Gruha Lakshmi Scheme: ಗೃಹಲಕ್ಷ್ಮಿ ಯೋಜನೆಯ 2 ನೇ ಕಂತಿನ ಹಣ ಬಿಡುಗಡೆ, ನಿಮಗೂ ಬಂದಿದೆಯಾ ಎಂದು ಈ ರೀತಿ ಚೆಕ್ ಮಾಡಿ.
ಮಹಿಳೆಯರೇ ಗೃಹಲಕ್ಷ್ಮಿ ಹಣ ಬಂದಿದೀಯಾ ಎಂದು ಚೆಕ್ ಮಾಡಿಕೊಳ್ಳಿ.
Gruha Lakshmi Scheme Latest Update: ಗೃಹಲಕ್ಷ್ಮಿ ಯೋಜನೆ (Gruha Lakshmi) ಆರಂಭವಾಗಿ 02 ತಿಂಗಳು ಕಳೆದಿದೆ. ಗೃಹಲಕ್ಷ್ಮಿ ಯೋಜನೆಯಡಿ ಕರ್ನಾಟಕದ ಮಹಿಳೆಯರಿಗೆ 2ನೆ ಕಂತಿನ ಹಣ ಬಿಡುಗಡೆ ಆಗಿದ್ದು, ಮೊದಲನೇ ಕಂತಿನ ಹಣವೇ ಕೆಲವರ ಖಾತೆಗೆ ಇನ್ನು ಜಮೆ ಆಗಿಲ್ಲ.
ಹಣ ಜಮೆ ಆಗದೆ ಇರಲು ಕೆಲವು ತಂತ್ರಿಕಾ ದೋಷವು ಕಾರಣ ಎಂದು ಸರಕಾರ ಈಗಾಗಲೇ ಹೇಳಿದೆ. ಆದರೂ ಕೂಡ ಇನ್ನು ಕೆಲವರಿಗೆ ಈ ಯೋಜನೆಯ ಫಲ ಸಿಕ್ಕಿಲ್ಲ ಎನ್ನಲಾಗಿದೆ. ಹಾಗು 2ನೇ ಕಂತಿನ ಹಣ ಜಮೆ ಆಗಿದ್ದು ಆ ಬಗ್ಗೆ ಮಹಿಳೆಯರು ಚೆಕ್ ಮಾಡಿಕೊಳ್ಳುವುದು ಒಳ್ಳೇದು.

ಗೃಹಲಕ್ಷ್ಮಿ ಯೋಜನೆ
ಕರ್ನಾಟಕದಲ್ಲಿ ಈಗಾಗಲೇ ಜಾರಿಗೆ ಬಂದ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದ್ದು. ಈ ಯೋಜನೆಯಡಿ ಕರ್ನಾಟಕದ ಎಲ್ಲ ಮಹಿಳೆಯರಿಗೆ 2000 ಸಾವಿರ ರೂಪಾಯಿ ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದ್ದು. ಈಗಾಗಲೇ 2 ತಿಂಗಳ ಹಣ ಜಮಾ ಆಗಿದೆ. ಈ ಯೋಜನೆಯಡಿ ಪಡಿತರ ಚೀಟಿ ಹೊಂದಿದ ‘ಕುಟುಂಬದ ಯಜಮಾನಿ’ ಎಂದು ಗುರುತಿಸಲ್ಪಟ್ಟ ಮಹಿಳೆಯರಿಗೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಆಗಸ್ಟ್ – 2023 ರಿಂದ ಮಾಹೆಯಾನ 2000 ರೂ.ಗಳನ್ನು ಡಿಬಿಟಿ ಮೂಲಕ ಹಣ ಜಮೆ ಮಾಡಲಾಗುತ್ತಿದೆ.
ಗೃಹಲಕ್ಷ್ಮಿ ಯೋಜನೆಯ 02 ನೇ ಕಂತಿನ ಹಣ ಬಂದಿದೀಯಾ ಎಂದು ಚೆಕ್ ಮಾಡುವ ವಿಧಾನ
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಇ-ಕೆವೈಸಿ ಅಪ್ಡೇಟ್ ಮಾಡಿಸಲು ಸೂಚನೆ ನೀಡಲಾಗಿದೆ. ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಅಂತ ಈ ರೀತಿ ಪರಿಶೀಲಿಸಿಕೊಳ್ಳಿ..
