SUV: 27 Km ಮೈಲೇಜ್ ಕಾರು ಕೇವಲ 6 ಲಕ್ಷಕ್ಕೆ, ಒಂದೇ ದಿನದಲ್ಲಿ 50 ಕ್ಕೂ ಅಧಿಕ ಬುಕಿಂಗ್.
27 Km ಮೈಲೇಜ್ ನೀಡುವ ಈ ಕಾರು ಸಿಗಲಿದೆ ಅತಿ ಕಡಿಮೆ ಬೆಲೆಗೆ.
Hyundai Exter SUV: ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ SUV ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಎಸ್ ಯುವಿ ವಿಭಾಗದ ಕಾರ್ ಗಳನ್ನೂ ಗ್ರಾಹಕರು ಹೆಚ್ಚು ಇಷ್ಟಪಡುತ್ತಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಮಾರುತಿ, ಮಹಿಂದ್ರಾ ಸೇರಿದಂತೆ ಇನ್ನಿತರ ಕಂಪನಿಗಳು ತನ್ನ ಎಸ್ ಯುವಿ ಮಾದರಿಯನ್ನು ಪರಿಚಯಿಸುತ್ತಿವೆ.
ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಎಸ್ ಯೂವಿಗಳು ಸಕ್ಕತ್ ಬೇಡಿಕೆ ಪಡೆದುಕೊಂಡಿದೆ. ಇದೀಗ ಮಾರುಕಟ್ಟೆಯಲ್ಲಿ ಹೆಚ್ಚಿನ ಸೇಲ್ ಕಾಣುತ್ತಿರುವ ಎಸ್ ಯೂವಿಗಳಿಗೆ ಪೈಪೋಟಿ ನೀಡಲು ಹ್ಯುಂಡೈ (Hyundai) ಹೊಸ ಲುಕ್ ನಲ್ಲಿ ಎಸ್ ಯುವಿಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.

ಹುಂಡೈ ಎಕ್ಸ್ ಟರ್ SUV ಬಿಡುಗಡೆ
ಇತ್ತೀಚಿಗೆ ಬಿಡುಗಡೆಯಾದ ಟಾಟಾ ಪಂಚ್, ಮಾರುತಿ ಫ್ರಾಕ್ಸ್ ಎಸ್ ಯುವಿ ಮಾದರಿಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆಯುತ್ತಿದೆ.ಇದೀಗ ಈ ಮಾದರಿಗಳ ಎಸ್ ಯೂವಿಗಳ ಜೊತೆ ಸ್ಪರ್ದಿಸಲು ಹ್ಯುಂಡೈ ನೂತನ ಮಾದರಿಯ ಹುಂಡೈ ಎಕ್ಸ್ ಟರ್ SUV ಬಿಡುಗಡೆ ಮಾಡಿದೆ.
ಹುಂಡೈ ಎಕ್ಸ್ ಟರ್ ನ ಮುಂಭಾಗದಲ್ಲಿ ಚೌಕಾಕಾರದ ಹೌಸಿಂಗ್‌ನಲ್ಲಿ ಹೆಡ್‌ಲ್ಯಾಂಪ್ ಮುಂಭಾಗದ ಬಂಪರ್ ಅನ್ನು ಮುಂಭಾಗದಿಂದ ಪಿಯಾನೋ ಕಪ್ಪು ಬಣ್ಣದ ಪ್ಯಾರಾಮೆಟ್ರಿಕ್ ಗ್ರಿಲ್ ನಿಂದ ವಿನ್ಯಾಸಗೊಳಿಸಲಾಗಿದೆ. ಎಸ್ ಯುವಿಯಲ್ಲಿ ಅಳವಡಿಸಲಾದ ಹೆಡ್ ಲೈಟ್ ಗಳು ಹೆಚ್ಚು ಆಕರ್ಷಣೀಯವಾಗಿದೆ.

