Vehicle Rules: ಬೈಕ್ ಮತ್ತು ಕಾರ್ ಇದ್ದವರಿಗೆ ನವೆಂಬರ್ 17 ರಿಂದ ಹೊಸ ನಿಯಮ, ಕೇಂದ್ರದ ಆದೇಶ.
ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರಿಂದ ಹೊಸ ನಿಯಮ ಜಾರಿಗೆ ತರಲಾಗಿದೆ.
Security Number Plate: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಕಾರ್ ಅಥಾವ ಬೈಕ್ ಇದ್ದೆ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ದೇಶದಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ಹಲವು ನಿಯಮಗಳು ಜಾರಿಯಲ್ಲಿ ಇದ್ದು ಜನರು ಕೆಲವು ನಿಯಮಗಳನ್ನ ಸರಿಯಾಗಿ ಪಾಲನೆ ಮಾಡದೆ ಸಂಚಾರಿ ಪೊಲೀಸರಿಗೆ ದಂಡ ಕಟ್ಟಿರುವುದನ್ನ ನಾವು ನೋಡಬಹುದಾಗಿದೆ. ಇದರ ನಡುವೆ ಈಗ ಕೇಂದ್ರ ಸರ್ಕಾರ ಬೈಕ್, ಕಾರ್, ಬಸ್ ಸೇರಿದಂತೆ ದೇಶದ ಎಲ್ಲಾ ವಾಹನಗಳಿಗೆ ಹೊಸ ನಿಯಮವನ್ನ ಜಾರಿಗೆ ತರಲು ತೀರ್ಮಾನವನ್ನ ಮಾಡಿದೆ.
ಬೈಕ್, ಕಾರ್ ಮತ್ತು ಎಲ್ಲಾ ವಾಹನಗಳಿಗೆ ಹೊಸ ನಿಯಮ
ಹೌದು ಕೇಂದ್ರ ಸಂಚಾರ ನಿಗಮ ದೇಶದ ಎಲ್ಲಾ ವಾಹನಗಳಿಗೆ ಈಗ ಹೊಸ ನಿಯಮವನ್ನ ಜಾರಿಗೆ ತಂದಿದ್ದು ಈ ಹೊಸ ನಿಯಮ ಮುಂದಿನ ನವೆಂಬರ್ 17 ನೇ ತಾರೀಕಿನಿಂದ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಕೇಂದ್ರ ಸ್ಪಷ್ಟನೆಯಲ್ಲಿ ತಿಳಿಸಿದೆ. ಜನರು ತಮ್ಮ ವಾಹನ ಎಲ್ಲರಿಗಿಂತ ವಿಭಿನ್ನವಾಗಿ ಕಾಣಲಿ ಅನ್ನುವ ಉದ್ದೇಶದಿಂದ ಕೆಲವು ತಪ್ಪುಗಳನ್ನ ಮಾಡುತ್ತಿದ್ದು ಇನ್ನುಮುಂದೆ ಅಂತಹ ತಪ್ಪು ಮಾಡಿದರೆ ದಂಡ ಖಚಿತವಾಗಿ ಕಟ್ಟಬೇಕಾಗುತ್ತದೆ.
ವಾಹನಗಳ ನಂಬರ್ ಪ್ಲೇಟ್ ಮೇಲೆ ಹೊಸ ನಿಯಮ
ಹೌದು ಕೇಂದ್ರ ಸರ್ಕಾರ ಈಗ ವಾಹನಗಳ ನಂಬರ್ ಪ್ಲೇಟ್ ಮೇಲೆ ಹೊಸ ನಿಯಮವನ್ನ ಜಾರಿಗೆ ತರಲು ತೀರ್ಮಾನವನ್ನ ಮಾಡಿದೆ. ನವೆಂಬರ್ 17 ರಿಂದ ಎಲ್ಲಾ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೊಸ ಆದೇಶವನ್ನ ಹೊರಡಿಸಿದೆ. 2019 ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ಎಲ್ಲಾ ವಾಹನಗಳಿಗೆ HSRP ಕಡ್ಡಾಯ ಎಂದು ಘೋಷಣೆ ಮಾಡಿದೆ.
2019 ರಲ್ಲಿ ವಾಹನ ಖರೀದಿ ಮಾಡಿದ ಎಲ್ಲಾ ಜನರು ತಮ್ಮ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವುದು ಕಡ್ಡಾಯವಾಗಿದ್ದು. ಇನ್ನು ಈ ನಂಬರ್ ಪ್ಲೇಟ್ ಅಳವಡಿಸದೇ ಇದ್ದರೆ ಸಂಚಾರಿ ಪೊಲೀಸರಿಗೆ ದಂಡ ಅನಿವಾರ್ಯವಾಗಿ ಕಟ್ಟಬೇಕು ಎಂದು ಕೇಂದ್ರ ಸ್ಪಷ್ಟನೆಯಲ್ಲಿ ತಿಳಿಸಿದೆ. ನಿಗದಿತ ಅವಧಿಯ ಒಳಗೆ ಈ ನಂಬರ್ ಪ್ಲೇಟ್ ಅಳವಡಿಕೆ ಮಾಡದೆ ಇದ್ದರೆ 500 ರಿಂದ 1000 ರೂ ತನಕ ದಂಡವನ್ನ ಕಟ್ಟಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆಯಲ್ಲಿ ತಿಳಿಸಿದೆ.