HSRP: ವಾಹನ ಹೊಂದಿರುವವರಿಗೆ ನವೆಂಬರ್ 17 ರಿಂದ ಹೊಸ ನಿಯಮ, ಸೀಜ್ ಆಗಲಿದೆ ಇಂತಹ ವಾಹನ.

ವಾಹನ ಮಾಲೀಕರಿಗೆ ಇನ್ನೊಂದು ಹೊಸ ನಿಯಮ ಘೋಷಣೆ ಮಾಡಿದ ಕೇಂದ್ರ ಸರ್ಕಾರ.

HSRP Online Registration: ದೇಶದಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ಅನೇಕ ಹೊಸ ನಿಯಮಗಳನ್ನ ಜಾರಿಗೆ ತರಲಾಗಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಅನೇಕ ಅವ್ಯವಹಾರಗಳು ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗ ವಾಹನಗಳಿಗೆ ಹೊಸ ನಿಯಮವನ್ನ ಜಾರಿಗೆ ತರಲು ತೀರ್ಮಾನವನ್ನ ಮಾಡಿದೆ ಎಂದು ಹೇಳಬಹುದು.

ಹೌದು 2019 ಕ್ಕೂ ಮುನ್ನ ನೋಂದಣಿ ಆದ ಎಲ್ಲಾ ವಾಹನಗಳಿಗೆ ಹೊಸ ನಿಯಮವನ್ನ ಜಾರಿಗೆ ತರಲು ಈಗ ಕೇಂದ್ರ ಮುಂದಾಗಿದ್ದು ಹೊಸ ನಿಯಮ ನವೆಂಬರ್ 17 ರಿಂದ ಜಾರಿಗೆ ಬರಲಿದೆ. ಇನ್ನು ನಿಯಮ ಪಾಲನೆ ಮಾಡದೆ ಇರುವ ವಾಹನಗಳನ್ನ ಸೀಜ್ ಮಾಡಲು ಕೂಡ ನಿರ್ಧಾರವನ್ನ ಮಾಡಲಾಗಿದೆ.

HSRP Online Registration Process
Image Credit: Zeenews

ಪ್ಲೇಟ್‌ ಅಳವಡಿಕೆ ಸ್ಥಳ ಮತ್ತು ಬುಕ್ಕಿಂಗ್ ಮಾಹಿತಿ

ವಾಹನ ಮಾಲೀಕರ ಕಚೇರಿ ಆವರಣ, ಮನೆಯ ಸಮೀಪದ ಸ್ಥಳವನ್ನು ಎಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ಆಯ್ಕೆ ಮಾಡಿಕೊಳ್ಳಬಹುದು. ವಾಹನ ಮಾಲೀಕರು ಎಚ್‌ಎಸ್‌ಆರ್‌ಪಿ ಅಳವಡಿಕೆಗೆ https://transport.karnataka.gov.in ಅಥವಾ www.siam.in ಮೂಲಕ ಕಾಯ್ದಿರಿಸಿಕೊಳ್ಳಬೇಕು. ಹಾಗು ಈ ಪ್ರಕ್ರಿಯೆಗೆ ಕೊನೆಯ ದಿನಾಂಕ ನವೆಂಬರ್ 17, 2023 ಆಗಿರುತ್ತದೆ.

HSRP Online Registration
Image Credit: Odishatv

HSRP ನಂಬರ್‌ ಪ್ಲೇಟ್‌ ಅಳವಡಿಕೆಯ ವಿಧಾನ

https://transpot.karnataka.gov.in ಅಥವಾ www.siam.in ಭೇಟಿ ನೀಡಿ, ಬುಕ್‌ HSRP ಕ್ಲಿಕ್‌ ಮಾಡಿ ನಂತರ ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ, ವಾಹನದ ಮೂಲ ವಿವರ ಭರ್ತಿ ಮಾಡಿ ಹಾಗು ನಿಮ್ಮ ಅನುಕೂಲಕ್ಕೆ ತಕ್ಕ ಡೀಲರ್‌ ಸ್ಥಳ ಆಯ್ಕೆ ಮಾಡಬೇಕು, ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು, ಮಾಲೀಕರ ಮೊಬೈಲ್‌ ಸಂಖ್ಯೆಗೆ ಒಟಿಪಿ ರವಾನಿಸಲಾಗುತ್ತದೆ ಕೊನೆಗೆ ನಿಮ್ಮ ಅನುಕೂಲಕ್ಕಾಗಿ HSRP ಅಳವಡಿಕೆಯ ದಿನಾಂಕ, ಸಮಯ, ಸ್ಥಳ ಆಯ್ಕೆ ಮಾಡಬೇಕು. ಈ ರೀತಿಯಾಗಿ HSRP ನಂಬರ್‌ ಪ್ಲೇಟ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

Leave A Reply

Your email address will not be published.