Hyundai: 1 ಲಕ್ಷಕ್ಕೆ ಮನೆಗೆ ತನ್ನಿ ಹೊಸ ಹುಂಡೈ ಕಾರ್, 25 Km ಮೈಲೇಜ್ ಕಾರಿನ ಮೇಲೆ ಭರ್ಜರಿ ಆಫರ್.
ಹುಂಡೈ CNG ಕಾರ್ ಈಗ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು.
Hyundai CNG: ಜೀವನದಲ್ಲಿ ಒಮ್ಮೆಯಾದರೂ ಕಾರ್ ಖರೀದಿ ಮಾಡಬೇಕು ಅನ್ನುವ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯನ್ನ ಕಾಣುತ್ತಿದ್ದು ಇದು ವಾಹನ ಖರೀದಿ ಮಾಡುವವರ ಬೇಸರಕ್ಕೆ ಕಾರಣವಾಗಿರುತ್ತದೆ.
ಇದರ ನಡುವೆ ದೇಶದಲ್ಲಿ ಎಲೆಕ್ಟ್ರಿಕ್ ಮತ್ತು CNG ಕಾರುಗಳ ಸಂಖ್ಯೆ ದಿಡೀರ್ ಏರಿಕೆ ಆಗುತ್ತಿರುವುದನ್ನ ನಾವು ಗಮನಿಸಬಹುದಾಗಿದೆ. ಹೌದು ದೇಶದಲ್ಲಿ ಕಾರು ತಯಾರಿಕಾ ಕಂಪನಿಗಳು ಹಲವು CNG ಕಾರುಗಳನ್ನ ಮಾರುಕಟ್ಟೆಗೆ ಪರಿಚಯಿಸಿದ್ದು ಸದ್ಯ ಜನರು ಹೆಚ್ಚು ಹೆಚ್ಚು CNG ಕಾರುಗಳನ್ನ ಖರೀದಿ ಮಾಡುತ್ತಿದ್ದಾರೆ.
ಹಲವು CNG ಕಾರುಗಳನ್ನ ಪರಿಚಯಿಸಿದ ಮಾರುತಿ ಸುಜುಕಿ
ಹೌದು ಪ್ರತಿಷ್ಠಿತ ಕಾರು ತಯಾರಕ ಕಂಪನಿ ಆಗಿರುವ ಮಾರುತಿ ಸುಜುಕಿ ಈಗ CNG ಕಾರುಗಳನ್ನ ಮಾರುಕಟ್ಟೆಗೆ ಪರಿಚಯಿಸುವುದರ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದ ಸಾಧನೆಯನ್ನ ಮಾಡುತ್ತಿದೆ ಎಂದು ಹೇಳಬಹುದು. ಇದರ ನಡುವೆ ಇನ್ನೊಂದು ವಾಹನ ತಯಾರಕ ಕಂಪನಿ ಆಗಿರುವ ಹುಂಡೈ (Hyundai Cars) ತನ್ನ ಹೊಸ ಮಾದರಿಯ CNG ಕಾರನ್ನ ಮಾರುಕಟ್ಟೆಗೆ ಪರಿಚಯ ಮಾಡಿದ್ದು ಈ ಕಾರ್ ಖರೀದಿ ಮಾಡಲು ಜನರು ಆಸಕ್ತಿಯನ್ನ ತೋರುತ್ತಿದ್ದಾರೆ ಎಂದು ಹೇಳಬಹುದು.
ಹುಂಡೈ i10 CNG ಕಾರ್ ಲಾಂಚ್ ಮಾಡಿದ ಹುಂಡೈ
ಹೌದು ಹುಂಡೈ ಈಗ ಹುಂಡೈ i10 CNG ಮಾದರಿಯ ಕಾರನ್ನ ಕಡಿಮೆ ಬೆಲೆಗೆ ಲಾಂಚ್ ಮಾಡಿದ್ದು ಈ ಕಾರಿನ ಬೆಲೆ ಮತ್ತು ಮೈಲೇಜ್ ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಬಹುದು. ಹೌದು ಹುಂಡೈ i10 CNG ಮಾದರಿಯ ಕಾರ್ ಈಗ ಮಾರುಕಟ್ಟೆಗೆ ಲಾಂಚ್ ಆಗಿದ್ದು ಈ ಕಾರನ್ನ ಜನರು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಮಾರುಕಟ್ಟೆಯಲ್ಲಿ ಹುಂಡೈ i10 ಕಾರಿನ ಬೆಲೆ ಸುಮಾರು 7 ಲಕ್ಷ ರೂಪಾಯಿ ಆಗಿತ್ತು 1 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡುವುದರ ಮೂಲಕ ಕಡಿಮೆ EMI ನಲ್ಲಿ ಜನರು ಹುಂಡೈ i10 ಕಾರನ್ನ ಖರೀದಿ ಮಾಡಬಹುದಾಗಿದೆ.
ಹುಂಡೈ i10 ಕಾರಿನ ಬೆಲೆ ಮತ್ತು ಮೈಲೇಜ್
ಹುಂಡೈ i10 ಕಾರಿನ ಆರಂಭಿಕ ಬೆಲೆ 7 ಲಕ್ಷದಿಂದ ಆರಂಭ ಆಗುತ್ತದೆ ಮತ್ತು ಈ ಕಾರನ್ನ ಕೇವಲ 1 ಡೌನ್ ಪೇಮೆಂಟ್ ಮಾಡಿ ವಿವಿಧ ಹಣಕಾಸು ಸಂಸ್ಥೆಯಲ್ಲಿ ವೆಹಿಕಲ್ ಲೋನ್ ಪಡೆದುಕೊಳ್ಳುವುದರ ಮೂಲಕ ಕಡಿಮೆ EMI ನಲ್ಲಿ ಕಾರ್ ಖರೀದಿ ಮಾಡಬಹುದು. ಇನ್ನು ಮೈಲೇಜ್ ವಿಷಯಕ್ಕೆ ಬರುವುದಾದರೆ, ಹುಂಡೈ i10 1 ಕೆಜಿ CNG ಅಲ್ಲಿ ಸುಮಾರು 22 ರಿಂದ 25 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಎಂದು ಅಂದಾಜು ಮಾಡಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಈ ಕಾರಿಗೆ ಬಹಳ ಬೇಡಿಕೆ ಉಂಟಾಗಿದ್ದು ಭರ್ಜರಿ ಬುಕಿಂಗ್ ಕಾಣುತ್ತಿದೆ ಎಂದು ಹೇಳಬಹುದು.