World Cup 2023: ವಿಶ್ವಕಪ್ ಆರಂಭಕ್ಕೆ ಮೂರೂ ದಿನ ಇರುವ ಬೆನ್ನಲ್ಲೇ ICC ಮುಂದೆ ದೊಡ್ಡ ಬೇಡಿಕೆ, ಅಷ್ಟಕ್ಕೂ ಏನದು…?

ICC ಮುಂದೆ ದೊಡ್ಡ ಬೇಡಿಕೆ ಇಟ್ಟ ಪಾಕಿಸ್ತಾನ, ಏನೀರಬಹುದು ಆ ಬೇಡಿಕೆ...?

ICC ODI World Cup 2023: ODI ವಿಶ್ವಕಪ್‌’ನಲ್ಲಿ ಭಾಗವಹಿಸಲು ಪಾಕಿಸ್ತಾನ (Pakistan) ಕ್ರಿಕೆಟ್ ತಂಡವು 7 ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿದೆ. ಆದರೆ 2023ರ ವಿಶ್ವಕಪ್‌’ಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಂದೆ ಬೇಡಿಕೆಯೊಂದನ್ನು ಇಟ್ಟಿದೆ.

ವಿಶ್ವಕಪ್‌’ಗೆ ಪ್ರಯಾಣಿಸಲು ಬಯಸುವ ಪತ್ರಕರ್ತರು ಮತ್ತು ಅಭಿಮಾನಿಗಳಿಗೆ ವೀಸಾ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿಗೆ ಪತ್ರ ಬರೆದಿದೆ. ಪಾಕಿಸ್ತಾನವು ಅಕ್ಟೋಬರ್ 6 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಟೂರ್ನಿಯ ಮೊದಲ ಪಂದ್ಯವನ್ನು ಆಡಲಿದೆ.

World cup 2023
Image Credit: Espncricinfo

ವೀಸಾ ವಿಳಂಬದ ಕುರಿತು ಐಸಿಸಿಗೆ ಪತ್ರ

ಪಾಕಿಸ್ತಾನವು ಭಾರತದ ಪೂರ್ವ ಉಲ್ಲೇಖಿತ ಪಟ್ಟಿಯಲ್ಲಿ (PRC) ಇರುವುದರಿಂದ ಅರ್ಜಿಗಳಿಗೆ ವಿದೇಶಾಂಗ, ಗೃಹ ಮತ್ತು ಕ್ರೀಡಾ ಸಚಿವಾಲಯಗಳ ಅನುಮೋದನೆ ಅಗತ್ಯವಿರುತ್ತದೆ. ಪಿಸಿಬಿ ಈ ತಿಂಗಳ ಆರಂಭದಲ್ಲಿ ಆಟಗಾರರಿಗೆ ವೀಸಾ ವಿಳಂಬದ ಕುರಿತು ಐಸಿಸಿಗೆ ಪತ್ರ ಬರೆದಿತ್ತು. ಇನ್ನು 50 ಓವರ್‌’ಗಳ ಈವೆಂಟ್ ಅನ್ನು ವರದಿ ಮಾಡಲು ಬಯಸುವ ಪತ್ರಕರ್ತರ ಹೆಸರನ್ನು ವಿದೇಶಾಂಗ ಸಚಿವಾಲಯವು ಪರಿಗಣಿಸುತ್ತಿದೆ ಎಂದು ಪಂದ್ಯಾವಳಿಯ ಆತಿಥೇಯ ಬಿಸಿಸಿಐ ನ ಮೂಲಗಳು ತಿಳಿಸಿವೆ.

ICC ODI World Cup 2023
Image Credit: Sportstiger

ಪಾಕಿಸ್ತಾನದ ಮಾಧ್ಯಮಗಳಿಗೆ ವೀಸಾ ಅರ್ಜಿಗಳನ್ನು ಸುಗಮಗೊಳಿಸಲಾಗುತ್ತಿದೆ

ಮತ್ತೊಂದೆಡೆ, ಪಿಸಿಬಿ ಮೂಲವೊಂದು ಹೇಳಿಕೆ ನೀಡಿದ್ದು, ‘ವೀಸಾ ನೀತಿಯ ಬಗ್ಗೆ ಮಾಧ್ಯಮಗಳು ಮತ್ತು ಅಭಿಮಾನಿಗಳಿಗೆ ಇನ್ನೂ ತಿಳಿಸದಿರುವುದು ಆತಂಕಕಾರಿಯಾಗಿದೆ. ಏಕೆಂದರೆ ಪಾಕಿಸ್ತಾನ ಈಗಾಗಲೇ ಎರಡು ಅಭ್ಯಾಸ ಪಂದ್ಯಗಳನ್ನ ಆಡಿದೆ ಮತ್ತು ಆರು ದಿನಗಳಲ್ಲಿ ತನ್ನ ಮೊದಲ ವಿಶ್ವಕಪ್ ಅನ್ನು ಎದುರಿಸಲಿದೆ” ಎಂದಿದೆ.

Leave A Reply

Your email address will not be published.