Gruha Arogya: ರಾಜ್ಯದ ಎಲ್ಲಾ ಜನರಿಗೆ ಇನ್ನೊಂದು ಗುಡ್ ನ್ಯೂಸ್, 6 ನೇ ಗ್ಯಾರೆಂಟಿ ಘೋಷಣೆ ಮಾಡಿದ ಸಿದ್ದರಾಮಯ್ಯ.

ರಾಜ್ಯ ಸರ್ಕಾರದಿಂದ ರಾಜ್ಯದ ಜನರಿಗೆ ಉತ್ತಮ ಯೋಜನೆ ಜಾರಿಗೆ ಬರಲಿದೆ.

Gruha Arogya Scheme In Karnataka: CM ಸಿದ್ದರಾಮಯ್ಯ (Siddaramaiah) ಸರ್ಕಾರ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಯು ಬಡ ಕುಟುಂಬಗಳ ಅನುಕೂಲಕ್ಕಾಗಿಯೇ ಜಾರಿಗೆ ತಂದಿದ್ದಾಗಿರುತ್ತದೆ.

ಇತ್ತೀಚಿಗೆ ಜಾರಿ ಬಂದ 05 ಯೋಜನೆಗಳು ಸಹ ಆ ನಿಟ್ಟಿನಲ್ಲಿ ಜಾರಿತಂದಿದ್ದು ಬಡವರಿಗೆ ಸಹಕಾರಿಯಾಗಿದೆ. ಹಾಗೆಯೆ ಇನ್ನೊಂದು ಯೋಜನೆ ಸರ್ಕಾರ ಹೊರಡಿಸಿದೆ. ಆ ಯೋಜನೆಯ ಕುರಿತು ಮಾಹಿತಿ ಪಡೆಯಿರಿ.

Gruha Arogya Scheme In Karnataka
Image Credit: Other Source

ಗೃಹ ಆರೋಗ್ಯ ಯೋಜನೆಯ ಮಾಹಿತಿ

ರಾಜ್ಯ ಸರ್ಕಾರದಿಂದ ಜನರ ಆರೋಗ್ಯ ಸಮಸ್ಯೆ ನಿವಾರಣೆಗೆ ಮಹತ್ವದ ಹೆಜ್ಜೆ ಇರಿಸಲಾಗಿದೆ. ಇದಕ್ಕಾಗಿ ಗೃಹ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಆಯ್ದ ಸಮಸ್ಯೆಗಳಿಗೆ ಉಚಿತ ಔಷಧ ನೀಡಲಾಗುತ್ತದೆ. ಶೀಘ್ರವೇ ಈ ಸಂಬಂಧ ರಾಜ್ಯದ ಪ್ರತಿಯೊಬ್ಬರ ಮನೆ ಬಾಗಿಲಿಗೆ ಆರೋಗ್ಯ ಸಿಬ್ಬಂದಿ ಬರಲಿದ್ದಾರೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಹೃದಯಾಘಾತ, ಕಿಡ್ನಿ, ಕ್ಯಾನ್ಸರ್ ಕಾಯಿಲೆಗಳಿಗೆ ತುತ್ತಾಗುತ್ತಿರುವವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ‘ಗೃಹ ಆರೋಗ್ಯ ಯೋಜನೆ’ಯನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ಜಾರಿಗೊಳಿಸಲಿದೆ ಎಂದಿದೆ.

Gruha Arogya Scheme latest update
Image Credit: Krishijagran

ಗೃಹ ಆರೋಗ್ಯ ಯೋಜನೆಯ ಉದ್ದೇಶ

ರಾಜ್ಯದ ಪ್ರತಿಯೊಬ್ಬರ ಮನೆ ಬಾಗಿಲಿಗೆ ಆರೋಗ್ಯ ಸಿಬ್ಬಂದಿಗಳನ್ನು ಕಳುಹಿಸಿ ಆರೋಗ್ಯ ತಪಾಸಣೆ, ಅರಿವು ಮೂಡಿಸುವುದು ಹಾಗೂ ಆಯ್ದ ಸಮಸ್ಯೆಗಳಿಗೆ ಉಚಿತವಾಗಿ ಔಷಧ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎನ್ನಲಾಗಿದೆ. ಈ ಯೋಜನೆಯು ಆರೋಗ್ಯ ಸಮಸ್ಯೆ ಇರುವ ಬಡ ಕುಟುಂಬಗಳಿಗೆ ಬಹಳ ಉಪಯೋಗವಾಗಲಿದೆ.

Leave A Reply

Your email address will not be published.