IME Rapid: 300 Km ಮೈಲೇಜ್ ಕೊಡುವ ಕನ್ನಡಿಗರ ಬೈಕ್ ಮರುಕಟ್ಟೆಗೆ ಲಾಂಚ್, ಕಡಿಮೆ ಬೆಲೆಗೆ ಇಂದೇ ಬುಕ್ ಮಾಡಿ.

300 Km ಮೈಲೇಜ್ ಕೊಡುವ ಕನ್ನಡಿಗರ ಬೈಕಿಗೆ ಗ್ರಾಹಕರು ಫಿದಾ.

IME Rapid Electric Bike: ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದೊಡ್ಡಮಟ್ಟದಲ್ಲಿ ಪ್ರಾಮುಖ್ಯತೆ ಪಡೆಯುತ್ತಿವೆ. ಈಗಾಗಲೇ, ಬೆಂಗಳೂರಿನಲ್ಲಿ ಓಲಾ ಎಲೆಕ್ಟ್ರಿಕ್, ಸಿಂಪಲ್ ಎನರ್ಜಿ ಹಾಗೂ ಎಥರ್ ಎನರ್ಜಿ ಈ ಮಾರುಕಟ್ಟೆಯಲ್ಲಿ ಬಹುಪಾಲು ಆಕ್ರಮಿಸಿಕೊಂಡಿವೆ.

ಮೊದಲಿಗೆ, ಬೆಂಗಳೂರಿನ ಗ್ರಾಹಕರಿಗೆ ಹೊಸ ಐಎಂಇ ರಾಪಿಡ್‌ (IME Rapid) ಎಲೆಕ್ಟ್ರಿಕ್ ಸ್ಕೂಟರ್ ದೊರೆಯುತ್ತದೆ. ಆ ಬಳಿಕ, ಕರ್ನಾಟಕದ ಇತರೆ ಜಿಲ್ಲೆಯ ಜನರಿಗೂ ಸಿಗುತ್ತದೆ. ಜೊತೆಗೆ, ಈ ಸ್ಕೂಟರ್ ಕೊಂಡುಕೊಂಡ ಮೇಲೆಯೂ ಖರೀದಿದಾರರಿಗೆ ಯಾವುದೇ ತೊಂದರೆಯಾಗದಿರಲಿ ಎಂದು ಕಂಪನಿ ತೀರ್ಮಾನ ಮಾಡಿದ್ದು, ಅದಕ್ಕಾಗಿ ವಾರಂಟಿ ಹಾಗೂ ಬಿಡಿಭಾಗಗಳು ಸುಲಭವಾಗಿ ಲಭ್ಯವಿರುವಂತೆ ಮಾಡಲು ಶ್ರಮಿಸುತ್ತಿದೆ.

IME Rapid Electric Scooter mileage
Image Credit: Other Source

ಐಎಂಇ ರಾಪಿಡ್‌ (IME Rapid) ಎಲೆಕ್ಟ್ರಿಕ್ ಸ್ಕೂಟರ್ ನ ಕಿಲೋಮೀಟರ್ ರೇಂಜ್ ಮತ್ತು ಬೆಲೆ 
ರಾಜಧಾನಿ ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಕನ್ನಡಿಗನ ಮಾಲೀಕತ್ವದ ಮೈ ಇವಿ ಸ್ಟೋರ್ (MY EV Store), ಹೊಚ್ಚ ಹೊಸ ಐಎಂಇ ರಾಪಿಡ್‌ (IME Rapid) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇದು, ಸಂಪೂರ್ಣ ಚಾರ್ಜ್‌ನಲ್ಲಿ 300 ಕಿಲೋಮೀಟರ್ ರೇಂಜ್ ನೀಡುವ ಸಾಮರ್ಥ್ಯ ಹೊಂದಿದ್ದು, ರೂಪಾಂತರಗಳಿಗೆ ಅನುಗುಣವಾಗಿ ರೂ.99,000 ದಿಂದ ರೂ.1.48 ಲಕ್ಷ ಬೆಲೆಯನ್ನು ಹೊಂದಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಬಗ್ಗೆ ಮಾತನಾಡಿರುವ ಮೈ ಇವಿ ಸ್ಟೋರ್ ಮುಖ್ಯಸ್ಥ ಪುನೀತ್ ಗೌಡ ಅವರು, ‘ದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಎಲೆಕ್ಟ್ರಿಕ್ ವಾಹನಗಳು ತುರ್ತು ಪರಿಹಾರವಾಗಿವೆ. ನಾವು ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಐಎಂಇ ರಾಪಿಡ್‌ ಇ-ಸ್ಕೂಟರ್ ಪರಿಚಯಿಸಿದ್ದೇವೆ. ಇದನ್ನು ಗ್ರಾಹಕರು ಖಂಡಿತವಾಗಿ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಹೊಂದ್ದೇವೆ’ ಎಂದು ಹೇಳಿದ್ದಾರೆ.

