Virat Kohli: ಕೆರಳಿಸಿದ ಪಾಕ್ ವೇಗಿಗೆ ಮೈದಾನದಲ್ಲೇ ಚಳಿ ಬಿಡಿಸಿದ ವಿರಾಟ್ ಕೊಹ್ಲಿ, ವೈರಲ್ ಆಗಿದೆ ಫೋಟೋಸ್.
ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ, ಏಟಿಗೆ ತಿರುಗೇಟು ನೀಡಿ ಬೀಗಿದ ಆಟಗಾರರು.
Virat Kohli Latest News: ಈಗ ಸದ್ಯಕ್ಕೆ ವಿಶ್ವಕಪ್ (World Cup) ಹವಾ ನಡೆಯುತ್ತಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಬಾಯಲ್ಲೂ ವಿಶ್ವಕಪ್ ವಿಚಾರವಾಗಿ ಮಾತುಕತೆ. ಅಷ್ಟೇ ಅಲ್ಲದೆ ನಿನ್ನೆ ಭದ್ರ ವೈರಿಗಳಾದ ಭಾರತ ಹಾಗು ಪಾಕಿಸ್ತಾನ ನಡುವೆ ಪಂದ್ಯ ಇದ್ದು, ಎಲ್ಲ ಗಮನ ಪಂದ್ಯದ ಮೇಲೆ ಇತ್ತು ಎನ್ನಬಹುದು.
ಯಾವ ಪಂದ್ಯಕ್ಕೂ ತಲೆ ಕೆಡಿಸಿಕೊಳ್ಳದ ಕ್ರಿಕೆಟ್ ಅಭಿಮಾನಿಗಳು ಭಾರತ ಮತ್ತು ಪಾಕ್ ಪಂದ್ಯ ಅಂದ ಕೂಡಲೇ, ಏನೆ ಆಗಲಿ ಪಾಕ್ ಸೋಲಬೇಕು ಅಷ್ಟೇ ಅಂದುಕೊಂಡಿರುತ್ತಾರೆ. ಹಾಗೆಯೆ ನಿನ್ನೆಯ ಪಂದ್ಯ ಒನ್ ಸೈಡ್ ಮ್ಯಾಚ್ ಆಗಿದ್ದು, ಪಾಕ್ ವಿರುದ್ಧ ಭಾರತ ಭರ್ಜರಿ ಆಗಿ ಗೆಲ್ಲುವನ್ನು ಸಾಧಿಸಿದ್ದು, ಅಭಿಮಾನಿಗಳ ಸಂತೋಷಕ್ಕೆ ಮಿತಿಯೇ ಇಲ್ಲದಂತಾಗಿದೆ.

ಭಾರತಕ್ಕೆ ಭರ್ಜರಿ ಗೆಲುವು
ನಿನ್ನೆ ಭಾರತ ಹಾಗು ಪಾಕಿಸ್ತಾನ ನಡುವೆ ಪಂದ್ಯ ಇದ್ದು, ಪಂದ್ಯ ಬಹಳ ಕುತೂಹಲಕಾರಿ ಆಗಿತ್ತು. ಮೊದಲು ಬೌಲಿಂಗ್ ಆಯ್ಕೆ ಮಾಡಿದ ಭಾರತ, ಪಾಕಿಸ್ತಾನಕ್ಕೆ ಬ್ಯಾಟಿಂಗ್ ಅನ್ನು ಬಿಟ್ಟುಕೊಟ್ಟಿದ್ದಾರೆ. ಉತ್ತಮ ಬೌಲಿಂಗ್ ಮೂಲಕ ಬ್ಯಾಟ್ಸ್ ಮ್ಯಾನ್ ಗಳ ಬೆವರನ್ನು ಇಳಿಸಿದ ಭಾರತ ತಂಡ 30.3 ಓವರ್‌ಗೆ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸುವ ಮೂಲಕ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ ತಂಡ ಪಾಕಿಸ್ತಾನ ವಿರುದ್ಧ ವಿಶ್ವಕಪ್‌ನ ಗೆಲುವನ್ನು ಮುಂದುವರೆಸಿದೆ.
ಸನ್ನೆಯ ಮೂಲಕ ಟಾಂಗ್ ಕೊಟ್ಟ ಆಟಗಾರರು
ಭಾರತ ಮತ್ತು ಪಾಕ್ ಪಂದ್ಯದ ವೇಳೆಯಲ್ಲಿ ಹೆಚ್ಚಾಗಿ ಟಾಂಗ್ ಕೊಡುವುದು, ಸನ್ನೆ ಮಾಡುವುದು ಸಹಜವಾಗಿದೆ. ಅದರಂತೆ ಪಾಂಡ್ಯ ವಿಕೆಟ್ ತೆಗೆಯುತ್ತಿದ್ದಂತೆ ಇಮಾಮ್ ಉಲ್ ಹಕ್ ಕಡೆಗೆ ಬೈ.. ಬೈ ಎಂದು ಕೈ ಸನ್ನೆ ಮೂಲಕ ಮಾಡಿದರು. ಇದರ ಬೆನ್ನಲ್ಲೆ ಬುಮ್ರಾ ಪಾಕ್‌ನ ಮೊಹಮ್ಮದ್ ರಿಜ್ವಾನ್ ವಿಕೆಟ್ ತೆಗೆಯುತ್ತಿದ್ದಂತೆ ವಿರಾಟ್ ತಮ್ಮ ಹಳೆಯ ಸ್ಟೈಲ್‌ನಲ್ಲಿ ಸಂಭ್ರಮಾಚರಣೆ ಮಾಡಿದರು.

ಕೊಹ್ಲಿ ಪಾಕ್ ವೇಗಿ ರೌಫ್‌ಗೆ ಪ್ರತ್ಯುತ್ತರ ನೀಡಿದ್ದಾರೆ ಎಂಬ ಟ್ರೋಲ್‌ಗಳು ಹರಿದಾಡುತ್ತಿದೆ. ಹೌದು, ಏಷ್ಯಾಕಪ್ ವೇಳೆ ರೌಪ್ ಭಾರತದ ಇಶಾನ್ ಕಿಶನ್ ವಿಕೆಟ್ ತೆಗೆದು ಹೊರ ಹೋಗುವಂತೆ ಸನ್ನೆ ಮಾಡಿದ್ದರು. ಅದಕ್ಕೆ ಕೊಹ್ಲಿ ಇಂದು ಉತ್ತರ ನೀಡಿದ್ದು, ರಿಜ್ವಾನ್ ಔಟ್ ಆಗುತ್ತಿದ್ದಂತೆ ರೌಫ್ ರೀತಿಯಲ್ಲಿಯೇ ಸನ್ನೆ ಮಾಡುವ ಮೂಲಕ ಸರಿಯಾದ ಟಾಂಗ್ ನೀಡಿದ್ದಾರೆ. ಆ ವೇಳೆ ಕೊಹ್ಲಿ ಮಾಡಿದ ಸೆಲಬ್ರೇಷನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನಿನ್ನೆಯ ಗೆಲುವಿಗೆ ಆಟಗಾರರು ಹಾಗು ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ .