Honda Sports Bike: ಯುವಕರಿಗಾಗಿ ಇನ್ನೊಂದು ಸ್ಪೋರ್ಟ್ ಬೈಕ್ ಲಾಂಚ್ ಮಾಡಿದ ಹೋಂಡಾ, ಬೆಲೆ ಕೊಂಚ ದುಬಾರಿ.

ದುಬಾರಿ ಬೆಲೆಯಲ್ಲಿ ಅಧಿಕ ವಿಶೇಷತೆ ಹೊಂದಿರುವ ಬೈಕ್ ಅನ್ನು ಹೋಂಡಾ ಮೋಟಾರ್.

Honda XL750 Transalp: ಭಾರತದಲ್ಲಿ ಹೋಂಡಾ ಮೋಟಾರ್ (Honda Motors) ಕಂಪನಿ ಉನ್ನತ ಮಟ್ಟದಲ್ಲಿರುವ ಕಂಪನಿ ಆಗಿದೆ. ಹೋಂಡಾ (Honda) ಕಂಪನಿಯ ವಾಹನಗಳು ಬಹಳ ವಿಶೇಷತೆ ಹೊಂದಿದ್ದು, ಅಷ್ಟೇ ಅಲ್ಲದೆ ದೇಶದಲ್ಲಿ ಅಧಿಕ ಬೇಡಿಕೆಯನ್ನು ಹೊಂದಿದ್ದಾಗಿದೆ. ಈಗ ಹೋಂಡಾ ಕಂಪನಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡಿದೆ.

ಹೊಸ ಬೈಕ್ ನ ಹೆಸರು ಎಕ್ಸ್‌ಎಲ್ 750 ಟ್ರಾನ್ಸಲ್ಪ್ (XL750 Transalp) ಆಗಿರುತ್ತದೆ . ದೇಶದಲ್ಲಿ ಹೋಂಡಾ ಕಂಪನಿಯು ಪ್ರೀಮಿಯಂ ಬೈಕ್ ಮಾದರಿಗಳಿಗೆ ಹೆಚ್ಚುತ್ತಿರುವ ಬೇಡಿಕೆ ಆಧರಿಸಿ ಎಕ್ಸ್‌ಎಲ್750 ಟ್ರಾನ್ಸಲ್ಪ್ ಅಡ್ವೆಂಚರ್ ಬೈಕ್ ಪರಿಚಯಿಸಿದ್ದು ಹೊಸ ಬೈಕ್ ಮಾದರಿಯು ಸಿಬಿಯು ಆಮದು ನೀತಿ ಅಡಿಯಲ್ಲಿ ಭಾರತದಲ್ಲಿ ಮಾರಾಟಗೊಳ್ಳಲಿದೆ. ಹೀಗಾಗಿ ಹೊಸ ಬೈಕ್ ಮಾದರಿಯು ಸೀಮಿತ ಸಂಖ್ಯೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಮೊದಲ ಹಂತದಲ್ಲಿ ಕೇವಲ 100 ಗ್ರಾಹಕರಿಗಾಗಿ ಮಾತ್ರ ಮಾರಾಟ ಮಾಡಲಾಗುತ್ತಿದೆ.

Honda XL750 Transalp
Image Credit: Taazatime

ಎಕ್ಸ್‌ಎಲ್750 ಟ್ರಾನ್ಸಲ್ಪ್ (XL750 Transalp) ಬೈಕ್ ನ ವಿಶೇಷತೆಗಳು

ಹೊಸ ಎಕ್ಸ್‌ಎಲ್750 ಟ್ರಾನ್ಸಲ್ಪ್ ಪ್ರೀಮಿಯಂ ಬೈಕ್ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಈ ಹೊಸ ಬೈಕಿನಲ್ಲಿ ಕನೆಕ್ವಿಟಿ ಸೌಲಭ್ಯಕ್ಕಾಗಿ 5 ಇಂಚಿನ ಟಿಎಫ್ ಟಿ ಡಿಸ್ ಪ್ಲೇ ಯೊಂದಿಗೆ ಹೋಂಡಾ ಸ್ಮಾರ್ಟ್ ವಾಯ್ಸ್ ಕಂಟ್ರೋಲ್ ಸಿಸ್ಟಂ ಜೋಡಿಸಲಾಗಿದ್ದು, ಇದು ಎಮರ್ಜೆನ್ಸಿ ಬ್ರೇಕ್ ಸಿಗ್ನಲ್, ಆಟೋಮ್ಯಾಟಿಕ್ ಟರ್ನ್ ಸಿಗ್ನಲ್ ಸೌಲಭ್ಯಗಳನ್ನು ಒಳಗೊಂಡಿದೆ.

