Gruha Lakshmi: ಗೃಹ ಲಕ್ಷ್ಮಿ ಯೋಜನೆಯ ಹಣ ಇನ್ನು ಬಾರದ ಮಹಿಳೆಯರಿಗಾಗಿ ಸರ್ಕಾರದ ಹೊಸ ಸೇವೆ, ನಿಮಗಾಗಿ ಸಹಾಯವಾಣಿ.
ಗೃಹ ಲಕ್ಷ್ಮಿ ಯೋಜನೆಯ ಹಣ ಇನ್ನು ಬಾರದ ಮಹಿಳೆಯರಿಗಾಗಿ ಸರ್ಕಾರದ ಹೊಸ ಸೇವೆ.
Congress Government Gruha Lakshmi Helpline Number: ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಪ್ರಾರಂಭ ಆಗಿ 3 ತಿಂಗಳು ಕಳೆದಿದೆ. ಎರಡು ತಿಂಗಳ ಹಣ ಈಗಾಗಲೇ ಹಲವು ಮಹಿಳೆಯರ ಖಾತೆಗೆ ಜಮೆ ಆಗಿದೆ. ಅರ್ಜಿ ಹಾಕಿದ ಇನ್ನು ಹಲವು ಮಹಿಳೆಯರಿಗೆ ಒಂದು ಕಂತಿನ ಹಣ ಕೂಡ ಜಮೆ ಆಗಿಲ್ಲಾ.
ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಮನೆಯ ಯಜಮಾನಿಗೆ 2000 ಸಾವಿರ ರೂಪಾಯಿ ಹಣ ಜಮಾ ಆಗುವುದಾಗಿದೆ. ಆದ್ರೆ ಅರ್ಜಿ ಹಾಕಿದ ಎಲ್ಲಾ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿಲ್ಲ. ಈಗಾಗಲೇ ಈ ವಿಷಯವಾಗಿ ಸರಕಾರಕ್ಕೆ ದೂರು ಸಲ್ಲಿಸಿದ್ದಾಗ ತಂತ್ರಿಕಾ ದೋಷ ಎಂಬ ಕಾರಣ ನೀಡಲಾಗಿತ್ತು. ಈಗ ಮೂರನೇ ಕಂತಿನ ಹಣ ಬರುವ ಸಮಯ ಆಗಿದ್ದು, ಇನ್ನು ಕೂಡ ಒಂದು ಕಂತು ಹಣ ಪಡೆಯದ ಮಹಿಳೆಯರು ಕಡ್ಡಾಯವಾಗಿ ಈ ಕೆಲಸ ಮಾಡತಕ್ಕದ್ದು.
ಆಧಾರ್ ಕಾರ್ಡ್ ಲಿಂಕ್
ಗೃಹಲಕ್ಷ್ಮೀ ಯೋಜನೆಯಡಿ ಜಮೆ ಆಗುವ ಹಣ ಯಜಮಾನಿ ಮಹಿಳೆಯ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗುವುದರಿಂದ ಆಧಾರ್ ಕಾರ್ಡ್ ಗೆ ಬ್ಯಾಂಕ್ ಪಾಸ್ ಬುಕ್ ಕಡ್ಡಾಯವಾಗಿ ಲಿಂಕ್ ಆಗತಕ್ಕದ್ದು, ಹಾಗಾಗಿ ಕೂಡಲೇ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ. ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯ 2 ನೇ ಕಂತಿನ ಹಣ ಮನೆಯ ಯಜಮಾನಿಯರ ಖಾತೆಗೆ ಜಮೆ ಆಗುತ್ತಿದೆ. ಆದರೆ ಕೆಲವರಿಗೆ ಇನ್ನೂ ಹಣ ಜಮೆ ಆಗದೇ ವಿಳಂಬ ಆಗುತ್ತಿದೆ ಎನ್ನಲಾಗಿದೆ.
ಈ ಸಹಾಯವಾಣಿ ನಂಬರಿಗೆ ಕರೆ ಮಾಡಿ
ಮನೆಯ ಯಜಮಾನಿಗೆ ರಾಜ್ಯ ಸರಕಾರದಿಂದ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ ಹಲವರಿಗೆ ಮೊದಲ ಕಂತು ಬಂದಿದ್ದು, ಹಲವರಿಗೆ ಇನ್ನೂ ಹಣ ಖಾತೆಗೆ ಜಮಾ ಆಗಿಲ್ಲ. ನಿಮಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮಾ ಆಗಿಲ್ಲ ಅಂದರೆ ಅಥವಾ ಗೃಹಲಕ್ಷ್ಮೀ ಯೋಜನೆಯ ಬೇರೆ ಏನಾದರೂ ಸಮಸ್ಯೆ ಇದ್ದರೆ ನೀವು 1906 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಸರ್ಕಾರ ಸೂಚಿಸಿದೆ .