Railway System: ಇನ್ಮುಂದೆ ರೈಲ್ವೆ ಟಿಕೆಟ್ ಗಾಗಿ ಕೌಂಟರ್ ಮುಂದೆ ನಿಲ್ಲೋದು ಬೇಕಿಲ್ಲ, ಹೊಸ ಯೋಜನೆ ಆರಂಭ.
ಇನ್ನು ಮುಂದೆ ಸುಲಭ ವಿಧಾನದ ಮೂಲಕ ರೈಲ್ವೆ ಟಿಕೆಟ್ ಪಡೆಯಬಹುದು.
Indian Railway Ticket: ರೈಲಿನಲ್ಲಿ ಪ್ರಯಾಣ ಮಾಡಲು ಪ್ರತಿಯೊಬ್ಬರು ಇಷ್ಟ ಪಡುತ್ತಾರೆ ಯಾಕೆಂದರೆ ಸುರಕ್ಷತೆ ಹಾಗು ಆರಾಮದಾಯಕ ಎನ್ನುವ ಕಾರಣಕ್ಕೆ ಆದರೆ ರೈಲಿನಲ್ಲಿ ಪ್ರಯಾಣ ಮಾಡಲು ಟಿಕೆಟ್ ತೆಗೆಯುವುದು ಮಾತ್ರ ಬಹಳ ಕಷ್ಟದ ಕೆಲಸವಾಗಿದೆ.
ಸರದಿ ಸಾಲಿನಲ್ಲಿ ನಿಂತು ಟಿಕೆಟ್ ತೆಗೆಯಲು ಸಾಧ್ಯವಾಗದೆ ಎಷ್ಟೋ ಜನ ಬೇರೆ ವಾಹನದ ಕಡೆ ಹೋಗುವುದುಂಟು. ಆದರೆ ಈಗ ಟಿಕೆಟ್ ಗಾಗಿ ಸಾಲಿನಲ್ಲಿ ನಿಲ್ಲುವ ಶೈಲಿಗೆ ಪೂರ್ಣ ವಿರಾಮ ಇಡುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಕಾರ್ಯ ಪ್ರವೃತ್ತವಾಗಿದೆ. ಅದರ ಭಾಗವಾಗಿ ಯುಟಿಎಸ್ ಮೊಬೈಲ್ App ಪರಿಚಯಿಸಿದ್ದು, QR Code Scan ಮಾಡುವ ಮೂಲಕ ತಕ್ಷಣವೇ ಟಿಕೆಟ್ ಪಡೆಯಬಹುದಾಗಿದೆ.
ರೈಲ್ವೆ ಟಿಕೆಟ್ ತೆಗೆಯಲು ಹೊಸ ನಿಯಮ
ಯುಟಿಎಸ್ ಮೊಬೈಲ್ App ಬಳಕೆಯಿಂದ ಟಿಕೆಟ್ ಕೌಂಟರ್ ಮುಂಭಾಗದ ಶೇ.30ರಷ್ಟು ಸರದಿ ಸಾಲನ್ನು ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ಇದೆ. ಯುಟಿಎಸ್ App ಮೂಲಕ ಖಾಯ್ದಿರಿಸದ ಸಾಮಾನ್ಯ ಪ್ರಯಾಣದ ಟಿಕೆಟ್, ಫ್ಲಾಟ್ ಫಾರ್ಮ್ ಟಿಕೆಟ್, ಸೀಸನ್ ಟಿಕೆಟ್ ಗಳನ್ನು ಸುಲಭವಾಗಿ ಬುಕ್ ಮಾಡಬಹುದು. ನಿಲ್ದಾಣಗಳಲ್ಲಿರುವ ಕ್ಯೂಆರ್ ಕೋಡ್ ಅನ್ನು App ಮೂಲಕ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಬಹುದು.
ಯುಟಿಎಸ್ ಮೊಬೈಲ್ App ಬಳಕೆಯಿಂದ ಟಿಕೆಟ್ ತೆಗೆಯುವ ವಿಧಾನ
App ನಲ್ಲಿ ಕೋಡ್ ಸ್ಕ್ಯಾನ್ ಮಾಡಿದ ನಂತರ ಗ್ರಾಹಕರಿಗೆ ಯಾತ್ರಾ ಟಿಕೆಟ್ ಅಥವಾ ಫ್ಲಾಟ್ ಫಾರ್ಮ್ ಟಿಕೆಟ್ ಬೇಕೆ ಎನ್ನುವ ಆಯ್ಕೆ ಬರುತ್ತದೆ. ಅದನ್ನು ಆರಿಸಬೇಕು. ಬಳಿಕ ಮೊದಲಿನಂತೆ ಟಿಕೆಟ್ ಖರೀದಿಸಬಹುದು. ತಪಾಸಣೆ ಸಮಯದಲ್ಲಿ ಮೊಬೈಲ್ ನಲ್ಲಿರುವ ಟಿಕೆಟ್ ತೋರಿಸಿದರೆ ಸಾಕಾಗುತ್ತದೆ. ಮತ್ತೊಂದು ವಿಶೇಷ ಎಂದರೆ ಇದಕ್ಕೆ ಇಂಟರ್ ನೆಟ್ ಅಗತ್ಯವಿಲ್ಲ.
ಆದರೆ ಯುಟಿಎಸ್ App ಮೂಲಕ ಮೀಸಲು ಟಿಕೆಟ್ ಪಡೆಯಲು ಸಾಧ್ಯವಿಲ್ಲ. ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ. ಡೆಬಿಟ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಮುಂತಾದ ವಿಧಾನಗಳಿಂದ ಹಣ ಪಾವತಿಸಬಹುದು. ಈ App ಅನ್ನು ಹೈದರಾಬಾದ್ ಮೂಲದ ಸೆಂಟರ್ ಫಾರ್ ರೈಲ್ವೆ ಇನ್ಫರ್ಮೇಷನ್ ಸಿಸ್ಟಮ್ಸ್ (ಸಿ.ಆರ್.ಐ.ಎಸ್.) ಅಭಿವೃದ್ದಿ ಪಡಿಸಿ ನಿರ್ವಹಿಸುತ್ತಿದೆ.