Hitler Kalyana: ಮೋಸ ಮಾಡುತ್ತಿರುವ ಪ್ರಾರ್ಥನಾಗೆ ತಿರುಗೇಟು ನೀಡಿದ ಲೀಲಾ, ಲೀಲಾ ಕೊಟ್ಟ ಏಟಿಗೆ ಪ್ರಾರ್ಥನಾ ಕಕ್ಕಾಬಿಕ್ಕಿ.
ಲೀಲಾ ಮುಂದೆ ಪ್ರಾರ್ಥನಾ ಮುಖವಾಡ ಬಯಲು, ಪ್ರಾರ್ಥನಾಳಿಗೆ ತಿರುಗೇಟು ನೀಡಿದ ಲೀಲಾ
Hitler Kalyana Serial Latest Episode: ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿಯಲ್ಲಿ ಪ್ರಾರ್ಥನಾ ಅಂತರ ಹೆಸರಿನಲ್ಲಿ ಮನೆಯವರಿಗೆಲ್ಲ ನಂಬಿಕೆ ದ್ರೋಹ ಮಾಡುತ್ತಿದ್ದು. ಇದೀಗ ಲೀಲಾಗೆ ಪ್ರಾರ್ಥನಾ ಬಂಡವಾಳ ಎಲ್ಲ ತಿಳಿದಿದೆ. ಅಂತರಾ ಅಕ್ಕ ಎಂದು ತಿಳಿದಿದ್ದ ಲೀಲಾಗೆ ಮಾತ್ರ ಬಹಳ ದೊಡ್ಡ ಶಾಕ್ ಆಗುತ್ತದೆ.ಅಂತರಾ ಅಲ್ಲ ಇದು ಪ್ರಾರ್ಥನಾ ಎಂದು ತಿಳಿದ ಲೀಲಾ ಹೇಗಾದರೂ ಮಾಡಿ ಪ್ರಾರ್ಥನಾ ಮುಖವಾಡವನ್ನು ಮನೆಯವರ ಎದುರು ತೋರಿಸಲೇಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.
ಆದರೆ ಲೀಲಾಗೆ ನಿಜಾಂಶ ತಿಳಿದಿದೆ ಎನ್ನುವ ವಿಚಾರ ಪ್ರಾರ್ಥನಾಳಿಗೆ ಮಾತ್ರ ಗೊತ್ತಿಲ್ಲದೆ ಹೋಯಿತು. ಇದೀಗ ಲಕ್ಷ್ಮೀ ಏಜೆಗೆ ಬಹಳ ಹಸಿವಾಗಿದೆ ಇದನ್ನು ಲೀಲಾ ಬಳಿ ಹೇಳಬೇಕು ಅವರಿಗೆ ಊಟ ಬಡಿಸಲು ಹೇಳಬೇಕು ಎಂದುಕೊಂಡು ಹೋಗುತ್ತಾಳೆ ಅದನ್ನು ಕೇಳಿಸಿಕೊಂಡು ಸರಸ್ವತಿ ಪ್ರಾರ್ಥನ ಬಳಿ ಹೇಳುತ್ತಾಳೆ.
ಪ್ರಾರ್ಥನ ಪ್ಲಾನ್ ತಲೆಕೆಳಗೆ ಮಾಡಿದ ಲೀಲಾ
ಏಜೆ ಮನ ಗೆಲ್ಲಲು ಇದುವೇ ದೊಡ್ಡ ಚಾನ್ಸ್ ಎಂದುಕೊಂಡ ಪ್ರಾರ್ಥನ ಮೆತ್ತಗೆ ಡೈನಿಂಗ್ ರೂಮ್‌ಗೆ ಹೋಗುತ್ತಾಳೆ. ಅಲ್ಲಿನ ದೃಶ್ಯ ನೋಡಿದ ಪ್ರಾರ್ಥನಾಗೆ ಬಹಳ ಶಾಕ್ ಆಗುತ್ತದೆ. ಅಲ್ಲಿ ಲೀಲಾ ಏಜೆಗೆ ಊಟ ಬಡಿಸುತ್ತಾ ಇರುತ್ತಾಳೆ. ಇದನ್ನು ಕಂಡ ಪ್ರಾರ್ಥನಾಗೆ ಬಹಳ ಸಿಟ್ಟು ಬರುತ್ತದೆ. ಹಾಗೆಯೇ ಇದನ್ನು ನೋಡಿದ ಲೀಲಾಗೆ ಬಹಳ ನಗು ಬರುತ್ತದೆ ಅಂತರಾ ಮುಖವಾಡ ಇಟ್ಟುಕೊಂಡು ಬಂದಿರುವ ಪ್ರಾರ್ಥನಾಗೆ ಆಕೆಯ ಅಸ್ತಿತ್ವಕ್ಕೆ ಪೆಟ್ಟು ಬೀಳುವ ಹಾಗೆ ಮಾಡುತ್ತಾ ಇದ್ದಾಳೆ ಲೀಲಾ.
