Karizma: ಬುಕಿಂಗ್ ನಲ್ಲಿ ದಾಖಲೆ ನಿರ್ಮಿಸಿದ ಯುವಕರ ನೆಚ್ಚಿನ ಕರಿಜ್ಮಾ, ಕಡಿಮೆ ಬೆಲೆ ಮತ್ತು ಅಧಿಕ ಮೈಲೇಜ್.
ಕೈ ಗೆಟಕುವ ಬೆಲೆಯಲ್ಲಿ ಯುವಕರ ನೆಚ್ಚಿನ ಬೈಕ್ ಮಾರುಕಟ್ಟೆಗೆ, ಇಂದೇ ಬುಕ್ ಮಾಡಿ.
Hero Karizma XMR: ಭಾರತದಲ್ಲಿ ಹೊಸ ಅಲೆ ಎಬ್ಬಿಸಿದ ಹೊಚ್ಚ ಹೊಸ ಸ್ಪೂರ್ಟ್ಸ್ ಟೂರರ್ ಬೈಕ್ ಹೀರೋ ಕರಿಜ್ಮಾ (Hero Karizma). ಈ ಬೈಕ್ ಬಿಡುಗಡೆಯೊಂದಿಗೆ ಭಾರತೀಯರು ತಮ್ಮ ದ್ವಿಚಕ್ರ ವಾಹನದ ವೇಗವನ್ನು ನೋಡುವ ರೀತಿಯೇ ಬದಲಾಯಿತು ಈ ಮೋಟಾರ್ ಸೈಕರ್ ಬಿಡುಗಡೆಯಾಗಿ 20 ವರ್ಷಗಳಾದರೂ ಅದೆಷ್ಟೋ ದಾಖಲೆಗಳನ್ನು ನಿರ್ಮಿಸಿ ಕಾಲ ಕಾಲಕ್ಕೆ ಅಪ್ಡೇಟ್ ಪಡೆಯುತ್ತಿದೆ.
ಇದೀಗ ಹಳೆಯ ಗತ್ತಿನೊಂದಿಗೆ ಹೊಸ ಅವತಾರದಲ್ಲಿ ಹೀರೋ ಕರಿಜ್ಮಾ XMR ಹೆಸರಿನಲ್ಲಿ ಪರಿಚಯಿಸಲಾಗಿದೆ. ಹೀರೋ ಮೋಟೋಕಾರ್ಪ್ ಡೀಲರ್‌ಗಳಿಗೆ Karizma XMR ರವಾನೆಗಳು ಈಗಾಗಲೇ ಪ್ರಾರಂಭವಾಗಿದ್ದು, ಈ ತಿಂಗಳ ಹಬ್ಬದ ಅವಧಿಯಲ್ಲಿ ಗ್ರಾಹಕರಿಗೆ ವಿತರಣೆಗಳು ಪ್ರಾರಂಭವಾಗಲಿವೆ.

ಹೊಸ ಹೀರೋ ಕರಿಜ್ಮಾ XMR ಬೈಕ್ ನ ವಿಶೇಷತೆ
ಹೊಸ ಹೀರೋ ಕರಿಜ್ಮಾ XMR ಬೈಕ್ ನ ನೋಟವು ಹೊಸ ಡಿಸೈನ್ ಪಡೆದಿದ್ದು ತನ್ನ ಹಳೆಯ ಮಾದರಿಗಿಂತ ಬಹಳಷ್ಟು ಭಿನ್ನವಾಗಿದೆ. ಮೊದಲು ಕರಿಜ್ಮಾ ಅನ್ನು Honda ದವರು ವಿನ್ಯಾಸ ಗೊಳಿಸಿದ್ದರು ಬಳಿಕ ZMR ಮತ್ತು R ಲೈನ್ ಆಪ್ ಗಳಿಗೆ 2014 ರ ನವೀಕರಣವು ಎರಿಕ್ ಬ್ಯುಯೆಲ್ ರೇಸಿಂಗ್ ವಿನ್ಯಾಸ ವಿಭಾಗದವರಿಂದ ಮಾಡಲಾಯಿತು. DRL ಗಳು ಮತ್ತು ಟೈಲ್ ಲೈಟ್ ಗಾಗಿ H ಆಕಾರದ ವಿನ್ಯಾಸವನ್ನು ನೀಡಲಾಗಿದೆ. H ಆಕಾರದ DRL ಗಳ ನಡುವೆ LED ಹೆಡ್ ಲ್ಯಾಂಪ್ ಆಕರ್ಷಕವಾಗಿ ಕಾಣುತ್ತದೆ. ಇಲ್ಲಿ H ಆಕಾರ ಹೀರೋ ಬ್ರಾಂಡಿಂಗ್ ಅನ್ನು ಸೂಚಿಸುತ್ತದೆ.
ಹೀರೋ ಕರಿಜ್ಮಾ XMR ಬೆಲೆ
ಹೀರೋ ಕರಿಜ್ಮಾ ಎಕ್ಸ್‌ಎಂಆರ್ ಗ್ರಾಹಕರ ಬುಕಿಂಗ್ ಆಗಸ್ಟ್ 29, 2023 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 30, 2023 ಕ್ಕೆ ಮುಕ್ತಾಯವಾಗಿದೆ.ಪರಿಚಯಾತ್ಮಕ ಬೆಲೆ 1,72,900 ರೂ.ಗಳು ಹೊಸ ಕರಿಜ್ಮಾ ಎಕ್ಸ್‌ಎಂಆರ್ ಈಗಿನ ಬೆಲೆ 1,79,900/- ರೂ. ಗಳು (ಎಕ್ಸ್ ಶೋ ರೂಂ ದೆಹಲಿ) ಮತ್ತು ಕಂಪನಿಯು ಶೀಘ್ರದಲ್ಲೇ ಹೊಸ ಬುಕಿಂಗ್ ವಿಂಡೋವನ್ನು ಪ್ರಾರಂಭಿಸಲಿದೆ.

ಹೀರೋ ಕರಿಜ್ಮಾ XMR ಇಂಜಿನ್ ಸಾಮರ್ಥ್ಯ
ಹೊಚ್ಚ ಹೊಸ ಲಿಕ್ವಿಡ್ ಕೋಲ್ಡ್ 210cc DOHC ಸಿಂಗಲ್ ಸಿಲಿಂಡರ್ , ನಾಲ್ಕು ವಾಲ್ವ್ ಇಂಜಿನ್ ನಿಂದ ಚಾಲಿತವಾಗಿದೆ. ಈ ಹೈ ರಿವೀವಿಂಗ್ ಇಂಜಿನ್ 9,250rmp ನಲ್ಲಿ 25.15bhp ಮತ್ತು 7250rpm ನಲ್ಲಿ 20.4Nm ಪೀಕ್ ಟಾರ್ಕ್ ಅನ್ನು ಉತ್ಪದಿಸುತ್ತದೆ ಇಂಜಿನ್ ಅನ್ನು 6ಸ್ಪೀಡ್ ಗೀರ್ ಬಾಕ್ಸ್ ನೊಂದಿಗೆ ಸ್ಪಿಪೆರ್ ಮತ್ತು ಅಸಿಸ್ಟ್ ಕ್ಲಚ್ ನೊಂದಿಗೆ ಜೋಡಿಸಲಾಗಿದೆ.