India Post: 10 ನೇ ತರಗತಿ ಪಾಸ್ ಆದವರಿಗೆ ಅಂಚೆ ಕಚೇರಿಯಲ್ಲಿ ಭರ್ಜರಿ ಉದ್ಯೋಗದ ಜೊತೆ ಉತ್ತಮ ಸಂಬಳ.
ಹತ್ತನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಹುದ್ದೆ ಖಾಲಿ ಇದೆ, ಇಂದೇ ಅರ್ಜಿ ಹಾಕಿ.
India Post Recruitment 2023:ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡುವ ಉದ್ದೇಶವಾಗಿ ಅರ್ಜಿ ಆಹ್ವನಿಸಲಾಗಿದೆ. ಅಂಚೆ ಇಲಾಖೆಯ ಹುದ್ದೆ ಉತ್ತಮ ಹುದ್ದೆ ಆಗಿದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಉಪಯೋಗಿಸಿಕೊಳ್ಳತಕ್ಕದ್ದು.
ಸರ್ಕಾರಿ ಕೆಲಸ ಮಾಡಬೇಕು ಅಂದುಕೊಂಡವರು ಅದರಲ್ಲೂ ಅಂಚೆಯಂತಹ ಸಂಸ್ಥೆಗಳಲ್ಲಿ ಕೆಲಸ ಒದಗಿಸಿಕೊಳ್ಳಬೇಕು ಅಂದುಕೊಂಡವರು ಇಂದೇ ಅರ್ಜಿ ಹಾಕಬಹುದು. ಅಂಚೆ ಇಲಾಖೆಯಲ್ಲಿ ಉದ್ಯೋಗ ದಕ್ಕಿಸಿಕೊಳ್ಳುವುದು ಸುಲಭದ ಮಾತಲ್ಲ ಆದ್ರೆ ಈ ಸಲ ಅನೇಕ ಹುದ್ದೆಗಳಿಗೆ ಅವಕಾಶ ನೀಡಿದ್ದು, ಹಲವರು ಇಲ್ಲಿ ಕೆಲಸ ಪಡೆಯಬಹುದಾಗಿದೆ.

ಹಲವು ಹುದ್ದೆಗಳಿಗೆ ಆಹ್ವಾನ
ಭಾರತದ ಮಾಹಿತಿ ಸಚಿವಾಲಯದ ಅಡಿಯಲ್ಲಿರುವ ಅಂಚೆ ಇಲಾಖೆಯು ದೇಶಾದ್ಯಂತ ವಿವಿಧ ಅಂಚೆ ವಲಯಗಳಲ್ಲಿ 1899 ಪೋಸ್ಟಲ್/ಸಾರ್ಟಿಂಗ್ ಅಸಿಸ್ಟೆಂಟ್ ಮತ್ತು ಪೋಸ್ಟ್‌ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಈ ಎಲ್ಲಾ ಹುದ್ದೆಗಳನ್ನು ಕ್ರೀಡಾ ಕೋಟಾದಡಿ ಭರ್ತಿ ಮಾಡಲಾಗುವುದು.

ಕ್ರೀಡಾ ವಿಭಾಗದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಅಂಚೆ ಇಲಾಖೆಯ ಒಟ್ಟು ಹುದ್ದೆಗಳ ಪೈಕಿ ಪೋಸ್ಟಲ್ ಅಸಿಸ್ಟೆಂಟ್ 598, ವಿಂಗಡಣೆ ಸಹಾಯಕ 143, ಪೋಸ್ಟ್ ಮ್ಯಾನ್ 585, ಮೇಲ್ ಗಾರ್ಡ್ 3 ಹಾಗೂ ಎಂಟಿಎಸ್ 570 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅರ್ಹ ಕ್ರೀಡಾಪಟುಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗೆ ಅನುಗುಣವಾಗಿ 10, 12ನೇ ತರಗತಿ, ಪದವಿಯಲ್ಲಿ ಉತ್ತೀರ್ಣರಾದ ಮತ್ತು ಸಂಬಂಧಪಟ್ಟ ಕ್ರೀಡಾ ವಿಭಾಗದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹಾಗು ನೀವು ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ.