Home Scheme: ಸ್ವಂತ ಮನೆ ಇಲ್ಲ ಬೀದಿ ಬೀದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್, ಸ್ವಂತ ಮನೆಗೆ ಇಂದೇ ಅರ್ಜಿ ಸಲ್ಲಿಸಿ.

ಸ್ವಂತ ಮನೆ ಇಲ್ಲ ಬೀದಿ ಬೀದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್, ಸ್ವಂತ ಮನೆಗೆ ಇಂದೇ ಅರ್ಜಿ ಸಲ್ಲಿಸಿ.

Housing Scheme For Street Vendors: ನಗರ ಪ್ರದೇಶದ ವಸತಿ ರಹಿತ (ಸ್ವಂತ ಮನೆ ಇಲ್ಲದೇ ಇರುವ) ಬೀದಿ ಬದಿ ಪ್ಯಾಪಾರಸ್ಥರಿಗೆ ಕೇಂದ್ರ ಸರ್ಕಾರದಿಂದ ವಸತಿ ಸೌಲಭ್ಯ ಸಿಗಲಿದೆ. ಮನೆಯ ಅವಶ್ಯಕೆತೆ ಇರುವವರು ಈ ಸೌಲಭ್ಯ ಪಡೆಯುವುದು ಉತ್ತಮ.

ಕೇಂದ್ರ ಸರ್ಕಾರದ ಸಹಾಯಧನ, ಎನ್.ಎಮ್.ಡಿ.ಸಿ ಹಾಗೂ ಸಿ.ಎಸ್.ಆರ್. ಅನುದಾನದಡಿ ಪ್ರೋತ್ಸಾಹ ಧನ ಹಾಗೂ ಬ್ಯಾಂಕ್ ಸಾಲ ಸೌಲಭ್ಯ ಸರ್ಕಾರ ನೀಡಲಿದ್ದು, ಸರ್ಕಾರ ನೀಡುವ ಈ ಸೌಲಭ್ಯಕ್ಕಾಗಿ ನಗರ ಪ್ರದೇಶದ ವಸತಿ ರಹಿತ ಅರ್ಹ ಬೀದಿ ಬದಿ ವ್ಯಾಪಾರಸ್ಥರು ಅರ್ಜಿ ಹಾಕಬಹುದು.

Housing Scheme For Street Vendors
Image Credit: Newsclick

ನಿಗದಿತ ಅವಧಿಯ ಒಳಗೆ ಅರ್ಜಿ ಹಾಕತಕ್ಕದ್ದು

ಕೇಂದ್ರ ಸರ್ಕಾರದ ಪಿಎಂಎವೈ, ಹೆಚ್‍ಎಫ್‍ಎ, ಪಾಲುದಾರಿಕೆಯಲ್ಲಿ ಕೈಗೆಟುಕುವ ವಸತಿ ಯೋಜನೆಯಡಿ ನಗರದ ಮುಂಡ್ರಿಗಿ ಆಶ್ರಯ ಬಡಾವಣೆಯಲ್ಲಿ ಜಿ+2 ಮಾದರಿಯ 5616 ಮನೆಗಳ ನಿರ್ಮಾಣ ಯೋಜನೆ ಅನುಷ್ಠಾನಗೊಳಿಲಾಗುತ್ತಿದೆ.

ವಸತಿ ಸೌಲಭ್ಯ ಪಡೆಯಲು ಇಚ್ಛಿಸುವ ನಗರದ ವಸತಿ ರಹಿತಬೀದಿ ಬದಿ ವ್ಯಾಪಾರಸ್ಥರು ಆರ್ಹತೆಯ ಮಾನದಂಡ ಹಾಗೂ ಫಲಾನುಭವಿ ವಂತಿಕೆ ಪಾವತಿಸಲು ಶಕ್ತರಾಗಿರುವ ಹಾಗೂ ಆಸಕ್ತಿ ಹೊಂದಿರುವ ಕುಟುಂಬಗಳು ಕೂಡಲೇ ನಿಗಧಿತ ನಮೂನೆಯ ಅರ್ಜಿ ಪಡೆದು ಅವಶ್ಯಕ ಹಾಗೂ ಅಗತ್ಯ ದಾಖಲೆಗಳೊಂದಿಗೆ ಮಹಾನಗರ ಪಾಲಿಕೆಯ ಹಳೇ ಕಚೇರಿಗೆ ಭೇಟಿ ನಿಡಿ ಅರ್ಜಿ ಸಲ್ಲಿಸಬಹುದು. ನವೆಂಬರ್.06 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಆದೇಶಿಸಲಾಗಿದೆ.

New Scheme For Street Vendors
Image Credit: Newsonair

ಈ ಯೋಜನೆಗೆ ಅರ್ಜಿ ಹಾಕಲು ಬೇಕಾಗಿರುವ ಅರ್ಹತೆಗಳು

ಈ ಯೋಜನೆಗೆ ಅರ್ಜಿ ಹಾಕಲು ಮುಖ್ಯವಾಗಿ ಅರ್ಜಿದಾರನು/ಳು ವಸತಿ ರಹಿತರು ಆಗಿರಬೇಕು ಅಂದರೆ ಯಾವುದೇ ಸ್ವಂತ ಮನೆ ಇಲ್ಲದವರಾಗಿರಬೇಕು ,ಹಾಗು ನಗರದ ನಿವಾಸಿಗಳಾಗಿರಬೇಕು, ಬೀದಿ ಬದಿಯ ವ್ಯಾಪಾರಸ್ಥರ ಗುರುತಿನ ಚೀಟಿ ಹೊಂದಿರಬೇಕು ಅಥವಾ ಪಾಲಿಕೆಯಿಂದ ಪಡೆಯಲಾದ ಎಲ್.ಓ.ಆರ್ ಪ್ರಮಾಣ ಪತ್ರ ಹೊಂದಿರಬೇಕು, ವಾರ್ಷಿಕ ಆದಾಯ ರೂ.3 ಲಕ್ಷ ಮೀರಿರಬಾರದು,

ಫಲಾನುಭವಿ ವಂತಿಗೆ ಪಾವತಿಸುವುದು ಹಾಗೂ ಬ್ಯಾಂಕ್ ಸಾಲ ಮರುಪಾವತಿ ಮಾಡಲು ಬದ್ದರಾಗಿರಬೇಕು, ರೂ.90 ಸಾವಿರ ಆದಾಯ ಪ್ರಮಾಣ ಪತ್ರ ಹೊಂದಿರಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್‍ಸಾಬ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಅರ್ಹತೆಗಳನ್ನು ಹೊಂದಿದವರು ಮಾತ್ರ ಈ ಯೋಜನೆಯಡಿ ಅರ್ಜಿ ಹಾಕಬಹುದಾಗಿದೆ.

Leave A Reply

Your email address will not be published.