Interest Rate: ಉಳಿತಾಯ ಖಾತೆಯ ಮೇಲೆ ಅತೀ ಹೆಚ್ಚು ಬಡ್ಡಿ ನೀಡುತ್ತದೆ ಈ ಬ್ಯಾಂಕುಗಳು, ಇಂದೇ ಖಾತೆ ಬದಲಾಯಿಸಿ.
ಉಳಿತಾಯ ಮಾಡುವವರು ಈ ಬ್ಯಾಂಕ್ ಗಳಲ್ಲಿ ಉಳಿತಾಯ ಮಾಡಿ, ಅಧಿಕ ಬಡ್ಡಿ ದೊರೆಯುತ್ತದೆ.
Highest Interest Rate On Saving Account: ಪ್ರತಿಯೊಬ್ಬ ವ್ಯಕ್ತಿಯು ತಾನು ದುಡಿದ ಸಂಪಾದನೆಯಲ್ಲಿ ಇಂತಿಷ್ಟು ಎಂದು ಉಳಿತಾಯ ಮಾಡುತ್ತಾರೆ. ಉಳಿತಾಯದ ಹಣವನ್ನು ಬ್ಯಾಂಕ್ ಗೆ ಹಾಕಿ ಅದರಿಂದ ಬರುವ ಬಡ್ಡಿಯನ್ನು ಪಡೆಯುತ್ತಾರೆ.
ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಯಲ್ಲಿ ಇರಿಸಲಾಗಿರುವ ಬಡ್ಡಿಯನ್ನು ಪಡೆಯವ ಡೆಪಾಸಿಟ್ ಖಾತೆಯನ್ನು ಉಳಿತಾಯ ಖಾತೆ ಎಂದು ಕರೆಯಲಾಗುತ್ತದೆ. ನಾವು ಹಣವನ್ನು ಉಳಿತಾಯ ಮಾಡಲು ಬಯಸಿ ಅದನ್ನು ಮನೆಯಲ್ಲಿಯೇ ಸಂಗ್ರಹ ಮಾಡಿದರೆ, ಆ ಹಣವನ್ನು ಎಷ್ಟು ವರ್ಷ ಕಳೆದರೂ ಅಷ್ಟೇ ಇರುತ್ತದೆ. ಆದರೆ ಉಳಿತಾಯ ಖಾತೆಯಲ್ಲಿಟ್ಟರೆ ನಮ್ಮ ಮೊತ್ತಕ್ಕೆ ಬಡ್ಡಿ ದೊರೆಯುತ್ತದೆ.
ಉಳಿತಾಯ ಖಾತೆ ಸುರಕ್ಷಿತ ಖಾತೆಯಾಗಿದೆ
ಉಳಿತಾಯ ಖಾತೆಗಳ ಮೇಲಿನ ಬಡ್ಡಿದರಗಳು ಸಾಮಾನ್ಯವಾಗಿ ಕಡಿಮೆಯಿದ್ದರೂ, ಖಾತೆಯಲ್ಲಿರುವ ಹಣ ಸುರಕ್ಷಿತವಾಗಿರುವುದು, ತುರ್ತು ಸಂದರ್ಭಗಳಲ್ಲಿ ನಿಮ್ಮ ಕೈಗೆ ಹಣ ಲಭ್ಯವಾಗುವುದರಿಂದ ಈ ಉಳಿತಾಯ ಖಾತೆ ಉತ್ತಮ ಆಯ್ಕೆಯಾಗಿದೆ. ಇಲ್ಲಿ ಹಣದ ಸುರಕ್ಷತೆ ಜೊತೆ ಬಡ್ಡಿಯು ಲಭ್ಯವಾಗುತ್ತದೆ. ಹೆಚ್ಚಿನ ಜನರ ಉಳಿತಾಯ ಖಾತೆಯ ಮೊತ್ತವು 1 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ಆಗಿರುತ್ತದೆ. ನೀವು ಉಳಿತಾಯ ಖಾತೆಯನ್ನು ತೆರೆಯಲು ಬಯಸಿದರೆ ಹೆಚ್ಚಿನ ಬಡ್ಡಿ ದರಗಳನ್ನು ನೀಡುವ ಬ್ಯಾಂಕ್ನಲ್ಲಿ ತೆರೆದರೆ ಉತ್ತಮ.