ಹಾಗೆಯೇ ಟಿಎಫ್ ಟಿ ಡಿಸ್ ಪ್ಲೇ ಮೂಲಕ ಬೈಕ್ ಸವಾರರು ಸ್ಪೀಡೋ ಮೀಟರ್, ಗೇರ್ ಪೊಸಿಷನ್ ಇಂಡಿಕೇಟರ್, ಫ್ಯೂಯಲ್ ಗೇಜ್ ಸೇರಿದಂತೆ ಇತರೆ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಹೊಸ ಬೈಕ್ ಮಾದರಿಯಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಇದರಲ್ಲಿ ಸ್ವಿಚ್ ಮಾಡಬಹುದಾದ ಡ್ಯುಯಲ್ ಚಾನಲ್ ಎಬಿಎಸ್ ನೊಂದಿಗೆ ಮುಂಭಾಗದ ಚಕ್ರದಲ್ಲಿ 310 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯ ಚಕ್ರದಲ್ಲಿ 256 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಜೋಡಿಸಲಾಗಿದೆ. ಜೊತೆಗೆ ಹೊಸ ಬೈಕಿನಲ್ಲಿ ಅಡ್ವೆಂಚರ್ ಬೈಕ್ ಚಾಲನೆಗೆ ಸಹಕಾರಿಯಾಗುವ ಸ್ಪೋರ್ಟ್, ಸ್ಟ್ಯಾಂಡರ್ಡ್, ರೈನ್, ಗ್ರಾವೆಲ್ ಮತ್ತು ಯೂಸರ್ ಎಂಬ ಐದು ರೈಡ್ ಮೋಡ್‌ಗಳನ್ನು ನೀಡಲಾಗಿದೆ.

Honda XL750 Transalp Price
Image Credit: Motorcyclenews

ಎಕ್ಸ್‌ಎಲ್750 ಟ್ರಾನ್ಸಲ್ಪ್ ಬೈಕ್ ನ ಬೆಲೆ

ಎಕ್ಸ್‌ಎಲ್750 ಟ್ರಾನ್ಸಲ್ಪ್ ಅಡ್ವೆಂಚರ್ ಹೊಸ ಬೈಕಿನ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ.11 ಲಕ್ಷ ಬೆಲೆ ಹೊಂದಿದೆ ಎಂದು ಕಂಪನಿ ವರದಿ ಮಾಡಿದೆ ಎನ್ನಲಾಗಿದೆ .

ಎಕ್ಸ್‌ಎಲ್750 ಟ್ರಾನ್ಸಲ್ಪ್ ಬೈಕ್ ನ ಎಂಜಿನ್ ಸಾಮರ್ಥ್ಯ

ಹೊಸ ಎಕ್ಸ್‌ಎಲ್750 ಟ್ರಾನ್ಸಲ್ಪ್ ಅಡ್ವೆಂಚರ್ ಹೊಸ ಬೈಕಿನ ಎಂಜಿನ್ ನಿಕಲ್ ಸಿಲಿಕಾನ್ ಕಾರ್ಬೈಡ್ ಕೋಟಿಂಗ್ ಹೊಂದಿದ್ದು, ವೋರ್ಟೆಕ್ಸ್ ಫ್ಲೋ ಡಕ್ಟ್ಸ್, ಥ್ರೊಟಲ್ ಬೈ-ವೈರ್ ಟೆಕ್, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ (HSTC) ಎಂಜಿನ್ ಬ್ರೇಕಿಂಗ್ ಈ ಬೈಕಿನ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಈ ಬೈಕ್ ಮಾದರಿಯಲ್ಲಿ ಹೋಂಡಾ ಕಂಪನಿಯು 755 ಸಿಸಿ, ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ ಜೋಡಣೆ ಮಾಡಿದ್ದು, ಇದು 270 ಡಿಗ್ರಿ ಕ್ರ್ಯಾಂಕ್‌ನಿಂದ ಚಾಲಿತವಾಗಿದೆ. ಇದರೊಂದಿಗೆ ಹೊಸ ಬೈಕಿನಲ್ಲಿ 6-ಸ್ಪೀಡ್ ಗೇರ್ ಬಾಕ್ಸ್ ನೀಡಲಾಗಿದ್ದು, ಇದು 90.51 ಹಾರ್ಸ್ ಪವರ್ ಮತ್ತು 75 ಎನ್‌ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

Leave A Reply

Your email address will not be published.