Gruha Lakshmi: ಈ ಕೆಲಸ ತಕ್ಷಣ ಮಾಡದಿದ್ದರೆ ಖಾತೆಗೆ ಗೃಹಲಕ್ಷ್ಮಿ ಹಣ ಬರಲ್ಲ, ಸರ್ಕಾರದ ಇನ್ನೊಂದು ಆದೇಶ.

ಗ್ರಹಲಕ್ಷ್ಮಿ ಯೋಜನೆಯಡಿ ನಿಮ್ಮ ಖಾತೆಗೆ ಹಣ ಬರಲು ಇಂದೇ ಈ ಕೆಲಸ ಮಾಡಿ.

Gruha Lakshmi Scheme Money: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಗ್ರಹಲಕ್ಷ್ಮಿ (Gruha lakshmi) ಯೋಜನೆ ಕೂಡ ಒಂದಾಗಿದೆ. ಆ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಕೆಲವು ಗೊಂದಲಗಳಿಂದ ಕೂಡಿಕೊಂಡಿದೆ. ಕೆಲ ಮಹಿಳೆಯರ ಖಾತೆ ಗೆ ಗ್ರಹಲಕ್ಷ್ಮಿ ಹಣ ಇನ್ನು ಜಮೆ ಆಗಿಲ್ಲವೆಂಬ ಮಾಹಿತಿ ಸಿಕ್ಕಿದೆ. ಇನ್ನು ಹಲವು ಫಲಾನುಭವಿಗಳ ಖಾತೆಗೆ 2,000 ರೂ. ಹಣ ವರ್ಗಾವಣೆ ಮಾಡಲಾಗಿದೆ.

ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ ರಾಜ್ಯದ 44.52 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿದೆ. ಆದರೆ ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆ ಲಿಂಕ್ ಆಗದಿರುವ ಖಾತೆಗಳಿಗೆ 2,000 ರೂಪಾಯಿ ಜಮಾ ಆಗಿಲ್ಲ. ಕೂಡಲೇ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.

Gruha Lakshmi Scheme Money
Image Credit: Oneindia

ಗೃಹಲಕ್ಷ್ಮೀ ಹಣ ಬರಬೇಕಾದ್ರೆ ಪಡಿತರ ಚೀಟಿಯನ್ನು ಸರಿ ಮಾಡುವುದು ಮುಖ್ಯ
ಪಡಿತರ ಚೀಟಿಗೆ ಸಂಬಂಧಿಸಿದಂತೆ ಹತ್ತಿರದಲ್ಲಿರುವ ಯಾವುದೇ ಸೇವಾಕೇಂದ್ರ ಅಥವಾ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ದಾಖಲೆಯನ್ನು ಕೊಟ್ಟು ನಿಮ್ಮ ಪಡಿತರ ಚೀಟಿ ತಿದ್ದುಪಡಿ ಮಾಡಿಸಿಕೊಳ್ಳಿ./ ನಿಮ್ಮ ರೇಷನ್ ಕಾರ್ಡ್ ಗೆ KYC ಅಪ್ಡೇಟ್ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಿ. ಆಗದೇ ಇದ್ದಲ್ಲಿ ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗುವ ಮೂಲಕ KYC ಅಪ್ಡೇಟ್ ಮಾಡಿಸಿಕೊಳ್ಳಿ.

ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ
ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಮಾಹಿತಿಯಲ್ಲಿ ತಿದ್ದುಪಡಿ, ತೊಂದರೆ ಇದ್ದರೆ ಸರಿ ಮಾಡಿಸಿ ಆಧಾರ್ ಕಾರ್ಡ್ ಲಿಂಕ್, NPCI ಮ್ಯಾಪಿಂಗ್ ಮಾಡಿಸಿದರೆ ಮುಂದಿನ ತಿಂಗಳಿನಿಂದ 2000 ರೂ ಪಡೆಯಬಹುದು.

Gruha Lakshmi Scheme latest update
Image Credit: News9live

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ NPCI ಮ್ಯಾಪಿಂಗ್ ಆಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ, ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ. ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ನಲ್ಲಿರುವ ಮಾಹಿತಿ ಹೊಂದಾಣಿಕೆ ಆಗಿದೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಿ, ಇಲ್ಲವಾದಲ್ಲಿ ಇದನ್ನು ತಿದ್ದುಪಡಿ ಕೂಡ ಮಾಡಿಸಬೇಕು.

ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಅವಕಾಶ

ಇದುವರೆಗೆ ಅರ್ಜಿ ಸಲ್ಲಿಸದವರು ಹಾಗೂ ತಾಂತ್ರಿಕ ತೊಂದರೆಯಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವವರು ಎಲ್ಲವನ್ನು ಸರಿಮಾಡಿಕೊಂಡು ಅರ್ಜಿ ಸಲ್ಲಿಸಿದರೆ ಸೆಪ್ಟೆಂಬರ್ ನಿಂದ ಹಣ ಪಡೆಯಬಹುದು. ಈ ಎಲ್ಲ ಕೆಲಸಗಳನ್ನು ಸರಿಯಾಗಿ ಮಾಡಿದರೆ ಗ್ರಹಲಕ್ಷ್ಮಿ ಯೋಜನೆಯ ಪಲಾನುಭವಿಗಳಾಗಲು ಸಾಧ್ಯ ಇದೆ ಎಂದು ರಾಜ್ಯ ಸರ್ಕಾರ ಮಾಹಿತಿ ಘೋಷಿಸಿದೆ. ಈ ಕೆಲಸ ಮಾಡದಿದ್ದರೆ ಗ್ರಹಲಕ್ಷ್ಮಿ ಯೋಜನೆಯಡಿ ಯಾವುದೇ ಹಣ ನಿಮ್ಮ ಖಾತೆಗೆ ಬರುವುದಿಲ್ಲ.

Leave A Reply

Your email address will not be published.