Gram Panchayat: ಇನ್ಮುಂದೆ ಗ್ರಾ.ಪಂ ನ ಬಾಪೂಜಿ ಸೇವಾ ಕೇಂದ್ರದಲ್ಲೇ ಸಿಗುತ್ತೆ ಈ ಎಲ್ಲಾ ಸೇವೆ.

ಗ್ರಾಮೀಣ ಜನರಿಗೆ ಅವಶ್ಯಕವಿರುವ ಮುಖ್ಯ ದಾಖಲೆಗಳು ಇನ್ನು ಮುಂದೆ ಬಾಪೂಜಿ ಸೇವಾ ಕೇಂದ್ರದಲ್ಲಿ ಸಿಗುತ್ತದೆ

Gram Panchayat Facility: ಸಾರ್ವಜನಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಸರ್ಕಾರ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದೇನೆಂದರೆ ಗ್ರಾಮೀಣ ಪ್ರದೇಶದ ಜನರಿಗೆ ಗ್ರಾಮ ಪಂಚಾಯಿತಿಯ ಅಟಲ್ ಜೀ ಜನಸ್ನೇಹಿ ಕೇಂದ್ರ/ನಾಡಕಛೇರಿ ಗಳಲ್ಲಿ ಹಲವು ಕೆಲಸಗಳನ್ನು ಪೂರೈಸಿ ಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಕಂದಾಯ ಇಲಾಖೆಯ ಅಟಲ್ಜೀ ಜನಸ್ನೇಹಿ ನಿರ್ದೇಶನಾಲಯದಡಿ ನಾಡಕಛೇರಿಗಳಲ್ಲಿ ಒದಗಿಸಲಾಗುತ್ತಿರುವ 44 ಸೇವೆಗಳನ್ನು ಪಡೆಯಲು ಸಲ್ಲಿಸಲು ಜನರು ಹೋಬಳಿ ಮಟ್ಟದಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರ/ನಾಡಕಛೇರಿಗಳಿಗೆ ಭೇಟಿ ನೀಡಬೇಕಾಗಿರುತ್ತದೆ.

Gram Panchayat Facility
Image Credit: Original Source

ಗ್ರಾಮದ ಪಂಚಾಯಿತಿಯ ಜನಸಂದಣಿ ತಡೆಯುವ ಉದ್ದೇಶ ಇದಾಗಿದೆ

ಪ್ರತಿಯೊಂದು ಹೋಬಳಿಯಲ್ಲಿ ಆರರಿಂದ ಏಳು ಗ್ರಾಮ ಪಂಚಾಯತಿಗಳನ್ನು ಹೊಂದಿರುತ್ತದೆ.ಈ ಎಲ್ಲಾ ಗ್ರಾಮ ಪಂಚಾಯತಿಯ ಸುಮಾರು 20-50 ಸಾವಿರ ಜನರು, ಸರ್ಕಾರಿ ಸೇವೆಗಳನ್ನು ಹೋಬಳಿ ಮಟ್ಟದಲ್ಲೇ ಪಡೆಯಬೇಕಾದುದರಿಂದ ಜನಸಂದಣಿ ಹೆಚ್ಚುವುದರ ಜೊತೆಗೆ ಕೇಂದ್ರದಲ್ಲಿ ತ್ವರಿತ ಗತಿಯಲ್ಲಿ ಸೇವೆಯನ್ನು ಒದಗಿಸುವುದಕ್ಕೆ ತೊಡಕಾಗುತ್ತಿತ್ತು. ಜೊತೆಗೆ ಸಾರ್ವಜನಿಕರು ಸೇವೆಗಳನ್ನು ಪಡೆಯಲು ಸಾಕಷ್ಟು ದೂರ ಕ್ರಮಿಸಬೇಕಾದುದರಿಂದ ಸಾಕಷ್ಟು ಹಣ ವ್ಯಯಿಸಬೇಕಾಗುತ್ತಿತ್ತು.

ಇನ್ನು ಮುಂದೆ ಪ್ರಮುಖ ಸೇವೆಗಳು ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒದಗುತ್ತದೆ

ಗ್ರಾಮೀಣ ಜನತೆ ತಮಗೆ ಅವಶ್ಯವಿರುವ ಅಟಲ್ಜೀ ಜನಸ್ನೇಹಿ ನಿರ್ದೇಶನಾಲಯದಡಿ ಬರುವ “ಆದಾಯ ಪ್ರಮಾಣ ಪತ್ರ”, “ಜಾತಿ ಮತ್ತು ಆದಾಯ ಪ್ರಮಾಣ ಪತ್ರ” “ವಾಸ ಸ್ಥಳ ಪ್ರಮಾಣ ಪತ್ರ’ಗಳಂತಹ ಪ್ರಮುಖ ಸೇವೆಗಳನ್ನು ಮತ್ತಷ್ಟು ದಕ್ಷ ಹಾಗೂ ತ್ವರಿತ ರೀತಿಯಲ್ಲಿ ಗ್ರಾಮ ಪಂಚಾಯತಿಯಲ್ಲೇ ಪಡೆದುಕೊಳ್ಳುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒದಗಿಸಲು ಸರ್ಕಾರವು ನಿರ್ಧರಿಸಿದೆ.

 Karnataka gram panchayth updates
Image Credit: Original Source

ಆದುದರಿಂದ, ಪಂಚತಂತ್ರ 2.0 ತಂತ್ರಾಂಶವನ್ನು ನಾಡಕಛೇರಿ ತಂತ್ರಾಂಶದೊಂದಿಗೆ ಸಂಯೋಜನೆ ಮಾಡಲಾಗಿದೆ. ಸಾರ್ವಜನಿಕರು ಇನ್ನೂ ಮುಂದೆ ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯದಡಿ ಬರುವ “ಆದಾಯ ಪ್ರಮಾಣ ಪತ್ರ”, “ಜಾತಿ ಮತ್ತು ಆದಾಯ ಪ್ರಮಾಣ ಪತ್ರ” “ವಾಸ ಸ್ಥಳ ಪ್ರಮಾಣ ಪತ್ರ” ಗಳಂತ ಪ್ರಮುಖ ಸೇವೆಗಳನ್ನು ಮತ್ತು ಇನ್ನೂ ಮುಂತಾದ 44 ಅಟಲ್ ಜೀ ಜನಸ್ನೇಹಿ ಕೇಂದ್ರಗಳ (ನಾಡಕಛೇರಿ) ಸೇವೆಗಳಿಗೆ ಅರ್ಜಿ ಸಲ್ಲಿಸಿ, ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೇ ಸೇವೆಗಳನ್ನು ಪಡೆಯಬಹುದಾಗಿದೆ. ಉಲ್ಲೇಖಿತ ಆದೇಶರಂತೆ, ಅನುಬಂಧ-1 ರಲ್ಲಿ ತಿಳಿಸಲಾಗಿರುವ ಅರ್ಜಿ ಶುಲ್ಕವನ್ನು ಪಡೆಯಲು ಆದೇಶಿಸಿದೆ.

Leave A Reply

Your email address will not be published.