Hitler Kalyana: ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ದೊಡ್ಡ ಟ್ವಿಸ್ಟ್, ಸಂಕಷ್ಟಕ್ಕೆ ಸಿಲುಕಿಕೊಂಡ ನಕಲಿ ಪ್ರಾರ್ಥನಾ.
ಹೀಟರ್ ಕಲ್ಯಾಣ ಸೀರಿಯಲ್ ನಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡ ನಕಲಿ ಪ್ರಾರ್ಥನಾ.
Hitler Kalyana Serial: ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿ ಪ್ರತಿದಿನ ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿದೆ. ಈ ಧಾರಾವಾಹಿ ಪ್ರಾರಂಭವಾಗಿ ಹಲವು ವರ್ಷಗಳಾಗಿದ್ದು, ಇನ್ನು ಜನ ಮೆಚ್ಚಿದ ಧಾರಾವಾಹಿಯಾಗಿ ಉಳಿದಿದೆ. ಈಗ ಸದ್ಯಕ್ಕೆ ಅಂತರ ಎಂದು ಬಂದ ಪ್ರಾರ್ಥನಾಳ ನಡವಳಿಕೆ ಮೇಲೆ ಮನೆಯವರಿಗೆ ಬೇಸರವನ್ನು ತರುತ್ತಿದೆ. ರೂಪಾ ಕೂಡ ಅಂತರಾಳನ್ನು ಬಿಟ್ಟು ಲೀಲಾಳಿಗೆ ಹೆಚ್ಚು ಸಪೋರ್ಟ್ ಮಾಡುತ್ತಾಳೆ.
ದುರ್ಗಾ ಪ್ರಾರ್ಥನಾಳನ್ನು ಅಂತರಾ ಎಂದು ಮನೆಗೆ ಕರೆದುಕೊಂಡು ಬಂದಿದ್ದರಿಂದ ಅವಳೊಬ್ಬಳಿಗೆ ಮಾತ್ರವೇ ಸತ್ಯ ಗೊತ್ತಿದೆ. ಆದರೆ ಈಗ ದುರ್ಗಾಳಿಗೆ ಅಂತರಾ ತಿರುಗುಬಾಣವಾಗಿ ಪರಿಣಮಿಸಿದ್ದಾಳೆ. ಅಂತರಾ ಹೆಸರೇಳಿಕೊಂಡು ಬಂದಿರುವ ಪ್ರಾರ್ಥನಾ ಹಿಂದೆ ಕಾಣದ ಕೈ ಇದ್ದು, ಈಗ ಕಥೆಯಲ್ಲಿ ಟ್ವಿಸ್ಟಿಂಗ್ ಇದೆ. ಎಲ್ಲರಿಗೂ ಆ ವ್ಯಕ್ತಿ ಯಾರು ಎಂಬ ಕುತೂಹಲ ಮೂಡಿದೆ.

ದುರ್ಗಾ ವಾಪಸ್ ಬರೋದಿಲ್ಲ ಎಂದ ಲಕ್ಷ್ಮೀ
ದುರ್ಗಾಳಿಗೆ ಲೀಲಾ ಫೋನ್ ಮಾಡುತ್ತಾಳೆ. ಸ್ವಿಚ್ಛ್ ಆಫ್ ಬಂದಿದ್ದಕ್ಕೆ ಗಾಬರಿಯಾಗುತ್ತದೆ. ಆಗ ಲಕ್ಷ್ಮೀ ಬಳಿ ದುರ್ಗಾ ಎಲ್ಲಿಗೆ ಹೋಗಿದ್ದಾಳೆ. ಯಾವಾಗ ಬರಬಹುದು ಎಂದೆಲ್ಲಾ ವಿಚಾರಿಸುತ್ತಾಳೆ. ಆದರೆ, ಲಕ್ಷ್ಮೀ ದುರ್ಗಾ ವಾಪಸ್ ಬರುತ್ತಾರೆ ಅನ್ನೋ ನಂಬಿಕೇನೇ ಇಲ್ಲ. ಅವರು ಮನೆಗೆ ಮತ್ತೆ ಬರೋದಿಲ್ಲ ಅನಿಸುತ್ತೆ ಎಂದು ಹೇಳುತ್ತಾಳೆ. ಇದು ಲೀಲಾಳನ್ನು ಮತ್ತಷ್ಟು ಗೊಂದಲಕ್ಕೆ ಒಳಗಾಗುವಂತೆ ಮಾಡುತ್ತದೆ. ಆದರೆ, ದುರ್ಗಾ ಎಲ್ಲಿಗೆ ಹೋಗಿದ್ದಾಳೆ ಎನ್ನುವುದು ಮಾತ್ರ ತಿಳಿದಿಲ್ಲ.
ಲೀಲಾಳಿಗೆ ದುರ್ಗಾ ಮಾತಿನ ಮೇಲೆ ನಂಬಿಕೆ ಬಂದಿದೆ
ಲೀಲಾಳಿಗೆ ದುರ್ಗಾ ನೇರವಾಗಿ ಬಂದು ಅಂತರಾ ನಿಜವಲ್ಲ. ಅವಳು ನಾಟಕ ಮಾಡುತ್ತಿದ್ದಾಳೆ. ಅವಳ ಬಣ್ಣವನ್ನು ಬಯಲು ಮಾಡಬೇಕು. ಇಲ್ಲದೇ ಹೋದರೆ, ಈ ಮನೆಗೆ ತೊಂದರೆ ಆಗುವುದಂತೂ ಗ್ಯಾರೆಂಟಿ ಎಂದು ಲೀಲಾಳಿಗೆ ಹೇಳಿರುತ್ತಾಳೆ. ಆದರೆ ಲೀಲಾಳಿಗೆ ದುರ್ಗಾ ಮಾತಿನ ಮೇಲೆ ಕೊಂಚವೂ ನಂಬಿಕೆಯೇ ಇರುವುದಿಲ್ಲ.
