Indian Railway: ರೈಲು ಪ್ರಯಾಣ ಮಾಡುವವರಿಗೆ ಗುಡ್ ನ್ಯೂಸ್, ಇನ್ನು ಮುಂದೆ ಟಿಕೆಟ್ ಬುಕ್ ಮಾಡುವುದು ಬಹಳ ಸುಲಭ.

ರೈಲಿನಲ್ಲಿ ಪ್ರಯಾಣ ಮಾಡುವವರಿಗಾಗಿ ಹೊಸ ನಿಯಮಗಳನ್ನು ಹಾಗು ಸೌಲಭ್ಯಗಳನ್ನು ಜಾರಿಗೆ ತಂದ ರೈಲ್ವೆ ಇಲಾಖೆ.

Indian Railway Ticket Booking: ಇತೀಚಿನ ದಿನಗಳಲ್ಲಿ ಜನರು ರೈಲು ಪ್ರಯಾಣಕ್ಕೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಪ್ರತಿಯೊಂದು ಕಡೆಯೂ ರೈಲು ಸಂಪರ್ಕ ಇರುವುದರಿಂದ ಪ್ರಯಾಣ ಸುಲಭ ಹಾಗು ಸುರಕ್ಷಿತಾ ಎಂದು ರೈಲಿಗೆ ಹೆಚ್ಚಿನ ಒಲವು ನೀಡುತ್ತಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ದೇಶದಲ್ಲಿ ಬಹಳ ಹೆಚ್ಚಾಗುತ್ತಿದ್ದು, ಬಹಳ ದೂರದ ಪ್ರಯಾಣಕ್ಕೂ ರೈಲನ್ನೇ ಜನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ರೈಲುಗಳಲ್ಲಿ ಜನಸಂದಣಿ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ದೊಡ್ಡ ಯೋಜನೆ ಸಿದ್ಧಪಡಿಸಿದೆ. ಈ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ 3 ಸಾವಿರ ಹೊಸ ರೈಲುಗಳನ್ನು ಆರಂಭಿಸುವ ಕೆಲಸ ನಡೆಯುತ್ತಿದೆ.

Indian Railway Facility
Image Credit: Economictimes

ರೈಲಿನಲ್ಲಿ ಪ್ರಯಾಣ ಮಾಡುವವರ ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಲೇ ಇದೆ

ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ಮುಂದಿನ 4-5 ವರ್ಷಗಳಲ್ಲಿ ಪ್ರಯಾಣಿಕರ ಸಾಮರ್ಥ್ಯವನ್ನು ಒಂದು ಸಾವಿರ ಕೋಟಿಗೆ ಹೆಚ್ಚಿಸಬೇಕಾಗಿದೆ. ಇದಕ್ಕಾಗಿ 3 ಸಾವಿರ ಹೆಚ್ಚುವರಿ ರೈಲುಗಳ ಅಗತ್ಯವಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ರೈಲ್ವೇಯ ಪ್ರಸ್ತುತ ಪ್ರಯಾಣಿಕರ ಸಾಮರ್ಥ್ಯವನ್ನು 800 ಕೋಟಿಗಳಿಂದ 1000 ಕೋಟಿಗಳಿಗೆ ಹೆಚ್ಚಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಇದಕ್ಕಾಗಿ ಮುಂದಿನ 5 ವರ್ಷಗಳಲ್ಲಿ 3 ಸಾವಿರ ಹೊಸ ರೈಲುಗಳನ್ನು ಆರಂಭಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ರೈಲು ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು ಸಚಿವಾಲಯದ ಮತ್ತೊಂದು ಪ್ರಮುಖ ಗುರಿಯಾಗಿದೆ ಎಂದು ಹೇಳಿದ್ದಾರೆ. ದೆಹಲಿಯ ರೈಲು ಭವನದಲ್ಲಿ ಮಾತನಾಡಿದ ರೈಲ್ವೆ ಸಚಿವರು, ‘ಸದ್ಯ ಪ್ರತಿ ವರ್ಷ ಸುಮಾರು 800 ಕೋಟಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Railway Facility Updates
Image Credit: Original Source

ರೈಲು ವ್ಯವಸ್ಥೆಯಲ್ಲಿ ಇನ್ನು ಹೆಚ್ಚುವರಿ ಸೌಲಭ್ಯಕ್ಕೆ ಆಧ್ಯತೆ

ರೈಲ್ವೆ ಮೂಲಗಳ ಪ್ರಕಾರ, ಇಲಾಖೆಯು ಪ್ರಸ್ತುತ 69 ಸಾವಿರ ಹೊಸ ಕೋಚ್‌ಗಳನ್ನು ಹೊಂದಿದ್ದು, ಪ್ರತಿ ವರ್ಷ ರೈಲ್ವೇ ಸುಮಾರು ಐದು ಸಾವಿರ ಹೊಸ ಬೋಗಿಗಳನ್ನು ತಯಾರಿಸುತ್ತಿದೆ. ಈ ಎಲ್ಲಾ ಪ್ರಯತ್ನಗಳಿಂದ, ರೈಲ್ವೆಯು ಪ್ರತಿ ವರ್ಷ 200 ರಿಂದ 250 ಹೊಸ ರೈಲುಗಳನ್ನು ತರಬಹುದು. ರೈಲ್ವೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು, ಪ್ರತಿ ವರ್ಷ ಸುಮಾರು ಐದು ಸಾವಿರ ಕಿಲೋಮೀಟರ್ ಹಳಿಗಳನ್ನು ನಿರ್ಮಿಸಲಾಗುತ್ತಿದೆ.

ಇನ್ನು ಒಂದು ಸಾವಿರಕ್ಕೂ ಹೆಚ್ಚು ಫ್ಲೈಓವರ್‌ಗಳು ಮತ್ತು ಕೆಳಸೇತುವೆಗಳಿಗೆ ಅನುಮೋದನೆ ನೀಡಲಾಗಿದ್ದು, ಹಲವೆಡೆ ಕಾಮಗಾರಿ ಆರಂಭಿಸಲಾಗಿದೆ. ಕಳೆದ ವರ್ಷ, 1,002 ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ನಿರ್ಮಿಸಿದ್ದೇವೆ ಮತ್ತು ಈ ವರ್ಷ ಈ ಸಂಖ್ಯೆಯನ್ನು 1,200 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿರುವುದಾಗಿ ಹೇಳಿದ್ದಾರೆ. ಪ್ರಯಾಣದ ಸಮಯವನ್ನು ಕಡಿತಗೊಳಿಸುವುದು ರೈಲ್ವೆಯ ಗುರಿಯಾಗಿದ್ದು ಇದಕ್ಕಾಗಿ ಸಚಿವಾಲಯವು ರೈಲುಗಳ ವೇಗವನ್ನು ಸುಧಾರಿಸಲು ಮತ್ತು ರೈಲು ನೆಟ್ವರ್ಕ್ ವಿಸ್ತರಿಸುವ ಕೆಲಸ ಮಾಡುತ್ತಿದೆ ಎನ್ನಲಾಗಿದೆ.

Leave A Reply

Your email address will not be published.