high court: ಮಹಿಳೆಯರ ವಿಷಯವಾಗಿ ಹೈಕೋರ್ಟ್ ಮಹತ್ವದ ತೀರ್ಪು, ಇದು ಮಹಿಳೆಯರ ಮೂಲಭೂತ ಹಕ್ಕು.
ಗರ್ಬಿಣಿ ಮಹಿಳೆಯರಿಗೆ ಹೊಸ ಆದೇಶ ಹೊರಡಿಸಿದ ದೆಹಲಿ ಹೈ ಕೋರ್ಟ್.
High Court New Announcement For Pregnant Women: ದೇಶದ ಮಹಿಳೆಯರನ್ನು ಪುರುಷರಷ್ಟೇ ಸಬಲರನ್ನಾಗಿ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿ ಸರ್ಕಾರ ವಿವಿಧ ರೀತಿಯ ಸವಲತ್ತುಗಳನ್ನು ಒದಗಿಸಿಕೊಡುತ್ತಿದ್ದೆ. ಮಹಿಳೆಯರ ವಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಅಧಿಕಾರವಿರುತ್ತದೆ. ಅವರ ಮೇಲೆ ಯಾವುದೇ ರೀತಿಯ ಒತ್ತಡ ಹೇರಬಾರದು.
ಪ್ರತಿ ಮಹಿಳೆಯೂ ಕೂಡ ತಾಯ್ತಾನದ ಖುಷಿವನ್ನು ಅನುಭವಿಸಲು ಇಷ್ಟ ಪಡುತ್ತಾಳೆ. ಸರ್ಕಾರ ಗರ್ಭಿಣಿ ಮಹಿಳೆಯರ ಸುರಕ್ಷತೆಗಾಗಿ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದ್ದೆ. ಹೆರಿಗೆಯ ಸಮಯದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಗರ್ಭಿಣಿ ಮಹಿಳೆಯರ ಕಾಳಜಿ ವಹಿಸುದು ಸರ್ಕಾರದ ಉದ್ದೇಶವಾಗಿದೆ.

ಇಂತಹ ಮಹಿಳೆಯರು ಹೆರಿಗೆ ಪ್ರಯೋಜನಕ್ಕೆ ಅರ್ಹರು
ಮಹಿಳೆಯರ ಕೆಲಸದ ವಾತಾವರಣವು ಯಾವುದೇ ಅಡೆತಡೆ ಇಲ್ಲದೆ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗಿರಬೇಕು. ವೃತ್ತಿ ಮತ್ತು ತಾಯ್ತನ ಎರಡನ್ನು ಆಯ್ಕೆ ಮಾಡುವ ಹಕ್ಕು ಮಹಿಳೆಯರಿಗೆ ಇರುತ್ತದೆ. ಇವೆರಡನ್ನೂ ಆಯ್ಕೆ ಮಾಡುವಲ್ಲಿ ಅವರಿಗೆ ಒತ್ತಾಯ ಹೇರಬಾರದು. ಎಂದು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಗುರುವಾರ ಹೊರಡಿಸಿದ ಆದೇಶದಲ್ಲಿ ಹೇಳಿದ್ದಾರೆ.
ಸಂವಿಧಾನವು ಮಹಿಳೆಗೆ ಮಗುವಿಗೆ ಜನ್ಮ ನೀಡುವ ಮತ್ತು ಜನ್ಮ ನೀಡದಿರುವ ಸ್ವಾತಂತ್ರ್ಯವನ್ನು ನೀಡಿದೆ. ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಹೆರಿಗೆ ರಜೆ ಹಾಗು ಪ್ರಯೋಜನಗಳನ್ನು ನೀಡಲಾಗುತ್ತದೆ. ಹಾಗೆ ಗುತ್ತಿಗೆ ಮಹಿಳಾ ಉದ್ಯೋಗಿ ಹೆರಿಗೆ ಪ್ರಯೋಜನ ಕಾಯ್ದೆಗೆ ಅರ್ಹರಾಗಿರುತ್ತಾರೆ.

ಸಮಾಜದಲ್ಲಿ ಮಹಿಳೆಯರು ಸುರಕ್ಷತೆ
ವಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ಮಹಿಳೆಯರಿಗೆ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ಅವಕಾಶ ನೀಡಬೇಕು. ಅವರ ಮೇಲೆ ಯಾವುದೇ ರೀತಿಯ ಒತ್ತಾಯವನ್ನು ಹೆರಬಾರದು. ಕೆಲಸದ ವಾತಾವರಣ ಅವರಿಗೆ ಅನುಕೂಲವಾಗಿರಬೇಕು.
ವಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಸಂಬಂಧಿಸಿದಂತೆ ಯಾವುದೇ ಅಡೆತಡೆ ಇಲ್ಲದೆ ನಿರ್ಧಾರ ತೆಗೆದುಕೊಳ್ಳುವಂತ್ತಿರಬೇಕು. ವೃತ್ತಿ ಜೀವನ ಮತ್ತು ತಾಯ್ತನ ಎರಡನ್ನು ಆಯ್ಕೆಮಾಡುವಾಗ ಅವರ ಮೇಲೆ ಒತ್ತಾಯ ಹೇರಬಾರದು ಎಂದು ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.