Honda Bike: ಆಕರ್ಷಕ ಲುಕ್ ನಲ್ಲಿ ಹೋಂಡಾ ಕಂಪನಿಯ ಇನ್ನೊಂದು ಬೈಕ್ ಲಾಂಚ್, ಕಡಿಮೆ ಬೆಲೆ ಮತ್ತು 40 Km ಮೈಲೇಜ್.

ಹೊಸ ಲುಕ್ ನೊಂದಿಗೆ ಹೋಂಡಾ ಕಂಪನಿಯ ಬೈಕ್, ಇಂದೇ ಬುಕ್ ಮಾಡಿ.

Honda New Bike: ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (Honda Motors) (HMSI) ಹಲವಾರು ಲುಕ್ ಇರುವ ಅನೇಕ ಬೈಕ್ ಈಗಾಗ್ಲೇ ಬಿಡುಗಡೆ ಮಾಡಿದೆ. ಹಾಗೆಯೇ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿ ಎಂದು ಹೆಸರು ಮಾಡಿದೆ.

ಈ ಬಾರಿ ಬರುವ ಗಣೇಶ ಹಬ್ಬಕ್ಕೆ ಬೈಕ್ ಖರೀದಿ ಮಾಡುವ ಪ್ಲಾನ್ ನಿಮ್ಮದಾಗಿದ್ದರೆ ಈ ಕಂಪನಿಯು ಹೊಸ ಬೈಕ್ ಅನ್ನು ಪರಿಚಯಿಸುತ್ತಿದೆ. ಹಾಗಾಗಿ ಹಬ್ಬದ ಸೀಸನ್ ನಲ್ಲಿ ಹೆಚ್ಚಿನ ಗ್ರಾಹಕರು ಸೆಳೆಯಲು ತನ್ನ 2023ರ ಹೋಂಡಾ CB200X ( Honda CB200X) ಬೈಕ್ ಅನ್ನು ಹೋಂಡಾ ಮೋಟಾರ್‌ಸೈಕಲ್ ಕಂಪನಿ ಬಿಡುಗಡೆಗೊಳಿಸಿದೆ.

honda cb200x bike
Image Credit: Autocarindia

ಹೋಂಡಾ CB200X ಬೈಕ್ ನ ಇಂಜಿನ್ ಸಾಮರ್ಥ್ಯ

ಹೊಸ 2023ರ ಹೋಂಡಾ CB200X ಬೈಕ್ 10-ವರ್ಷದ ವಾರಂಟಿಯೊಂದಿಗೆ (7-ವರ್ಷದ ಆಯ್ಕೆಯ ವಾರಂಟಿ) ನೀಡಿದೆ. ಈ ಹೊಸ ಹೋಂಡಾ CB200X ಬೈಕಿನಲ್ಲಿ 184.04cc, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿ 8,500rpm ನಲ್ಲಿ 17.03bhp ಮತ್ತು 6,000rpm ನಲ್ಲಿ 15.9Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೋಂಡಾ CB200X ಬೈಕ್ ನ ವಿಶೇಷತೆ

ಹೊಸದಾಗಿ ಬಿಡುಗಡೆಯಾದ 2023ರ ಹೋಂಡಾ CB200X ಬೈಕಿನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಬೈಕ್ ಗೇರ್‌ಗಳನ್ನು ಆಕ್ರಮಣಕಾರಿಯಾಗಿ ಬದಲಾಯಿಸುವಾಗ ಚಕ್ರ ಲಾಕ್ ಆಗುವುದನ್ನು ತಡೆಯಲು ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಒಳಗೊಂಡಿದೆ. ಹೊಸ ಹೋಂಡಾ CB200X ಬೈಕ್ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ USD ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅಬ್ಸಾರ್ಬರ್ ಅನ್ನು ಒಳಗೊಂಡಿದೆ.

honda cb200x bike Feature
Image Credit: Carandbike

ಹೋಂಡಾ CB200X ಬೈಕ್ ವಿಭಿನ್ನ ಬಣ್ಣಗಳಲ್ಲಿ ಆಯ್ಕೆ

ಹೊಸದಾಗಿ ಬಿಡುಗಡೆಯಾದ 2023ರ ಹೋಂಡಾ CB200X ಬೈಕ್ ಈಗ ಇತ್ತೀಚಿನ BS6 ಹಂತ 2 ಎಮಿಷನ್ ಮಾನದಂಡಗಳನ್ನು ಅನುಸರಿಸುತ್ತದೆ. ಈ ಬೈಕಿನಲ್ಲಿ ನವೀಕರಿಸಿದ ಪವರ್‌ಟ್ರೇನ್ ಜೊತೆಗೆ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಪಡೆಯಲಾಗಿದೆ. ಹೊಸ ಹೋಂಡಾ CB200X ಬೈಕ್ ಡೀಸೆಂಟ್ ಬ್ಲೂ ಮೆಟಾಲಿಕ್, ಪರ್ಲ್ ನೈಟ್‌ಸ್ಟಾರ್ ಬ್ಲಾಕ್ ಮತ್ತು ಸ್ಪೋರ್ಟ್ಸ್ ರೆಡ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಮೂರು ಬಣ್ಣಗಳ ಆಯ್ಕೆಗಳಲ್ಲಿ ಸೆಂಟ್ ಬ್ಲೂ ಮೆಟಾಲಿಕ್ ಹೊಸದಾಗಿ ಸೇರಿಸಲಾಗಿದೆ.

ಹೋಂಡಾ CB200X ಬೈಕ್ ನ ಸುರಕ್ಷತಾ ಮಾಹಿತಿ

ಇನ್ನು ಸುರಕ್ಷತೆಯ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಬಗ್ಗೆ ಹೇಳುವುದಾದರೆ, ಈ ಹೊಸ ಹೋಂಡಾ ಬೈಕಿನಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ರಮವಾಗಿ 276 mm ಮತ್ತು 220 mm ಪೆಟಲ್ ಡಿಸ್ಕ್ ಬ್ರೇಕ್ ಗಳನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್-ಚಾನೆಲ್ ABS ಅನ್ನು ಜೋಡಿಸಲಾಗಿದೆ.ಈ ಬೈಕಿನಲ್ಲಿ LED ಲೈಟ್ ತಂತ್ರಜ್ಞಾನ, ಟ್ವಿನ್ ಟ್ರಿಪ್ ಮೀಟರ್‌ಗಳು, ಬ್ಯಾಟರಿ ವೋಲ್ಟ್‌ಮೀಟರ್, ಗೇರ್ ಪೊಸಿಷನ್ ಇಂಡಿಕೇಟರ್ ಮತ್ತು ಒಂದು ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

Leave A Reply

Your email address will not be published.