ಲೀಲಾ ಪ್ರಾರ್ಥನಾಳನ್ನು ಕಂಡು ಬನ್ನಿ ಅಕ್ಕ ಅಲ್ಲಿ ಯಾಕೆ ನಿಂತುಕೊಂಡು ಇದ್ದೀರಿ ಎಂದು ಹೇಳಿದಾಗ ಏಜೆಗೆ ಅಂತರಾ ಅಲ್ಲಿರುವುದು ತಿಳಿಯುತ್ತದೆ. ಆತ ಮೆತ್ತಗೆ ಅಂತರಾಳನ್ನು ಕರೆಯುತ್ತಾನೆ. ಬಳಿಕ ಊಟ ಮಾಡಿದ್ದಿಯಾ ಎಂದು ಕೇಳಿದಾಗ ಲೀಲಾ ಮಧ್ಯೆ ಬಾಯಿ ಹಾಕುತ್ತಾಳೆ.
ಪ್ರಾರ್ಥನಾ ಉಪವಾಸ ಇರುವಂತೆ ಮಾಡಿದ ಲೀಲಾ
ಅಂತರಾ ಅಕ್ಕ ಈಗಾಗಲೇ ಊಟ ಮಾಡಿದ್ದಾರೆ. ಒಮ್ಮೆ ಊಟ ಮಾಡಿ ಮತ್ತೆ ಊಟ ಮಾಡಲು ಆಗಲ್ಲ. ಅವರು ಈಗ ಡಯೆಟ್‌ನಲ್ಲಿ ಇದ್ದಾರೆ. ಹಾಗು ಅವರು ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸಿದ್ದಾರೆ ಎಂದೆಲ್ಲ ಲೀಲಾ ಹೇಳುತ್ತಾಳೆ. ಆಗ ಏಜೆ ಸನಿಹಕ್ಕೆ ಬಂದ ಲೀಲಾಳನ್ನು ಕಂಡ ಪ್ರಾರ್ಥನಾ ಮಾತ್ರ ಎನು ಮಾತನಾಡದೆ ಸುಮ್ಮನೆ ಆಗುತ್ತಾಳೆ. ಆದರೆ ಲೀಲಾ ಮೇಲೆ ಬಹಳ ಕೋಪ ಬರುತ್ತದೆ.
ನಾನು ಏನು ಮಾತನಾಡಲೇ ಇಲ್ಲ ಆದರೂ ಲೀಲಾ ಈ ರೀತಿ ಹೇಳುತ್ತಿರುವುದು ಯಾಕೆ ಎಂದೆಲ್ಲ ಮನದಲ್ಲಿ ಅಂದುಕೊಂಡು ಅಭಿ ಎಂದು ಕರೆದಾಗ ಹೋಗು ಪ್ರಾರ್ಥನಾ ಮಲಗು ಎಂದು ಏಜೆ ಹೇಳುತ್ತಾರೆ. ಪ್ರಾರ್ಥನಾಗೆ ಏನು ಮಾತಾಡಬೇಕು ಎಂದು ತಿಳಿಯದ ಹಾಗೆ ಆಗುತ್ತದೆ.
ಸರು ಮೇಲೆ ರೇಗಿದ ಪ್ರಾರ್ಥನಾ
ಇನ್ನೂ ಕೋಪದಿಂದ ರೂಮ್ ನೊಳಗೆ ಹೋದ ಅಂತರಾ ಮಾತ್ರ ಲೀಲಾ ವಿರುದ್ದ ಕಿಡಿಕಾರುತ್ತ ಇರುತ್ತಾಳೆ. ನನ್ನನ್ನು ಒಂದು ಹೊತ್ತು ಊಟ ಮಾಡಲು ಲೀಲಾ ಬಿಡಲಿಲ್ಲ ಆಕೆಯನ್ನು ನಾನು ಸುಮ್ಮನೆ ಬಿಡುವುದು ಇಲ್ಲ ಎಂದೆಲ್ಲ ಹೇಳುತ್ತಾರೆ. ಇಷ್ಟೆಲ್ಲ ಆಗಿದ್ದು ಸರುವಿನಿಂದ ಎಂದಾಗ ಆಕೆ ಬರುತ್ತಾಳೆ. ಏಜೆ ಊಟ ಮಾಡಿದ್ರ ಎಂದು ಕೇಳಿದಾಗ ಕೋಪಗೊಂಡ ಪ್ರಾರ್ಥನಾ ಸರು ಮೇಲೆ ರೇಗಾಡುತ್ತಾಳೆ. ಮುಂದಿನ ಸಂಚಿಕೆಯಲ್ಲಿ ಮುಂದೇನು ಆಗಲಿದೆ ಎಂದು ಕಾದು ನೋಡಬೇಕಿದೆ.