IME Rapid Electric Scooter price
Image Credit: Indiacarnews

IME Rapid Electric Scooter
ನೂತನ ಐಎಂಇ ರಾಪಿಡ್‌ ಎಲೆಕ್ಟ್ರಿಕ್ ಸ್ಕೂಟರ್ ಮೂರು ರೂಪಾಂತರದಲ್ಲಿ ಲಾಂಚ್ ಆಗಿದ್ದು, ಅದಕ್ಕೆ ಅನುಗುಣವಾಗಿ, ಫುಲ್ ಚಾರ್ಜ್‌ನಲ್ಲಿ 100, 200 ಹಾಗೂ 300 ಕಿಲೋಮೀಟರ್ ರೇಂಜ್ ನೀಡುತ್ತದೆ. ಜೊತೆಗೆ, 60V – 26/52/72 AH ಬ್ಯಾಟರಿ ಪ್ಯಾಕ್ ಹಾಗೂ 2000 W ಮೋಟಾರ್ (2 kWh ಮೋಟಾರ್) ಹೊಂದಿದ್ದು, 80 kmph ಟಾಪ್ ಸ್ವೀಡ್ ಪಡೆದಿದೆ.

Ola S1 Pro Feature
ಹೊಸ ತಲೆಮಾರಿನ Ola S1 Pro, ರೂ.1.47 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದ್ದು, ಫುಲ್ ಚಾರ್ಜಿನಲ್ಲಿ 195 ಕಿಲೋಮೀಟರ್ ರೇಂಜ್ ಕೊಡುತ್ತದೆ. 120 kmph ಟಾಪ್ ಸ್ವೀಡ್ ಪಡೆಯಲಿದ್ದು, 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Ola S1 Pro Feature
Image Credit: Bikedekho

‘ಮೈ ಇವಿ ಸ್ಟೋರ್’ ಕಂಪನಿಯೇ ಹೇಳುವಂತೆ ಈ ಎಲೆಕ್ಟ್ರಿಕ್ ಸ್ಕೂಟರ್, ಗರಿಷ್ಠ ರೇಂಜ್ ನೀಡಲು ಕಾರಣ ಅದರಲ್ಲಿ ಬಳಕೆ ಮಾಡಿರುವ ಸ್ಮಾರ್ಟ್ ರೇಂಜ್ ಟೆಕ್ನಾಲಜಿ (SRT). ಈ ವ್ಯವಸ್ಥೆಯು ನೈಜ-ಸಮಯದ ವಿವರವನ್ನು ವಿಶ್ಲೇಷಿಸುತ್ತದೆ. ಅದು ಬ್ಯಾಟರಿ ಸ್ಥಿತಿ, ಹವಾಮಾನ ಪರಿಸ್ಥಿತಿ, ಸಂಚಾರ ದಟ್ಟಣೆ, ಚಾಲನಾ ಮಾದರಿಗಳನ್ನು ಒಳಗೊಂಡಿರುತ್ತದೆ.

Leave A Reply

Your email address will not be published.