Gruha Lakshmi Money: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರೇ ಬೇಗನೆ ಖಾತೆ ಚೆಕ್ ಮಾಡಿ, ಭಾಕಿ ಇರುವ ಹಣ ಬಿಡುಗಡೆ.

ಗೃಹಲಕ್ಷ್ಮಿ ಯೋಜನೆಯ ಸಂಪೂರ್ಣ ಮೂರೂ ಕಂತಿನ ಹಣ ಜಮೆ ಮಾಡಿದ ರಾಜ್ಯ ಸರ್ಕಾರ, ಮಹಿಳೆಯರೇ ಇಂದೇ ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡಿ

Gruha Lakshmi Scheme Money Credit: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಸರಕಾರಕ್ಕೆ ಬಹಳ ತಲೆನೋವು ನೀಡುತ್ತಿರುವ ಯೋಜನೆ ಆಗಿದೆ. ಯಾಕೆಂದರೆ ಈ ಯೋಜನೆ ಪ್ರಾರಂಭ ಆಗಿ ಮೂರೂ ತಿಂಗಳು ಕಳೆದರು ಕೆಲವು ಅರ್ಹ ಮಹಿಳೆಯರಿಗೆ ಹಣ ಜಮೆ ಆಗಿರಲಿಲ್ಲ. ಆ ಕುರಿತು ತಂತ್ರಿಕ ದೋಷ ಅಥವಾ ಆಧಾರ್ ಲಿಂಕ್ (Aadhar Link) ಸಮಸ್ಯೆ ಎಂದು ಸರಕಾರ ಹೇಳಿದ್ದಾಗಿದ್ದು, ಹಲವು ಮಹಿಳೆಯರು ನಮಗೆ ಹಣ ಬರುವ ಭರವಸೆ ಯನ್ನೇ ಕಳೆದುಕೊಂಡಿದ್ದರು.

ಈ ಕುರಿತು ಸಿಎಂ ಸಿದ್ದರಾಮಯ್ಯ ನವರು ಭಯ ಪಡಬೇಡಿ ನಿಮ್ಮ ಗೃಹಲಕ್ಷ್ಮಿ ಹಣ ನಿಮಗೆ ದೊರೆಯುತ್ತದೆ ಎಂದು ಆಶ್ವಾಸನೆ ನೀಡಿದ್ದರು.ಅಷ್ಟೇ ಅಲ್ಲದೆ ಅಂಗನವಾಡಿ ಸಹಾಯಕಿಯರು ಪ್ರತಿ ಮನೆಗೆ ಹೋಗಿ ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇದ್ದರೆ ಮಹಿಳೆಯರನ್ನು ನೇರವಾಗಿ ಬ್ಯಾಂಕಿಗೆ ಕರೆದುಕೊಂಡು ಹೋಗಿ ತಾವೇ ಸ್ವತಃ ಸಮಸ್ಯೆ ಪರಿಹರಿಸಬೇಕಾಗಿಯೂ ಕೂಡ ಸರ್ಕಾರ ಸೂಚಿಸಿದೆ. ಡಿಸೆಂಬರ್ ವೇಳೆಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಣ ಬರುವ ನಿರೀಕ್ಷೆಯಿದೆ ಎನ್ನಲಾಗಿದೆ.

Gruha Lakshmi Scheme Money Credit
Image Credit: News Next Live

ಗೃಹಲಕ್ಷ್ಮಿ ಯೋಜನೆ ಹಣ ಬಂದಿದೀಯಾ ?

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ 1.10 ಕೋಟಿ ಮಹಿಳೆಯರಿಗೆ 2,000 ರೂ. ನೀಡಲಾಗುತ್ತಿದ್ದು, ಬಾಕಿ ಉಳಿದಿದ್ದ ಫಲಾನುಭವಿಗಳಿಗೆ ಹಣ ಜಮಾ ಆಗಿದೆ ಎನ್ನಲಾಗಿದೆ . ಸರ್ಕಾರ ಯಜಮಾನಿಯರ ಪೆಂಡಿಂಗ್ ಹಣವನ್ನು ಬಿಡುಗಡೆ ಮಾಡಿದ್ದು, ಹಲವರ ಖಾತೆಗೆ ಹಣ ಜಮಾ ಆಗಿದೆ ನಿಮ್ಮ ಬ್ಯಾಂಕ್ ಖಾತೆ ಅಥವಾ ಪೋಸ್ಟ್ ಆಫೀಸ್ ನಲ್ಲಿ ಚೆಕ್ ಮಾಡಿಕೊಳ್ಳಿ. ನಮಗೆ ಎಸ್ ಎಂ ಎಸ್ ಬಂದಿಲ್ಲ..ಹಣ ಬಂದಿರುತ್ತಾ..? ಎಂಬ ಅನುಮಾನವಿದ್ದರೆ..ಅದು ತಾಂತ್ರಿಕ ಸಮಸ್ಯೆಗಳಿಂದ ಎಸ್ ಎಂ ಎಸ್ ಬರದೇ ಇರಬಹುದು.ನೀವು ಬ್ಯಾಂಕ್ ಗೆ ಹೋಗಿ ಖಾತೆ ಪರಿಶೀಲಿಸಿಕೊಳ್ಳಬಹುದು.

Gruha Lakshmi Money
Image Credit: Original Source

ಮೂರೂ ಕಂತಿನ ಹಣ ಜಮೆ ಮಾಡಲಾಗಿದೆ

ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣ ಕೂಡ ಪಡೆಯದ ಮಹಿಳೆಯರಿಗೆ ಮೂರೂ ಕಂತಿನ ಹಣ ರೂಪಾಯಿ 6000 ಗಳನ್ನೂ ಒಮ್ಮೆಲೇ ಮಹಿಳೆಯರ ಖಾತೆಗೆ ಜಮೆ ಮಾಡಲಾಗಿದೆ. ಒಂದೊಮ್ಮೆ ಯಾರ ಖಾತೆಗೆ ಈ ಸಲವೂ ಹಣ ಬಂದಿಲ್ಲವೋ ಅವರು ಒಮ್ಮೆ ಬ್ಯಾಂಕ್ ಗೆ ಹೋಗಿ ವಿಚಾರಿಸತಕ್ಕದು ಎಂದು ಸಿಎಂ ಹೇಳಿದ್ದಾರೆ. ಇನ್ನು ಮುಂದೆ ಪ್ರತಿ ತಿಂಗಳ ಹಣ ಸರಿಯಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

Leave A Reply

Your email address will not be published.