Gruha Lakshmi Money: ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 6000 ರೂ ಹಣ ಕೊಡಲು ಸರ್ಕಾರ ನಿರ್ಧಾರ, ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ.

ಗೃಹಲಕ್ಷ್ಮಿ ಯೋಜನೆಯ ಹಣ ಸಿಕ್ಕಿಲ್ಲದೆ ಇರುವವರಿಗೆ, ಸರ್ಕಾರದಿಂದ ಸಿಗಲಿದೆ 6000 ರೂ ಹಣ.

Gruha Lakshmi Money Latest Update: ರಾಜ್ಯದಲ್ಲಿ ಗೃಹಲಕ್ಷ್ಮಿಯೋಜನೆಯ ಮಾತುಕತೆಯೇ ಹೆಚ್ಚಾಗಿದೆ. ಯಾಕೆಂದರೆ ಈ ಯೋಜನೆ ಪ್ರಾರಂಭವಾಗಿ 03 ತಿಂಗಳು ಕಳೆಯುತ್ತಾ ಬಂದರು ಇನ್ನು ಹಲವು ಮಹಿಳೆಯರಿಗೆ ಈ ಹಣ ಸಿಕ್ಕಿಲ್ಲಾ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ ಅರ್ಹ ಮಹಿಳೆಯರ ಖಾತೆಗೆ ಇನ್ನು ಹಣ ಜಮೆ ಆಗದೆ ಇರುವುದು ಹಲವರ ಗೊಂದಲಕ್ಕೆ ಕಾರಣವಾಗಿದೆ.

ಈ ಹಿಂದೆ ಹಣ ಇನ್ನು ಜಮೆ ಆಗಿಲ್ಲ ಎಂದು ದೂರಿದ ಮಹಿಳೆಯರಿಗೆ ಸರಕಾರ ಮುಂದಿನ ತಿಂಗಳು 02 ಕಂತುಗಳ ಹಣ ಒಟ್ಟಿಗೆ ಜಮೆ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಈಗ ಮೂರನೇ ಕಂತಿನ ಹಣ ಬರುವ ಸಮಯ ಆದರೂ ಇನ್ನು ಒಂದು ಕಂತು ಹಣ ಪಡೆಯದೇ ಇರುವ ಮಹಿಳೆಯರಿದ್ದಾರೆ. ಇಂತಹ ಮಹಿಳೆಯರಿಗೆ ಈಗ ಸರ್ಕಾರ ಇನ್ನೊಂದು ನಿಯಮವನ್ನು ಜಾರಿಗೆ ತಂದಿದೆ.           

Gruha Lakshmi Scheme
Image Credit: News Next                                                 

ತಾಂತ್ರಿಕ ಸಮಸ್ಯೆಯಿಂದ ಗೃಹಲಕ್ಷ್ಮಿ ಹಣ ಇನ್ನು ಜಮೆ ಆಗಿಲ್ಲ

ಗೃಹಲಕ್ಷ್ಮಿ ಹಣ ಇನ್ನು ಕೆಲ ಮಹಿಳೆಯರ ಖಾತೆಗೆ ಜಮೆ ಆಗದೆ ಇರುವ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿರುವ ಸಚಿವೆ ಲಕ್ಷ್ಮಿ ಹೆಬಾಳ್ಕರ್‌ ಅವರು ತಾಂತ್ರಿಕ ಸಮಸ್ಯೆಯಿಂದಾಗಿ ಹಣ ಬರಲು ಸಾಧ್ಯವಾಗುತ್ತಿಲ್ಲ, ಇದಲ್ಲದೇ ಬ್ಯಾಂಕ್‌ ಸಮಸ್ಯೆ ಕೂಡ ತಲೆ ದೂರಿದ್ದು ಈ ನಿಟ್ಟಿನಲ್ಲಿ ಬ್ಯಾಂಕ್‌ ಮುಖ್ಯಸ್ಥರೊಂದಿಗೆ ಮಾತನಾಡಲಾಗುತ್ತಿದೆ. ಇನ್ನೂ ಬೆಂಗಳೂರಿನಲ್ಲಿ ಪ್ರತಿ ದಿನ ಎರಡು ಮೂರು ಜಿಲ್ಲೆಗಳ ಸಿಡಿಪಿಓ ಗಳ ಜೊತೆಗೆ ಸಭೆ ನಡೆಸಲಾಗುತ್ತಿದೆ.

ಈ ನಡುವೆ ಪ್ರತಿ ತಿಂಗಳು 15-20 ನೇ ತಾರೀಕಿನ ಒಳಗೆ ಹಣವನ್ನು ಬಿಡುಗಡೆ ಮಾಡಲಾಗುವುದು ಅಂತ ತಿಳಿಸಿದರು. ಇನ್ನೂ ಫಲಾನುಭವಿಗಳು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಈಡಾಗಬೇಡಿ, ಈ ಬಗ್ಗೆ ಎಲ್ಲಾ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.

Gruha Lakshmi Money Latest Update
Image Credit: Karnatakatimes

ಒಂದೇ ಬಾರಿಗೆ ಮೂರು ತಿಂಗಳ ಹಣ ಜಮೆ ಆಗಲಿದೆ

ಗೃಹಲಕ್ಷ್ಮಿ ಯೋಜನೆಯ ಒಂದು ಕಂತು ಹಣ ಕೂಡ ಸಿಗದ ಮಹಿಳೆಯರಿಗೆ ಮೂರು ತಿಂಗಳ ಹಣ ಒಂದೇ ಬಾರಿ ಜಮಾ ಮಾಡಲಾಗುವುದು ಅಂತ ಸಚಿವೆ ಲಕ್ಷ್ಮಿ ಹೆಬಾಳ್ಕರ್‌ ಅವರು ತಿಳಿಸಿದ್ದಾರೆ. ಆದರೆ ಕೆಲ ಮಹಿಳೆಯರು ನಮಗಿನ್ನೂ ಹಣ ಬರಬಹುದು ಎಂಬ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ ಯಾಕೆಂದರೆ ಮೊದಲ ತಿಂಗಳಿನಿಂದ ಸರ್ಕಾರ ಇದೆ ರೀತಿ ಹೇಳುತ್ತಿದೆ ಆದರೆ ಈ ಯೋಜನೆ ಪ್ರಾರಂಭ ಆಗಿ ಮೂರು ತಿಂಗಳು ಕಳೆದರು ಇನ್ನು ಈ ತಾಂತ್ರಿಕ ಸಮಸ್ಯೆ ಬಗೆಹರಿದಿಲ್ಲ ಎಂದರೆ ನಂಬಲು ಅಸಾಧ್ಯ ಎನ್ನಲಾಗಿದೆ.

Leave A Reply

Your email address will not be published.