ಗೃಹಲಕ್ಷ್ಮಿ ಮೊತ್ತವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಮೊದಲು ಅಧಿಕೃತ ವೆಬ್ಸೈಟ್ಗೆ https://ahara.kar.nic.in/ಗೆ ಭೇಟಿ ನೀಡಬೇಕು, ಈಗ ಮುಖ್ಯ ಪುಟದಲ್ಲಿ ಮೊತ್ತ ಸ್ಥಿತಿ ಆಯ್ಕೆಗೆ ಹೋಗಬೇಕು, ನಂತರ ನಿಮ್ಮ ಪಡಿತರ ಚೀಟಿಯಲ್ಲಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಗೃಹಲಕ್ಷ್ಮಿ ಮೊತ್ತದ ಸಂಪೂರ್ಣ ಮಾಹಿತಿ ಈಗ ನಿಮ್ಮ ಮುಂದೆ ಕಾಣಿಸುತ್ತದೆ. ನೀವು ಇದನ್ನು ತ್ವರಿತವಾಗಿ ಪರಿಶೀಲಿಸಬಹುದು.

ಮೊಬೈಲ್ ಸಂಖ್ಯೆಗೆ ಸಂದೇಶ ಬಂದಿರುತ್ತದೆ
ಗೃಹಲಕ್ಷ್ಮಿ ಯೋಜನೆಯಡಿ ಹಣ ಜಮೆ ಆದರೆ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರಿಗೆ ಸಂದೇಶ ಬರುತ್ತದೆ. ಸಂದೇಶ ಬಂದವರ ಖಾತೆಗೆ ರಾಜ್ಯ ಸರ್ಕಾರದಿಂದ ಅರ್ಹ ಫಲಾನುಭವಿ ಯಜಮಾನಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ ಎಂದು ಖಚಿತ ಆಗುತ್ತದೆ. ಅದು ಅಲ್ಲದೆ ಹಣ ಬರದೇ ಇದ್ದರೆ ನಿಮ್ಮ ತಾಲೂಕು ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ತಾಲೂಕು ಆಫೀಸ್ ಗೆ ಭೇಟಿ ನೀಡಿ ನಿಮ್ಮ ಖಾತೆಗೆ ಹಣ ಬರದೇ ಇರುವ ಕಾರಣವನ್ನು ತಿಳಿದು, ಸರಿ ಮಾಡಿಸಿಕೊಳ್ಳ ತಕ್ಕದ್ದು.
ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ
ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇರಲು ಕಾರಣ ಹಾಗು ಏನು ಸಮಸ್ಯೆ ಎಂದು ತಿಳಿಯಲು ಮೊದಲನೇದಾಗಿ https://sevasindhugs.karnataka.gov.in/ ಲಿಂಕ್ ಮೂಲಕ ಭೇಟಿ ನೀಡಿ , ಮುಖಪುಟದಲ್ಲಿ ಗ್ಯಾರಂಟಿ ಯೋಜನೆಗಳ ಹಲವು ಆಪ್ಷನ್ ಇರುತ್ತದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಸೆಲೆಕ್ಟ್ ಮಾಡಿ, ರೇಷನ್ ಕಾರ್ಡ್ ಸಂಖ್ಯೆಯನ್ನು ಕೇಳಲಾಗುತ್ತದೆ.
RD ನಂಬರ್ ಹಾಕಿ ಸಬ್ಮಿಟ್ ನೀಡಿದರೆ ರೇಷನ್ ಕಾರ್ಡ್ ನಂಬರ್ ಫಲಾನುಭವಿಯ ಹೆಸರು ಅರ್ಜಿ ಸ್ಥಿತಿಯ ಸಂಪೂರ್ಣ ಮಾಹಿತಿ ಬರುತ್ತದೆ. ಈ ಮೂಲಕ ನೀವು ತಮ್ಮ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಬಹುದು. ಹಾಗು ಹಣ ಬರದೇ ಇರಲು ಕಾರಣ ತಿಳಿದು ಅದನ್ನು ಸರಿ ಮಾಡಿಸಿಕೊಂಡು ಈ ಯೋಜನೆಯ ಎರಡು ಕಂತಿನ ಹಣ ಪಡೆದುಕೊಳ್ಳತಕ್ಕದ್ದು.