Indian Railway: ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ, ಇನ್ನುಮುಂದೆ ಈ ರೀತಿಯಲ್ಲಿ ತಿಳಿದುಕೊಳ್ಳಿ ಖಾಲಿ ಸೀಟ್ ಮಾಹಿತಿ.
ಇನ್ನು ರೈಲಿನಲ್ಲಿ ಪ್ರಯಾಣಿಸಲು ಖಾಲಿ ಇರುವ ಸೀಟಿನ ಬಗ್ಗೆ ಸುಲಭವಾಗಿ ಮಾಹಿತಿ ಪಡೆಯಿರಿ.
Indian Railway Latest Update: ರೈಲಿನಲ್ಲಿ ಪ್ರಯಾಣಿಸುವವರಿಗೆ ಇಲ್ಲಿದೆ ಶುಭ ಸುದ್ದಿ. ಅದೇನೆಂದರೆ ಹಲವು ಬಾರಿ ನಮ್ಮ ರೈಲು ಟಿಕೆಟ್ ಕನ್ಫರ್ಮ್ ಆಗದೇ ವೇಟಿಂಗ್ ಲಿಸ್ಟ್ ನಲ್ಲಿದ್ದರೂ ನಾವು ಆ ಸಮಯಕ್ಕೆ ರೈಲಿನಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಪ್ರಯಾಣದ ಸಮಯದಲ್ಲಿ ನಮ್ಮ ಟಿಕೆಟ್ ಕನ್ಫರ್ಮ್ ಆಗಿದೆಯೋ ಇಲ್ಲವೋ ಎಂದು ತಿಳಿಯಲು ನಾವು ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಮೊರೆ ಹೋಗುತ್ತೇವೆ.
ಅದಲ್ಲದೆ ರೈಲಿನಲ್ಲಿ ಸೀಟು ಖಾಲಿ ಇದೆಯೋ ಇಲ್ಲವೋ ಎಂದು ಟಿಟಿಇಯಿಂದ ತಿಳಿದುಕೊಳ್ಳುತ್ತೇವೆ. ರೈಲಿನಲ್ಲಿ ಯಾವುದೇ ಸೀಟು ಖಾಲಿಯಿದ್ದರೆ ಆ ಸೀಟು ನಮಗಾಗಿ ಕಾಯ್ದಿರಿಸುವಂತೆ ಟಿಟಿಇ ಅವರನ್ನು ಕೋರುತ್ತೇವೆ.ಆದರೆ ಈಗ ನೀವು ಇದಕ್ಕಾಗಿ ಟಿಟಿಇ ಸಂಪರ್ಕಿಸಬೇಕಿಲ್ಲಇಲ್ಲಿದೆ ಸುಲಭ ವಿಧಾನ.

ಸೀಟು ಖಾಲಿ ಇದೆಯೋ, ಇಲ್ಲವೊ ಎಂದು ಸುಲಭವಾಗಿ ತಿಳಿಯಿರಿ
ವಾಸ್ತವವಾಗಿ ಪ್ರಯಾಣದ ಸಮಯದಲ್ಲಿ ರೈಲಿನ ಯಾವ ಕೋಚ್ನಲ್ಲಿ ಯಾವ ಸೀಟು ಅಥವಾ ಬೆರ್ತ್ ಖಾಲಿಯಾಗಿದೆ ಎಂಬುದನ್ನು ಕೆಲವೇ ಕ್ಲಿಕ್ಗಳ ಮೂಲಕ ತಿಳಿಯಬಹುದು. ನೀವು ದೃಢೀಕೃತ ಸೀಟ್ ಹೊಂದಿಲ್ಲದಿದ್ದರೂ ಸಹ ರೈಲಿನಲ್ಲಿ ಖಾಲಿ ಇರುವ ಸೀಟುಗಳ ಬಗ್ಗೆ ನೀವು ಸುಲಭವಾಗಿ ಕಂಡುಹಿಡಿಯಬಹುದು. ಇದಕ್ಕಾಗಿ ನೀವು IRCTC ವೆಬ್ಸೈಟ್ ಅಥವಾ ಅಪ್ಲಿಕೇಶನ್ನ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ.