ಹುಂಡೈ ಎಕ್ಸ್ ಟರ್ SUV ಎಂಜಿನ್ ಸಾಮರ್ಥ್ಯ
ಹುಂಡೈ ಎಕ್ಸ್ ಟರ್ SUV ನಲ್ಲಿ ಕಂಪನಿಯು 1.2 ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (5MT) ಮತ್ತು ಸ್ಮಾರ್ಟ್ ಆಟೋ AMT ಗೇರ್ ಬಾಕ್ಸ್ ನೀಡಿದೆ. ಈ SUV 1.2 ಲೀಟರ್ ಜೈವಿಕ ಇಂಧನ ಕಪ್ಪಾ ಪೆಟ್ರೋಲ್ ಸಿಎನ್‌ಜಿ ಎಂಜಿನ್ ಮಾದರಿಯಲ್ಲಿ ಲಭ್ಯವಾಗಲಿದೆ.
27 Km ಮೈಲೇಜ್ ನೀಡುವ ಕಾರು ಸಿಗಲಿದೆ ಅತಿ ಕಡಿಮೆ ಬೆಲೆಗೆ
ಇನ್ನು ಹುಂಡೈ ಎಕ್ಸ್ ಟರ್ SUV ಯನ್ನು ಪೆಟ್ರೋಲ್ ಹಾಗೂ ಸಿಎನ್ ಜಿ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಪೆಟ್ರೋಲ್ ಹಾಗು ಸಿಎನ್ ಜಿ ಎಂಜಿನ್ ಗಳಿಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಗೇರ್ ಬಾಕ್ಸ್ ನೀಡಲಾಗಿದೆ. ಹುಂಡೈ ಎಕ್ಸ್ ಟರ್ ಪೆಟ್ರೋಲ್ ರೂಪಾಂತರವು ಪ್ರತಿ ಲೀಟರ್ ಗೆ 19 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ಹುಂಡೈ ಎಕ್ಸ್ ಟರ್ ಸಿಎನ್ ಜಿ ರೂಪಾಂತರವು ಪ್ರತಿ ಕೆಜಿಗೆ 27 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

ಹುಂಡೈ ಎಕ್ಸ್ ಟರ್ ಎಸ್ ಯುವಿ ಬೆಲೆ
ಸೀಟ್ ಬೆಲ್ಟ್‌ಗಳು, ಮುಂಭಾಗದ ಪವರ್ ವಿಂಡೋಗಳು, ಹಿಂಭಾಗದ ಹೆಡ್‌ರೆಸ್ಟ್‌ಗಳು, ಸೀಟ್ ಬೆಲ್ಟ್ ರಿಮೈಂಡರ್‌ಗಳು, LED ಟೈಲ್ ಲ್ಯಾಂಪ್‌ಗಳು, ಸೆಂಟ್ರಲ್ ಲಾಕಿಂಗ್ ಸಿಸ್ಟಮ್, ಡಿಜಿಟಲ್ ವೈಶಿಷ್ಟ್ಯಗಳನ್ನು ಈ ಕಾರ್ ಒಳಗೊಂಡಿದೆ.
ಇನ್ನು ಕಂಪನಿಯು ಹುಂಡೈ ಎಕ್ಸ್ ಟರ್ ಎಸ್ ಯುವಿಯನ್ನು ಐದು ರೂಪಾಂತರದಲ್ಲಿ ಬಿಡುಗಡೆ ಮಾಡಿದೆ. ಈ ಎಕ್ಸ್ ಟರ್ ಪೆಟ್ರೋಲ್ ರೂಪಾಂತರದ ಬೆಲೆಯೂ 5.99 ಲಕ್ಷದಿಂದ 9.32 ಲಕ್ಷ ಇದೆ. ಇನ್ನು ಎಕ್ಸ್ ಟರ್ ಸಿಎನ್ ಜಿ ರೂಪಾಂತರದ ಬೆಲೆಯೂ 8 .24 ಲಕ್ಷದಿಂದ 8 .97 ಲಕ್ಷ ಇದೆ.