ಉಳಿತಾಯಕ್ಕೆ ಉತ್ತಮ ಬಡ್ಡಿ ನೀಡುವ ಬ್ಯಾಂಕ್ ಗಳ ಪಟ್ಟಿ ಈ ಕೆಳಗಿನಂತಿವೆ
ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹೊಸದಾಗಿ ರೂಪುಗೊಂಡ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಗಿದ್ದು, ಸೆಂಟ್ರಮ್ ಫೈನಾನ್ಷಿಯಲ್ ಸರ್ವಿಸಸ್ (ಸೆಂಟ್ರಮ್ ಗ್ರೂಪ್) ಮೂಲಕ (ಭಾರತ್ಪೇ) ಪ್ರಚಾರ ಮಾಡಲಾಗಿದೆ. ಉಳಿತಾಯ ಖಾತೆಗಳಲ್ಲಿ, 1 ಲಕ್ಷ ರೂಪಾಯಿಯ ದೈನಂದಿನ ಬ್ಯಾಲೆನ್ಸ್ಗಳ ಮೇಲೆ ಬ್ಯಾಂಕ್ ಹೆಚ್ಚಿನ ಬಡ್ಡಿ ದರಗಳನ್ನು ನೀಡುತ್ತದೆ. ಬ್ಯಾಂಕ್ ಪ್ರಾಥಮಿಕವಾಗಿ ಉಳಿತಾಯ ಖಾತೆಯ ಬಾಕಿಗಳ ಮೇಲೆ ಶೇಕಡ 6 ರಿಂದ ಶೇಕಡ 7 ರಷ್ಟು ಬಡ್ಡಿ ನೀಡುತ್ತದೆ.
ಉತ್ಕರ್ಷ್ ಸಣ್ಣ ಹಣಕಾಸು ಬ್ಯಾಂಕ್
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಉಳಿತಾಯ ಖಾತೆ ಡೆಪಾಸಿಟ್ಗಳ ಮೇಲೆ ಅಧಿಕ ಬಡ್ಡಿದರಗಳನ್ನು ನೀಡುವ ಪಟ್ಟಿಯಲ್ಲಿ ಎರಡನೇ ಸಣ್ಣ ಹಣಕಾಸು ಬ್ಯಾಂಕ್ ಆಗಿದೆ. ಬ್ಯಾಂಕ್ 1 ಲಕ್ಷ ರೂಪಾಯಿಯ ದೈನಂದಿನ ಬ್ಯಾಲೆನ್ಸ್ಗಳ ಮೇಲೆ ಗರಿಷ್ಠ ಶೇಕಡ 4.25ರಷ್ಟು ಬಡ್ಡಿಯನ್ನು ನೀಡುತ್ತದೆ. 10 ಕೋಟಿ ರೂಪಾಯಿ ಇನ್ಕ್ರಿಮೆಂಟಲ್ ಬ್ಯಾಲೆನ್ಸ್ಗಳ ಮೇಲೆ ಗರಿಷ್ಠ ಶೇಕಡ 7.50 ಬಡ್ಡಿಯನ್ನು ನೀಡುತ್ತದೆ.
ಆರ್ಬಿಎಲ್ ಬ್ಯಾಂಕ್
ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆದ ಆರ್ಬಿಎಲ್ ಬ್ಯಾಂಕ್ ಉಳಿತಾಯ ಖಾತೆಗಳ ಮೇಲೆ ಹೆಚ್ಚಿನ ಬಡ್ಡಿ ದರಗಳನ್ನು ನೀಡುತ್ತದೆ. ಬ್ಯಾಂಕ್ನ ಉಳಿತಾಯ ಖಾತೆಯ ಬಡ್ಡಿದರಗಳನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಪರಿಷ್ಕರಣೆಯ ನಂತರ, ಬ್ಯಾಂಕ್ ಉಳಿತಾಯ ಖಾತೆಗಳ ಮೇಲೆ ಶೇಕಡ 4.25 ರಿಂದ ಶೇಕಡ 7.50 ವರೆಗೆ ಬಡ್ಡಿ ನೀಡುತ್ತದೆ. ಪರಿಷ್ಕೃತ ಬಡ್ಡಿದರಗಳು ಆಗಸ್ಟ್ 21, 2023 ರಿಂದ ಜಾರಿಗೆ ಬರುತ್ತವೆ.
ಐಡಿಎಫ್ಸಿ ಫಸ್ಟ್ ಬ್ಯಾಂಕ್
ಖಾಸಗಿ ವಲಯದ ಅಗ್ರ ಬ್ಯಾಂಕುಗಳಲ್ಲಿ ಒಂದಾದ ಐಡಿಎಫ್ಸಿ ಫಸ್ಟ್ ಬ್ಯಾಂಕ್, ಉಳಿತಾಯ ಖಾತೆ ಡೆಪಾಸಿಟ್ಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುವ ಪಟ್ಟಿಯಲ್ಲಿ 4 ನೇ ಬ್ಯಾಂಕ್ ಆಗಿದೆ. ಬ್ಯಾಂಕ್ ಇತ್ತೀಚೆಗೆ ಜುಲೈ 01, 2023 ರಂದು ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಪರಿಷ್ಕರಣೆಯ ನಂತರ ಬ್ಯಾಂಕ್ ದೈನಂದಿನ ಬಾಕಿ ಮೇಲೆ ಶೇಕಡ 4 ರಿಂದ ಶೇಕಡ 7 ವರೆಗಿನ ಬಡ್ಡಿದರಗಳನ್ನು ನೀಡಲಾಗುತ್ತದೆ.