Gruha Lakshmi: ಗೃಹಲಕ್ಷ್ಮಿ ಹಣ ಇನ್ನು ಖಾತೆಗೆ ಬಂದಿಲ್ವ…? ಮನೆಯ ಯಜಮಾನಿಯರು ತಪ್ಪದೆ ಈ ಕೆಲಸ ಮಾಡಿ.

ಗೃಹಲಕ್ಷ್ಮಿ ಹಣ ಖಾತೆಗೆ ಬರಬೇಕಾದರೆ ಈ ಕೆಲಸ ತಪ್ಪದೆ ಮಾಡಿ.

Congress Government Gruha Lakshmi Scheme: ರಾಜ್ಯ ಸರ್ಕಾರದ ಹಲವು ಯೋಜನೆಯಡಿ ‘ಗೃಹಲಕ್ಷ್ಮಿ’ (Gruha Lakshmi) ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ಮನೆ ಯಜಮಾನಿಗೆ 2000 ರೂ ನೀಡುದಾಗಿ ಸರ್ಕಾರ ಆದೇಶ ಹೊರಡಿಸಿದ್ದು, ಅದರ ಸಲುವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಅವಧಿಗಾಗಿ ಸರ್ಕಾರ ಮೊದಲ ಕಂತಿನ ಹಣ ಬಿಡುಗಡೆ ಮಾಡಿದೆ.ಆದರೆ ಇನ್ನೂ ಕೆಲವರಿಗೆ ಆಗಸ್ಟ್ ತಿಂಗಳ ಹಣ ಕೂಡ ಬಂದಿಲ್ಲ. ಹಾಗಾದರೆ ಇದಕ್ಕೆ ಏನು ಕಾರಣ ತಿಳಿಯಿರಿ.

Congress Government Gruha Lakshmi Scheme
Image Credit: Hindustantimes

ಈ ರೀತಿಯ ಪ್ರಕ್ರಿಯೆಯಿಂದ ನಿಮಗೂ ಗೃಹಲಕ್ಷ್ಮಿ ಹಣ ಬರಬಹುದು

ರೇಷನ್ ಕಾರ್ಡ್ ಸಕ್ರಿಯವಾಗಿದ್ದಾಗ ಮಾತ್ರ ನಿಮಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಿಗಲು ಸಾಧ್ಯ. ಆದ್ದರಿಂದ ನೀವು ಈಗಲೇ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ ..ಅದು ಹೇಗೆ ಮಾಡುವುದು ಎಂಬುದನ್ನು ತಿಳಿಯಿರಿ. ಮೊದಲಿಗೆ www.mahitikanaja.karnataka.gov.in Website ಗೆ ಕ್ಲಿಕ್ ಮಾಡುವ ಮೂಲಕ ಭೇಟಿ ಕೊಡಬಹುದು,ನಂತರ ನಿಮ್ಮ ಪಡಿತರ ಚೀಟಿ ಸಂಖ್ಯೆ ಕೇಳಲಾಗುತ್ತದೆ ಅದನ್ನು ಎಂಟ್ರಿ ಮಾಡಿ ನಿಮ್ಮ ಜಿಲ್ಲೆ ಸೆಲೆಕ್ಟ್ ಮಾಡಿ, ನಂತರ ನಿಮ್ಮ ರೇಷನ್ ಕಾರ್ಡ್ ಕುರಿತ ಸಂಪೂರ್ಣ ಮಾಹಿತಿ ಬರುತ್ತದೆ.

ಇದಾದ ಬಳಿಕ ರೇಷನ್ ಕಾರ್ಡ್ ಸ್ಥಿತಿ ಕೂಡ ಪೇಜ್ ಮೇಲೆ ಕಾಣಿಸುತ್ತದೆ. ಹಾಗೆ ನಿಮ್ಮ ಕುಟುಂಬದಲ್ಲಿರುವ ಎಲ್ಲಾ ಸದಸ್ಯ ಸಂಖ್ಯೆ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಹೆಸರು ಎಲ್ಲಾ ವಿವರ ಕೂಡ ಬರುತ್ತದೆ, ಇದರಲ್ಲಿ ರೇಷನ್ ಕಾರ್ಡ್ ಸ್ಥಿತಿ ಸಕ್ರಿಯ ಉಂಟಾ ಅಥವಾ ಇಲ್ವಾ ಎಂದು ಧೃಡಪಡಿಸಿಕೊಳ್ಳಿ.

gruha lakshmi scheme latest update
Image Credit: Oneindia

ಆಧಾರ್ ಕಾರ್ಡ್ ನಂಬರ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೇ ತಿಳಿಯಿರಿ

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎನ್ನುವುದನ್ನು ದೃಢಪಡಿಸಿಕೊಳ್ಳಿ. ಆಧಾರ್ ಲಿಂಕ್ ಮಾತ್ರವಲ್ಲ ಸೀಡಿಂಗ್ ಆಗಿ NPCI ಮ್ಯಾಪಿಂಗ್ ಕೂಡ ಆಗಿರಬೇಕು. ಗೊಂದಲದಲ್ಲಿರುವ ಮಹಿಳೆಯರು 8147500500 ಈ ಸಂಖ್ಯೆಗೆ ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ ಕಳುಹಿಸುವ ಮೂಲಕ ತಮ್ಮ ಅರ್ಜಿ ಸಲ್ಲಿಕೆ ಸ್ಥಿತಿ ಏನಾಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಬ್ಯಾಂಕ್ ಖಾತೆ ರದ್ದಾಗಿರುವ ಕಾರಣದಿಂದ ಅಂತಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ. ಆದ್ದರಿಂದ ಹಣ ಬಾರದ ಮಹಿಳೆಯರು ಕೂಡಲೇ ತಮ್ಮ ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ಬ್ಯಾಂಕ್ ಗೆ ತೆರಳಿ ಈ ಬಗ್ಗೆ ಪರಿಶೀಲನೆ ಮಾಡಿಸಿ.

Leave A Reply

Your email address will not be published.