Gruha Lakshmi: ಈ ಕಾರಣಗಳಿಂದ ಇಂತಹ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲ, ತಪ್ಪು ಸರಿಪಡಿಸಿ.

ಗೃಹಲಕ್ಷ್ಮಿ ಯೋಜನೆಯಡಿ ಹಣ ಖಾತೆಗೆ ಜಮಾ ಆಗದೇ ಮಹಿಳೆಯರ ಪರದಾಟ.

Gruha Lakshmi Scheme Money: ಈ ವರ್ಷ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಅಧಿಕಾರಕ್ಕೆ ಬಂದ ನಂತರ ಯೋಜನೆಗಳ ಸುರಿಮಳೆಯೇ ಕರ್ನಾಟಕದಲ್ಲಿ ಸುರಿದಿದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಕೊಡ ಒಂದಾಗಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ದೊರೆತು ಒಂದು ವಾರ ಕಳೆದು ಹೋಗಿದೆ.

ಆದರೆ ಇನ್ನು ಕೂಡ ಹೆಚ್ಚಿನ ಫಲಾನುಭವಿಗಳ ಅಕೌಂಟ್‌ಗೆ ಹಣ ಜಮೆ ಆಗಿಲ್ಲ ಎನ್ನಲಾಗಿದೆ. ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ಜಮೆ ಆಗಿರುವ ಸಂದೇಶ ಬಂದಿದ್ದರೂ ಸಹ ಕೆಲವರಿಗೆ ಬ್ಯಾಂಕ್‌ನಲ್ಲಿ ಹಣ ವಿಥ್‌ಡ್ರಾ ಮಾಡುವುದಕ್ಕೆ ಕೂಡ ಸಮಸ್ಯೆ ಆಗುತ್ತಿದೆ. ಹಣ ಜಮಾ ಆಗದ ಕಾರಣ ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಹಣಕ್ಕಾಗಿ ಪರದಾಟ ಮಾಡುವಂತಾಗಿದೆ ಎಂದು ಹೇಳಬಹುದು.

gruha lakshmi scheme money
Image Credit: Oneindia

ಗೃಹಲಕ್ಷ್ಮಿಯೋಜನೆಯು ಮಹಿಳೆಯರ ಯೋಜನೆಯಾಗಿದೆ
ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಆರ್ಥಿಕ ಸಬಲೀಕರಣ ಕಾರ್ಯಕ್ರಮವಾಗಿದೆ. ಈ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮಾಸಿಕ 2,000ರೂ ಗಳನ್ನು ನೇರವಾಗಿ ಬ್ಯಾಂಕ್‌ ಅಕೌಂಟ್‌ಗೆ ಜಮೆ ಮಾಡಲಾಗುತ್ತದೆ. ಈ ಯೋಜನೆಯನ್ನು ಆಗಸ್ಟ್‌ ತಿಂಗಳಾಂತ್ಯದಲ್ಲಿ ಚಾಲನೆ ನೀಡಲಾಗಿದೆ. ಈಗಾಗಲೇ ಲಕ್ಷಾಂತರ ಫಲಾನುಭವಿಗಳ ಅಕೌಂಟ್‌ಗೆ ಹಣ ಜಮೆ ಆಗಿದೆ. ಆದರೆ ಇನ್ನು ಕೆಲವು ಫಲಾನುಭವಿಗಳು ಯೋಜನೆಯ ಅಭಿನಂದನೆ ಸಂದೇಶ ಸ್ವೀಕಾರ ಮಾಡಿದ್ದರು ಕೂಡ ಅಕೌಂಟ್‌ಗೆ ಹಣ ಜಮಾ ಆಗಿಲ್ಲ ಎಂದು ದೂರುತ್ತಿದ್ದಾರೆ.

ಗೃಹಲಕ್ಷ್ಮಿ ಹಣ ಜಮಾ ಆಗದಿರುವುದಕ್ಕೆ ಸರ್ಕಾರ ನೀಡುತ್ತಿರುವ ಕಾರಣ…?

ಗೃಹಲಕ್ಷ್ಮಿ ಫಲಾನುಭವಿಗಳಲ್ಲಿ ಕೆಲವರ ಅಕೌಂಟ್‌ಗೆ ಹಣ ಬಂದಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣ ಅರ್ಜಿ ಸಲ್ಲಿಸುವಾಗ ನೀಡಿರುವ ಬ್ಯಾಂಕ್‌ ಅಕೌಂಟ್‌ಗಳಲ್ಲಿ ಕೆಲವು ನಿಷ್ಕ್ರೀಯವಾಗಿವೆ ಎನ್ನಲಾಗಿದೆ. ಇನ್ನು ಕೆಲವು ಬ್ಯಾಂಕ್‌ ಖಾತೆಗಳು ಆಧಾರ್‌ನೊಂದಿಗೆ ಲಿಂಕ್‌ ಆಗಿಲ್ಲ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಸರ್ಕಾರ ಹಣ ಜಮಾ ಮಾಡಿದ್ದರು ಸಹ ಫಲಾನುಭವಿಗಳ ಖಾತೆಗೆ ಕ್ರೆಡಿಟ್‌ ಆಗುವಲ್ಲಿ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ .

Gruha Lakshmi scheme in karnataka
Image Credit: News 18

ಅದರಂತೆ ಇಲ್ಲಿಯವರೆಗೆ ಎಂಟು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳ ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿದೆ ಎನ್ನಲಾಗಿದೆ. ಇದನ್ನು ಶೀಘ್ರದಲ್ಲೇ ಸರಿಪಡಿಸುವುದಾಗಿ ಸಚಿವರು ಹೇಳಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸುವುದಕ್ಕೆ ಸರ್ಕಾರ ಮುಂದಾಗಿದ್ದು, ಅಂಗನವಾಡಿ ಕಾರ್ಯಕರ್ತರ ಮೂಲಕ ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡುವ ಹಾಗೂ ಅವರ ಬ್ಯಾಂಕ್‌ ಖಾತೆಗಳನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕದ ಮಹಿಳೆಯರು 

ರಾಜ್ಯ ಸರ್ಕಾರದ ಪ್ರಕಾರ 1.28 ಕೋಟಿ ಅರ್ಹ ಮಹಿಳಾ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿದ್ದಾರೆ. ಆದರೆ ಇಲ್ಲಿಯ ತನಕ 1.12 ಕೋಟಿ ಗೃಹಿಣಿಯರು ಮಾತ್ರ ಯೋಜನೆಗೆ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನೂ ಕೂಡ 16 ಲಕ್ಷಕ್ಕೂ ಅಧಿಕ ಮಹಿಳೆಯರು ಹೆಸರು ನೋಂದಣಿ ಮಾಡಿಸುವುದು ಬಾಕಿ ಇದೆ ಎನ್ನಲಾಗಿದೆ. ಇನ್ನು ಹೆಸರು ನೋಂದಣಿ ಬಾಕಿ ಇರುವವರಲ್ಲಿ ಕೆಲವರಿಗೆ ಪಡಿತರ ಚೀಟಿ ಇಲ್ಲದಿರುವುದು, ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕಾದಿರುವವರು ಕೂಡ ಇದ್ದಾರೆ.

Leave A Reply

Your email address will not be published.