IRCTC ವೆಬ್ಸೈಟ್ನಿಂದ ಖಾಲಿ ಇರುವ ಸೀಟ್ ಅನ್ನು ಕಂಡು ಹಿಡಿಯುವ ವಿಧಾನ
IRCTC ಯ ಅಧಿಕೃತ ವೆಬ್ಸೈಟ್ನ ಮುಖ್ಯ ಪುಟಕ್ಕೆ ಹೋಗಿ ಮತ್ತು ಬುಕ್ ಟಿಕೆಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಇಲ್ಲಿ ನೀವು ಮೇಲ್ಭಾಗದಲ್ಲಿ charts/vacancy ಎಂಬ ಆಯ್ಕೆಯನ್ನು ನೋಡುತ್ತೀರಿ. ನೀವು ಅದರ ಮೇಲೆ ಕ್ಲಿಕ್ ರಿಸರ್ವೇಶನ್ ಚಾರ್ಟ್ ತೆರೆದಾಗ ಮೊದಲ ಬಾಕ್ಸ್ ನಲ್ಲಿ ರೈಲಿನ ಹೆಸರು ಅಥವಾ ರೈಲು ಸಂಖ್ಯೆಯನ್ನು ಮತ್ತು ಎರಡನೇ ಬಾಕ್ಸ್ ನಲ್ಲಿ ಬೋರ್ಡಿಂಗ್ ನಿಲ್ದಾಣದ ಹೆಸರನ್ನು ನಮೂದಿಸಿ, ಇದರ ನಂತರ ನೀವು ಗೆಟ್ ಟ್ರೈನ್ ಚಾರ್ಟ್ ಅನ್ನು ಕ್ಲಿಕ್ ಮಾಡಿದ ತಕ್ಷಣ, ಖಾಲಿ ಸೀಟುಗಳ ಇತ್ತೀಚಿನ ಸ್ಥಿತಿಯು ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ.

ಮೊಬೈಲ್ ಫೋನ್ನಲ್ಲಿ IRCTC ಯ ಖಾಲಿ ಇರುವ ಸೀಟ್ ಅನ್ನು ಕಂಡುಹಿಡಿಯಬಹುದು
IRCTC ವೆಬ್ಸೈಟ್ ಜೊತೆಗೆ, ನಿಮ್ಮ ಮೊಬೈಲ್ ಫೋನ್ನಲ್ಲಿ IRCTC ಯ ಅಧಿಕೃತ ಅಪ್ಲಿಕೇಶನ್ನಲ್ಲಿ ಖಾಲಿ ಇರುವ ಸೀಟುಗಳ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು. IRCTC ಅಪ್ಲಿಕೇಶನ್ Android ಮತ್ತು iOS ಅಪ್ಲಿಕೇಶನ್ ಸ್ಟೋರ್ಗಳಲ್ಲಿ ಲಭ್ಯವಿದೆ. ಇದಕ್ಕಾಗಿ ನೀವು ಮೊದಲು IRCTC ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು,ನಿಮ್ಮ ಮೊಬೈಲ್ ಫೋನ್ನಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ನಂತರ,
IRCTC ಅಪ್ಲಿಕೇಶನ್ ತೆರೆದ ನಂತರ, ರೈಲು ಐಕಾನ್ ಮೇಲೆ ಕ್ಲಿಕ್ ಮಾಡಿ. ಇದರ ನಂತರ Chart Vacancy ಜಾಗವನ್ನು ಕ್ಲಿಕ್ ಮಾಡಿ. ಇದರ ನಂತರ ರಿಸರ್ವೇಷನ್ ಚಾರ್ಟ್ ಪುಟವು ನಿಮ್ಮ ಮೊಬೈಲ್ ವೆಬ್ ಬ್ರೌಸರ್ನಲ್ಲಿ ತೆರೆಯುತ್ತದೆ. ನಂತರ ಎರಡನೇ ಬಾಕ್ಸ್ ನಲ್ಲಿ ರೈಲಿನ ಹೆಸರು/ಸಂಖ್ಯೆ ಮತ್ತು ಬೋರ್ಡಿಂಗ್ ನಿಲ್ದಾಣದ ಹೆಸರನ್ನು ನಮೂದಿಸಿ,ಇದರ ನಂತರ ನಿಮಗೆ ಖಾಲಿ ಇರುವ ಆಸನಗಳ ಬಗ್ಗೆ ಮಾಹಿತಿ ಕಾಣುತ್ತದೆ.
[…] those on the go, the official IRCTC mobile app, available on Android and iOS app stores, provides the same convenient […]