ದುರ್ಗಾ ಮಾತುಗಳನ್ನು ಕೇಳಿದಾಗಿನಿಂದಲೂ ಪ್ರತಿಯೊಂದು ವಿಚಾರವನ್ನೂ ಗಮನಿಸುತ್ತಿರುವ ಲೀಲಾಳಿಗೆ ಈಗೀಗ ದುರ್ಗಾ ಹೇಳಿದ್ದು ನಿಜ ಇರಬಹುದು ಎಂದು ಯೋಚಿಸುತ್ತಿದ್ದಾಳೆ. ಯಾಕೆಂದರೆ, ಅಜ್ಜಿ ಕೂಡ ಅಂತರಾ ಬಗ್ಗೆ ಅವಳು ನಡೆದುಕೊಳ್ಳುತ್ತಿರುವುದು ಯಾವುದೂ ಸೊಸೆ ಅಂತ ಅನಿಸುವುದೇ ಇಲ್ಲ ಎಂದು ಹೇಳಿರುತ್ತಾರೆ. ಈ ಎಲ್ಲಾ ಮಾತುಗಳು ಲೀಲಾಳನ್ನು ಗೊಂದಲಕ್ಕೆ ನೂಕಿದೆ.

ಅಂತರಾ ಕನಸಿನ ಮನೆಯಲ್ಲಿ ಸುಳ್ಳು ಹೇಳಿದ ಪ್ರಾರ್ಥನಾ
ಇತ್ತ AJ ಅಂತರಾಳನ್ನು ಅವರಿಬ್ಬರು ಕನಸು ಕಂಡು ನಿರ್ಮಾಣ ಮಾಡುತ್ತಿದ್ದ ಮನೆಯ ಬಳಿ ಕರೆದುಕೊಂಡು ಹೋಗುತ್ತಾನೆ. ನಾನೂ ಕೂಡ ಇಲ್ಲಿಗೆ ಕರೆದುಕೊಂಡು ಬರುತ್ತೀರಾ ಎಂದುಕೊಂಡಿದ್ದೆ ಎನ್ನುತ್ತಾಳೆ. ಆದರೆ, ಅಂತರಾಳಿಗೆ ಈ ಮನೆಯ ಬಗ್ಗೆ ಏನೂ ಗೊತ್ತಿರುವುದಿಲ್ಲ. ಆದರೆ, ತನಗೆ ಹಿಂದಿನದೆಲ್ಲಾ ನೆನಪಿಗೆ ಬಂದಿದೆ ಎಂದು ಸುಳ್ಳು ಹೇಳಿರುತ್ತಾಳೆ. ಇದು ಈಗ ಅಂತರಾಳನ್ನು ಪೀಕಲಾಟಕ್ಕೆ ಸಿಲುಕುವಂತೆ ಮಾಡಿದೆ.
AJ ಬಳಿ ಸಿಕ್ಕಿ ಬಿದ್ದ ಡ್ಯೂಪ್ಲಿಕೇಟ್ ಅಂತರಾ
AJ ಆ ಮನೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾನೆ. ಈ ಮನೆ ಯಾರ ಕನಸು..? ತುಳಸಿ ಕಟ್ಟೆ ಎಲ್ಲಿ ಬರಬೇಕು ಎಂದೆಲ್ಲಾ ಪ್ರಶ್ನಿಸುತ್ತಾನೆ. ಆಗ ಅಂತರಾ ಸುಳ್ಳು ಹೇಳುತ್ತಾಳೆ. ಇದೆಲ್ಲವೂ ಎಜೆಗೆ ಅನುಮಾನ ತರಿಸುತ್ತದೆ. ಯಾಕೆ ಅಂತರಾ ನಿನಗೆ ಇದೆಲ್ಲಾ ನೆನಪಿಲ್ವಾ..? ಯಾಕೆ ಏನೇನೋ ಮಾತನಾಡುತ್ತಿದ್ದೀಯಾ ಎಂದು ಕೇಳುತ್ತಾನೆ. ಆಗ ಅಂತರಾಳಿಗೆ ಭಯವಾಗುತ್ತದೆ.
ತಾನು ಸುಳ್ಳು ಹೇಳುತ್ತಿರುವುದು ಎಜೆಗೆ ಗೊತ್ತಾದರೆ ಕಷ್ಟವಾಗುತ್ತದೆ ಎಂದು ತಿಳಿದು ಸೈಡಿಗೆ ಹೋಗಿ ಇವಳ ಹಿಂದೆ ಇರುವ ವ್ಯಕ್ತಿಗೆ ಫೋನ್ ಮಾಡಿ ಮಾತನಾಡುತ್ತಾಳೆ. ಇದೇ ವೇಳೆಗೆ ಎಜೆ ಕೂಡ ಬರುತ್ತಾನೆ. AJ ಎದುರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುತ್ತಾಳಾ ಎಂದು ಕಾದು ನೋಡಬೇಕಿದೆ.