High Court: ಹೆಂಡತಿಗೆ ತಿಳಿಯದೆ ಇನ್ನುಮುಂದೆ ಗಂಡ ಈ ಕೆಲಸ ಮಾಡುವಂತಿಲ್ಲ, ಹೈಕೋರ್ಟ್ ಇನ್ನೊಂದು ತೀರ್ಪು.
ಗಂಡ ಹೆಂಡತಿಗೆ ಹೈಕೋರ್ಟ್ ಇನ್ನೊಂದು ಹೊಸ ನಿಯಮವನ್ನ ಜಾರಿಗೆ ತಂದಿದೆ.
High Court New Judgement For Couples: ಗಂಡ ಹೆಂಡತಿ ಸಂಬಂಧ ಅನ್ನುವುದು ಹೊಂದಾಣಿಕೆ ಹಾಗು ನಂಬಿಕೆಗಳ ಮೇಲೆ ನಿಂತಿದೆ ಎನ್ನಲಾಗುತ್ತದೆ. ಅಷ್ಟೇ ಅಲ್ಲದೆ ಗಂಡನಿಗೆ ಹೆಂಡತಿ ಮೇಲೆ, ಹೆಂಡತಿಗೆ ಗಂಡನ ಮೇಲೆ ನಂಬಿಕೆ ಇರುವುದು ಜೀವನದ ಬಹಳ ಮುಖ್ಯವಾದ ಅಂಶವಾಗಿದೆ.
ಗಂಡ ಹೆಂಡತಿ ಸಂಬಂಧದಲ್ಲಿ ಯಾರಾದರೂ ಒಬ್ಬರಿಗೆ ಒಬ್ಬರ ಮೇಲೆ ಅನುಮಾನ ಬಂದರು ಇಡೀ ಸಂಬಂಧವೇ ಹಾಳಾಗುತ್ತದೆ. ಅಂತಹದೇ ಒಂದು ವಿಷಯವಾಗಿ ಹೈ ಕೋರ್ಟ್ ಒಂದು ಮಹತ್ವದ ತೀರ್ಪನ್ನು ನೀಡಿದೆ. ಅಷ್ಟೇ ಅಲ್ಲದೆ ಈ ತೀರ್ಪಿನ ಆಧಾರದ ಮೇಲೆ ಇಂತಹ ಕೇಸ್ ದಾಖಲಾದರೆ ತಪ್ಪಿಸ್ಥಸ್ಥರಿಗೆ ಶಿಕ್ಷೆ ಖಚಿತ ಆಗಿರುತ್ತದೆ.

ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣ
2019 ರಲ್ಲಿ 44 ವರ್ಷದ ವ್ಯಕ್ತಿಯೋರ್ವ ತನ್ನ ಪತ್ನಿ ವ್ಯಭಿಚಾರ ಮಾಡುತ್ತಿದ್ದಾಳೆ ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದು. ಈ ವಿಚಾರವಾಗಿ ಪತ್ನಿಯ ಕರೆ ಸಂಭಾಶಣೆ (ಕಾಲ್ ರೆಕಾರ್ಡ್) ಅನ್ನು ಸಾಕ್ಷಿ ಯಾಗಿ ನೀಡಿ ನನಗೆ ಮೋಸ ಮಾಡಿದ್ದಾಳೆ ಹಾಗಾಗಿ ನನಗೆ ಅವಳಿಂದ ವಿಚ್ಛೇಧನ ಬೇಕೆಂದು ವಾದಿಸಿದ್ದಾರೆ.
ಅಷ್ಟೇ ಅಲ್ಲದೇ ನನಗೆ ಮೋಸ ಆಗಿದೆ ಹಾಗಾಗಿ ನಾನು ಆಕೆಗೆ ಯಾವುದೇ ಜೀವನಾಂಶವನ್ನು ನೀಡುವುದಿಲ್ಲ ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಲಾಗಿತ್ತು, ಕೋರ್ಟ್ ಈ ವಾದವನ್ನು ಎತ್ತಿ ಹಿಡಿದಿದ್ದು, 2019 ರಿಂದ ಈ ಪ್ರಕರಣ ಬಾಕಿ ಉಳಿದಿತ್ತು.

ಪತ್ನಿಯ ಅನುಮತಿ ಇಲ್ಲದೇ ಪತಿ ಆಕೆಯ ಮೊಬೈಲ್ ನೋಡುವಂತಿಲ್ಲ
2019 ರಿಂದ ಬಾಕಿ ಇದ್ದ ಪ್ರಕರಣದ ಕುರಿತು 2022 ರಲ್ಲಿ ಆ ಮಹಿಳೆ ಜೀವನಾಂಶ ಪಾವತಿಗೆ ಅನುಮತಿ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು. ಈ ವಿಷಯವಾಗಿ ವಿಚಾರಣೆ ನೆಡೆಸಿದ ಛತೀಸ್ ಘಡ ಹೈ ಕೋರ್ಟ್ ಪತ್ನಿಯ ಅನುಮತಿ ಇಲ್ಲದೆ ಫೋನ್ ಕರೆಗಳನ್ನು ರೆಕಾರ್ಡ್ ಮಾಡುವುದು ಆಕೆಯ ಖಾಸಗಿತನ ಹಕ್ಕಿನ ಉಲ್ಲಂಘನೆ ಆಗಿದೆ.
ಆಕೆಗೆ ಅರಿವಿಲ್ಲದೆ ಆಕೆಯ ಖಾಸಗಿ ವಸ್ತುವಾದ ಮೊಬೈಲ್ ಅನ್ನು ನೋಡುವಂತಿಲ್ಲ ಅಷ್ಟೇ ಅಲ್ಲದೆ ಇಂತಹ ಅಪರಾಧಗಳಿಗೆ ಶಿಕ್ಷೆಯನ್ನು ಕೂಡ ವಿಧಿಸಲಾಗುತ್ತದೆ ಎಂದು ಛತೀಸ್ ಘಡ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ . ಅಷ್ಟೇ ಅಲ್ಲದೆ ಪತಿಯಿಂದ ಪತ್ನಿಗೆ 55,000 ಸಾವಿರ ರೂಪಾಯಿ ಜೀವನಾಂಶವನ್ನು ಕೊಡಿಸಲಾಯಿತು.