗೆ ತಾಂತ್ರಿಕ ದೋಷದಿಂದ ಎಲ್ಲಾ ಮಾಹಿತಿಗಳು ಕೂಡ ಸರಿ ಇದ್ದರೂ ಕೆಲವರಿಗೆ ರೇಷನ್ ಕಾರ್ಡ್ ಗೆ ಬಂದು ಸೇರುವ ಉಚಿತ ಅಕ್ಕಿ ಕೊಡಲಾಗಿಲ್ಲ ಆದರೆ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಜುಲೈ ತಿಂಗಳಿನಲ್ಲಿ ಯಾರಿಗೆಲ್ಲ ಹಣ ಸಿಕ್ಕಿಲ್ಲವೋ ಆ ಹಣವನ್ನು ಕೂಡ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ಕೆಹೆಚ್ ಮುನಿಯಪ್ಪ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಸದ್ಯ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಹಾಕಲು ಅವಕಾಶ ಇಲ್ಲದೆ ಇದ್ದರೂ ಈಗಾಗಲೇ ಅರ್ಜಿ ಸಲ್ಲಿಸುವವರಿಗೆ ರೇಷನ್ ಕಾರ್ಡ್ ಸಿಗಲಿದೆ. ಇನ್ನು ನೀವು ಕೆವೈಸಿ ಮಾಡಿಸಿಕೊಳ್ಳದೆ ಇದ್ದಲ್ಲಿ ಬ್ಯಾಂಕ್ ಖಾತೆ ಹಾಗೂ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರುವುದಿಲ್ಲ ಈ ರೀತಿ ಆದರೆ ಸರ್ಕಾರದ ಯಾವ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಅದರ ಜೊತೆಗೆ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ಅಂತಹ ಬ್ಯಾಂಕ್ ಖಾತೆ ಸ್ಥಗಿತಗೊಳ್ಳಬಹುದು.
ಜೊತೆಗೆ ಬೇರೆ ಯಾವುದೇ ಹಣಕಾಸಿನ ವ್ಯವಹಾರವನ್ನು ಕೂಡ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳುವದಿದ್ದರೆ ಹಾಗೂ ಕೆವೈಸಿ ಮಾಡಿಸಿಕೊಳ್ಳುವುದಿದ್ದರೆ ಈ ತಿಂಗಳ ಕೊನೆಯವರೆಗೆ ಅವಕಾಶ ಇದ್ದು ಗ್ರಾಹಕರು ಕೂಡಲೇ ಈ ಕೆಲಸವನ್ನು ಮಾಡಿಕೊಳ್ಳಬೇಕು. ಎಂದು ಸಚಿವರು ತಿಳಿಸಿದ್ದಾರೆ.