Asia Cup 2023: ನಾಳೆ ಕೂಡ ಭಾರತ ಪಾಕಿಸ್ತಾನ ಪಂದ್ಯ ನಡೆಯುವುದು ಅನುಮಾನ, ನಡೆದರೆ ಇವರೇ ವಿನ್ ಆಗುತ್ತಾರೆ.

ನಾಳೆ ಕೂಡ ಮಳೆಯ ಕಾಟ ಇದ್ದು ನಾಳಿನ ಪಂದ್ಯ ನಡೆಯುವುದು ಅನುಮಾನ.

India And Pakistan Match 2023: ಏಷ್ಯಾ ಕಪ್ (Asia Cup) 2023 ರ ಲೀಗ್ ಶ್ರೀಲಂಕಾದ ಕೊಲಂಬೊದಲ್ಲಿ ಹೋದ ವಾರ ಭಾರತ ಹಾಗು ಪಾಕಿಸ್ತಾನ ನಡುವೆ ಕ್ರಿಕೆಟ್ ಮ್ಯಾಚ್ ಇದ್ದಿತ್ತು. ಪ್ರೇಕ್ಷಕರ ಬಹು ನಿರೀಕ್ಷಿತ ಭಾರತ ಪಾಕ್ ಯುದ್ಧ ಮಳೆಯ ಅಬ್ಬರಕ್ಕೆ ಸ್ಥಗಿತಗೊಂಡಿತ್ತು.

ಮಳೆಯಿಂದಾಗಿ ನೆಡೆಯಬೇಕಾದ ಪಂದ್ಯವನ್ನು ರದ್ದುಗೊಳಿಸಿದ್ದು, ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದೆ. ರದ್ದು ಗೊಳಿಸಿದ ಪಂದ್ಯದಲ್ಲಿ ಎರಡು ತಂಡದವರು ಸಮ ಎಂದು ಘೋಷಿಸಲಾಗಿತ್ತು. ಮುಂದಿನ ಪಂದ್ಯ ನಾಳೆ ಇದ್ದು ಪ್ರೇಕ್ಷಕರು ಬಹಳ ಕಾತುರದಿಂದ ಕಾಯುತ್ತಿದ್ದಾರೆ. 

India and Pakistan match 2023
Image Credit: Outlookindia

ಮುಂದಿನ ಮ್ಯಾಚ್ ನ ನಿರೀಕ್ಷೆಯಲ್ಲಿ ಪ್ರೇಕ್ಷಕರು 
ಬದ್ದ ವೈರಿಗಳಾದ ಭಾರತ ಮತ್ತು ಪಾಕ್ ನಡುವೆ ಸೆಪ್ಟೆಂಬರ್ 10 ಭಾನುವಾರ ಕೊಲಂಬೋ ದಲ್ಲಿ ಪಂದ್ಯ ನೆಡೆಯಬೇಕಿದೆ. ಪ್ರೇಕ್ಷಕರು ಬಹಳ ಕಾತುರದಿಂದ ಕಾಯುತ್ತಿದ್ದು, ಮತ್ತೆ ಮಳೆರಾಯನ ಸಮಸ್ಯೆ ಎದುರಾಗಬಹುದೆಂದು ಕೆಲವು ಹೇಳಿಕೆಗಳು ಬರುತ್ತಿದೆ. ಯಾಕೆಂದರೆ ಕೊಲಂಬೋ ದಲ್ಲಿ ಈಗಾಗಲೇ ಹಲವು ದಿನಗಳಿಂದ ಮಳೆ ಸುರಿಯುತ್ತಿದ್ದು.

ಮುಂದಿನ ದಿನಗಳಲ್ಲೂ ಮಳೆ ಬರುವ ನಿರೀಕ್ಷೆ ಇರುವುದರಿಂದ ಪ್ರೇಕ್ಷಕರು ಬೇಸರ ವ್ಯಕ್ತ ಪಡಿಸಿದ್ದಾರೆ. ಪಾಕಿಸ್ತಾನಕ್ಕೆ ಭಾರತ ತಂಡ ಹೋಗುವುದಿಲ್ಲ ಎನ್ನುವ ಕಾರಣಕ್ಕೆ ಮ್ಯಾಚ್ ಅನ್ನು ಕೊಲಂಬೊದಲ್ಲಿ ಆಯೋಜಿಸಿದ್ದು, ಆದರೆ ಅಲ್ಲಿ ಈಗ ಮಳೆ ಜಾಸ್ತಿ ಇರುವುದರಿಂದ ಮ್ಯಾಚ್ ರದ್ದಾಗುತ್ತಿದೆ ಎಂದು ಕೆಲವರು ಟೀಕಿಸಿದ್ದಾರೆ. ಅದೇನೇ ಆದರೂ ಸದ್ಯಕ್ಕೆ ಮ್ಯಾಚ್ ನೆಡೆಯುದಂತೂ ಖಚಿತ ವಾಗಿದೆ.

ಪಂದ್ಯ ಕ್ರಮದ ಮಾಹಿತಿ
ಸೆಪ್ಟೆಂಬರ್ 10 ಭಾನುವಾರದಂದು ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಮಳೆ ಬಂದು ಅರ್ಧಕ್ಕೆ ಪಂದ್ಯ ನಿಂತರೆ ಮೊದಲ ಇನ್ನಿಂಗ್ಸ್ ಮುಗಿದು 2ನೆ ಇನ್ನಿಂಗ್ಸ್ ನಲ್ಲಿ ಕನಿಷ್ಠ 20 ಓವರ್ ಆಟವು ಸಾಧ್ಯ ಆಗದೆಯೇ ಹೋದರೆ ಆವಾಗ ಮೀಸಲು ದಿನವನ್ನು ಬಳಕೆ ಮಾಡಿ ಪಂದ್ಯ ಎಲ್ಲಿಗೆ ಸ್ಥಗಿತಗೊಂಡಿರುತ್ತದೆಯೋ, ಸೆಪ್ಟೆಂಬರ್ 11 ರಂದು ಅಲ್ಲಿಂದಲ್ಲೇ ಪಂದ್ಯ ಆರಂಭವಾಗುವುದು ಎಂದು ಇಲಾಖೆ ಮಾಹಿತಿ ನೀಡಿದೆ. ಪ್ರೇಕ್ಷಕರು ಪಂದ್ಯ ಮೀಸಲು ದಿನಕ್ಕೆ ಸೆಪ್ಟೆಂಬರ್ 10 ರಂದು ತೆಗೆದ ಟಿಕೆಟ್ ನಿಂದಲೇ ಸೆಪ್ಟೆಂಬರ್ 11 ರಂದು ನೆಡೆಯುವ ಪಂದ್ಯ ವೀಕ್ಷಣೆ ಮಾಡಬಹುದಾಗಿದೆ.

india and pakistan match latest update
Image Credit: Businesstoday

ಮುಂದಿನ ಪಂದ್ಯದಲ್ಲಿ ಸೋಲು, ಗೆಲುವು ಯಾರಿಗೆ
ಸೆಪ್ಟೆಂಬರ್ 10 ಭಾನುವಾರ ನೆಡೆಯುವ ಭಾರತ ಮತ್ತು ಪಾಕಿಸ್ತಾನ ಪಂದ್ಯ ನೋಡಲು ಪ್ರೇಕ್ಷಕರು ಕಾತುರದ್ಲಲಿದ್ದು, ಪಂದ್ಯದಲ್ಲಿ ಮೊದಲು ಯಾರು ಬ್ಯಾಟಿಂಗ್ ಮಾಡುತ್ತಾರೋ ಅವರೇ ಗೆಲ್ಲುತ್ತಾರೆಂಬ ಅಭಿಪ್ರಾಯ ಕೊಡ ಇದೆ ಯಾಕೆಂದರೆ ಮೊದಲು ಚೆನ್ನಾಗಿ ಸ್ಕೋರ್ ಮಾಡಿದರೆ ಪಂದ್ಯದ ಮಧ್ಯ ಮಳೆ ಬಂದರೆ ಮೊದಲು ಬ್ಯಾಟಿಂಗ್ ಮಾಡಿದವರಿಗೆ ಪಂದ್ಯ ಗೆಲ್ಲಲು ಉಪಯೋಗವಾಗುತ್ತದೆ ಎನ್ನಬಹುದಾಗಿದೆ.

ಅದೇನಾದರೂ ಪಂದ್ಯ ಏನಾಗುತ್ತದೆ ಎಂದು ಭಾನುವಾರದ ತನಕ ಕಾದು ನೋಡಬೇಕಿದೆ. ಭಾರತ ಹಾಗು ಪಾಕಿಸ್ತಾನದ ನಡುವಿನ ಪಂದ್ಯಕ್ಕಾಗಿ ವಿಶ್ವದಾದ್ಯಂತ ಕಾಯುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಪಂದ್ಯ ನೆಡೆಯುವಂತೆ ನೋಡಿಕೊಳ್ಳುವುದು ಆಯೋಜಕರ ಹೊಣೆಯಾಗಿದೆ.

Leave A Reply

Your email address will not be published.