2024 Election: ಸನಾತನ ವಿವಾದದ ಬೆನ್ನಲ್ಲೇ ಬಂತು ಇನ್ನೊಂದು ಸಮೀಕ್ಷೆ, ಈಗ ಚುನಾವಣೆ ನಡೆದರೆ ಯಾರು ಗೆಲ್ಲುತ್ತಾರೆ…?

ಸನಾತನ ಧರ್ಮದ ಬಗ್ಗೆ ಸಮೀಕ್ಷೆ, ಚುನಾವಣಾ ಸಮೀಕ್ಷೆಯ ಫಲಿತಾಂಶ ಏನಿದೆ...?

2024 Election Update: ಸನಾತನ ಧರ್ಮದ ವಿಚಾರವಾಗಿ ಈಗಾಗಲೇ ಹಲವು ಮಾಹಿತಿ, ಟೀಕೆಗಳನ್ನು ನಾವು ನೀಡಿರುತ್ತೇವೆ. ಸನಾತನದ ವಿಷಯವು ಲೋಕಸಭೆ ಚುನಾವಣೆಯ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂಬುದನ್ನು ಊಹಿಸಲು ಮತದಾರರ ಮನಸ್ಥಿತಿಯನ್ನು ಅಳೆಯಲು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ನಡೆಸಿದೆ.

ಇಂದು ಸಾರ್ವತ್ರಿಕ ಚುನಾವಣೆ ನಡೆದರೆ, ಸನಾತನ ವಿವಾದದ ನಂತರ, ಉತ್ತರದಲ್ಲಿ ಪ್ರಧಾನಿ ಮೋದಿ (Narendra Modi) ಮತ್ತು ದಕ್ಷಿಣದಲ್ಲಿ ರಾಹುಲ್ (Rahul Gandhi) ಗೆಲ್ಲುವಂತೆ ಮಾಡುತ್ತದೆಯೇ? ಎಂಬ ಹಲವಾರು ಗೊಂದಲಗಳು ಮೂಡುತ್ತಿದೆ.

Lok Sabha election
Image Credit: Hindustantimes

ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ

ಸನಾತನ ವಿಚಾರದಲ್ಲಿ ಚುನಾವಣೆ ನಡೆದರೆ 2024ರಲ್ಲಿ ಪ್ರಧಾನಿ ಮೋದಿ ಪ್ರಭಾವ ಎಷ್ಟಿರಬಹುದು ಹಾಗು ಹಿಂದೂಗಳು ಒಂದಾಗುತ್ತಾರೆಯೇ ಅಥವಾ ಜಾತಿಗಳ ಮೇಲೆ ವಿಭಜಿಸುತ್ತಾರೆಯೇ ಎನ್ನುವ ಕುತೂಹಲಕಾರಿ ವಿಷಯದ ಸಮೀಕ್ಷೆ ಏನು ಹೇಳುತ್ತದೆ ಎಂಬುದನ್ನು ನೋಡಿದರೆ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಯಲ್ಲಿ, I.N.D.IA ದ ಸನಾತನ ವಿವಾದದ ನಂತರ ಹಿಂದೂ ಮತಗಳು ಒಂದಾಗುತ್ತಿವೆಯೇ ಎಂದು ಜನರನ್ನು ಕೇಳಲಾಯಿತು.

ಪ್ರತಿಕ್ರಿಯಿಸಿದವರಲ್ಲಿ ಸುಮಾರು 72 ಪ್ರತಿಶತದಷ್ಟು ಜನರು ‘ಹೌದು’ ಎಂದು ಹೇಳಿದ್ದಾರೆ, ಸನಾತನ ವಿಷಯದಲ್ಲಿ ಹಿಂದೂ ಮತಗಳು ಒಗ್ಗೂಡುತ್ತಿವೆ, ಆದರೆ 24 ಪ್ರತಿಶತ ಜನರು ‘ಇಲ್ಲ’ ಎಂದು ಹೇಳಿದರು ಮತ್ತು 4 ಪ್ರತಿಶತ ಜನರು ಯಾವುದೇ ಅಭಿಪ್ರಾಯವನ್ನು ಹೊಂದಿಲ್ಲ.

2024 Election Update
Image Credit: Zawya

ಸನಾತನ ಧರ್ಮದ ಬಗ್ಗೆ ಗೌರವ ಇರುವವರ ಸಂಖ್ಯೆ ಹೆಚ್ಚು

ದೇಶದಲ್ಲಿ ಸನಾತನ ಧರ್ಮದ ಬಗ್ಗೆ ಗೌರವ ಹೆಚ್ಚಿದೆಯೇ ಎಂಬ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವಂತೆಯೂ ಸಮೀಕ್ಷೆಯಲ್ಲಿ ಕೇಳಲಾಗಿದೆ. ಪ್ರತಿಕ್ರಿಯಿಸಿದವರಲ್ಲಿ ಸುಮಾರು 70 ಪ್ರತಿಶತದಷ್ಟು ಜನರು ‘ಹೌದು’ ಎಂದು ಹೇಳಿದರು, 23 ಪ್ರತಿಶತ ಜನರು ‘ಇಲ್ಲ’ ಎಂದು ಹೇಳಿದರು ಮತ್ತು 7 ಪ್ರತಿಶತ ಜನರು ಯಾವುದೇ ಅಭಿಪ್ರಾಯವನ್ನು ಹೊಂದಿಲ್ಲವಾಗಿತ್ತು.

Leave A Reply

Your email address will not be published.