Gruha Lakshmi: ಗೃಹ ಲಕ್ಷ್ಮಿ 2000 ರೂ ಪಡೆಯುತ್ತಿರುವ ಮಹಿಳೆಯರಿಗೆ ಎಚ್ಚರಿಕೆ, ಈ ತಪ್ಪು ಮಾಡಿದರೆ ಬ್ಯಾಂಕ್ ಖಾತೆ ಖಾಲಿ.

ಗೃಹ ಲಕ್ಷ್ಮಿ 2000 ರೂ ಪಡೆಯುತ್ತಿರುವ ಮಹಿಳೆಯರಿಗೆ ಎಚ್ಚರಿಕೆ.

Gruha Lakshmi Scheme Fraud In Karnataka: ಇಂದಿನ ಕಾಲದಲ್ಲಿ ಎಷ್ಟು ಜಾಗರೂಕರಾಗಿದ್ದರು ಸಾಲದು ಎನ್ನುವುದಕ್ಕೆ ಇಲ್ಲೊಂದು ಉತ್ತಮ ನಿದರ್ಶನ ಇದೆ. ನಮ್ಮ ಬ್ಯಾಂಕ್ ನಲ್ಲಿ ಇದ್ದ ಹಣ ನಮಗೆ ಗೊತ್ತಿಲ್ಲದೇ ಖಾಲಿ ಆಗುತ್ತಿದೆ ಅಂದರೆ ಏನು ಮಾಡುವುದು ಎಂಬ ಪ್ರಶ್ನೆಗೆ ಉತ್ತರ ಇಲ್ಲ ಅನ್ನಬಹುದು.

ಅಂತಹದೇ ಒಂದು ಘಟನೆ ಕುಂದಗೋಳ (Kundagola) ತಾಲೂಕಿನ ಯರಗುಪ್ಪಿ (Yaraguppi) ಗ್ರಾಮ ದಲ್ಲಿ ನಡೆದಿದೆ. ಮಹಿಳೆಯೊಬ್ಬರ ಖಾತೆಯಯಲ್ಲಿದ್ದ 64 ಸಾವಿರ ರೂಪಾಯಿ ಹಣ ಈ ಮಹಿಳೆಗೂ ಹಾಗು ಬ್ಯಾಂಕ್ ನವರಿಗೂ ಗೊತಿಲ್ಲದೆ ಮಾಯಾ ಆಗಿದೆ. ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ (Gruhalakshmi) ಹಣ ಬಂದಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಹೋದ ಮಹಿಳೆಗೆ ಈ ವಿಚಾರ ಬೆಳಕಿಗೆ ಬಂದಿದೆ.

Gruha Lakshmi Fraud
Image Credit: ETV Bharat

ಬಹಳ ಕಷ್ಟಪಟ್ಟು ಉಳಿತಾಯ ಮಾಡಿದ ಹಣ ಮಾಯಾ

ಕುಂದಗೋಳ ತಾಲೂಕಿನ ಯರಿನಾರಾಯಣಪುರದ ಮಲ್ಲವ್ವ ಮುಳ್ಳಹಳ್ಳಿ ಯವರು ಸುಣ್ಣದ ಕಲ್ಲಿನ ವ್ಯಾಪಾರ ಮಾಡೋ ಜೊತೆಗೆ ಕೂಲಿ ಮಾಡಿ ಹಣ ಸಂಗ್ರಹಿಸಿದ್ದರು. ಮನೆಯಲ್ಲಿ ಹಣ ಇಟ್ಟರೆ ಗಂಡ ಕುಡಿದು ಹಾಳು ಮಾಡುತ್ತಾರೆಂದು ಎಲ್ಲಾ ಉಳಿತಾಯದ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿದ್ದರು. ಮಹಿಳೆಗೆ ಯಾವುದೇ ಒಟಿಪಿ (OTP) ಬಂದಿಲ್ಲ, ಹಣ ವರ್ಗಾವಣೆ ಸಂದೇಶವೂ ಬಂದಿಲ್ಲ. ಆದ್ರೂ ಖಾತೆಯಲ್ಲಿದ್ದ 64 ಸಾವಿರ ರೂಪಾಯಿ ಮಂಗಮಾಯವಾಗಿದೆ ಇದು ಹೇಗೆ ಸಾಧ್ಯ ಎನ್ನುವುದೇ ಪ್ರಶ್ನೆ ಆಗಿದೆ.

ಜಮೀನು ಖರೀದಿ ಮಾಡುವಾಗ ಹೆಬ್ಬೆಟ್ಟು ಒತ್ತಿದ್ದ ಮಹಿಳೆ

ಮಲ್ಲವ್ವ ಮುಳ್ಳಹಳ್ಳಿ ಅವರು ಸ್ಥಳ ಖರೀದಿಗಾಗಿ ಕುಂದಗೋಳದ ನೋಂದಣಿ ಕಛೇರಿಯಲ್ಲಿ ಹೆಬ್ಬಟ್ಟು ಒತ್ತಿದ್ದರು ಎನ್ನಲಾಗಿದೆ. ಅದರ ನಂತರ ಹಂತ ಹಂತವಾಗಿ ಮಹಿಳೆಯ ಖಾತೆಯಿಂದ ಹಣ ವರ್ಗಾವಣೆಯಾಗಿರೋದು ಅಚ್ಚರಿಗೆ ಕಾರಣವಾಗಿದೆ. ಇದೀಗ ಉಳಿತಾಯ ಹಣ 64 ಸಾವಿರ ರೂಪಾಯಿ ಹಾಗು ಗೃಹಲಕ್ಷ್ಮಿ ಯೋಜನೆಯ ಹಣ ಮಾಯವಾಗಿರೋದಕ್ಕೆ ಕಣ್ಣೀರು ಹಾಕಿದ್ದಾರೆ.

Gruha Lakshmi Scheme Fraud
Image Credit: Original Source

ವಂಚಿಸಿ ಹಣ ದೋಚಲಾಗಿದೆ

ಮಹಿಳೆಯ ಖಾತೆಯಲ್ಲಿದ್ದ ರೂಪಾಯಿ 64,000 ಸಾವಿರ ಹಣವನ್ನು ಖದೀಮರು ಏಳು ಬಾರಿ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಅಕ್ರೋಬರ್ 24 ರಿಂದ ನವೆಂಬರ್ 3 ರವರೆಗೆ ಹಣ ವರ್ಗಾವಣೆಯಾಗಿದೆ. ಯಾರು ಮಾಡಿದರು ಹೇಗೆ ಮಾಡಿದರು ಎನ್ನುವುದು ಮಾತ್ರ ತಿಳಿದುಬಂದಿಲ್ಲ. ಬ್ಯಾಂಕ್ ನಲ್ಲಿ ವಿಚಾರಿಸಿದ್ದಾಗ ನಮಗೇನು ಗೊತ್ತಿಲ್ಲ ಎಂದು ಬ್ಯಾಂಕ್ ಸಿಬ್ಬಂದಿಗಳು ಮಹಿಳೆಗೆ ಹೇಳಿದ್ದಾರೆ. ಪಾಪ ಮಹಿಳೆ ತನ್ನ ಎಲ್ಲ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.

ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ

ಮೊದಲು ಸೈಬರ್ ಕ್ರೈಂ ಪೊಲೀಸರ ಮೊರೆ ಹೋದ ಮಹಿಳೆ, ನಂತರ ಕುಂದಗೋಳದಲ್ಲಿ ದೂರು ದಾಖಲಿಸಿದ್ದಾಳೆ. ಕುಂದಗೋಳ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಕುಂದಗೋಳ ತಾಲೂಕಿನಲ್ಲಿ ಇದೇ ಮಾದರಿಯಲ್ಲಿ ಮೂರು-ನಾಲ್ಕು ಪ್ರಕರಣ ಬೆಳಕಿಗೆ ಬಂದಿವೆ. ಇದರ ಹಿಂದೆ ವ್ಯವಸ್ಥಿತ ಜಾಲವಿದ್ದು, ಕೂಡಲೇ ತಪ್ಪಿತಸ್ಥರನ್ನು ಬಂದಿಸುವಂತೆ ರೈತ ಮುಖಂಡ ಶಂಕರಗೌಡ ದೊಡ್ಡಮನಿ ಆಗ್ರಹಿಸಿದ್ದಾರೆ. ಇನ್ನು ಈ ಹಣವನ್ನು ವಂಚಕರು ಹೇಗೆ ಕಬಳಿಸಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಬೇಕಿದೆ.

Leave A Reply

Your email address will not be published.