Invest Plan; ನಿವೃತ್ತಿ ಸಮಯದಲ್ಲಿ ಹಣ ಉಳಿಸಲು ಈ ಯೋಜನೆಗೆ ಹಣ ಹಾಕಿ
ಈಗ ದುಡಿಯುತ್ತಿರುವವರು ಮುಂದೆ ನಿವೃತ್ತಿ ಹಂತಕ್ಕೆ ಬಂದಾಗ ಕಾಲಿ ಕೈ ಆಗುತ್ತಾರೆ. ಸಾಮಾನ್ಯವಾಗಿ ನಿವೃತ್ತಿಗೂ ಮೊದಲೇ ನಿವೃತ್ತಿ ಜೀವನ ಹೀಗೆ ಇರಬೇಕು ಎಂದು ಪ್ಲಾನ್ ಮಾಡುವುದು ಬುದ್ದಿವಂತಿಕೆ ಆಗಿದೆ.ಅಲ್ಲದೆ ಪ್ರತಿಯೊಬ್ಬರೂ ಕೂಡಾ ನಿವೃತ್ತಿಯ ಸಮಯದಲ್ಮಾಾಕಷ್ಟು ಹಣ ಇಟ್ಟುಕೊಳ್ಳುವುದನ್ನು ಬಯಸುತ್ತಾರೆ.
ಹೀಗಾಗಿ ಜನರು ಉಳಿತಾಯ ಮಾಡುವತ್ತ ಗಮನಹರಿಸುತ್ತಾರೆ. ಉತ್ತಮ ಆದಾಯ ಬರುವಂತೆ ಎಲ್ಲಿ ಹೂಡಿಕೆ ಮಾಡಬಹುದು ಎಂದು ಹುಡುಕುವುದು ಸಹಜ. ಈ ಹಣವನ್ನು ನಿಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆ, ಮನೆ ಮತ್ತು ಕಾರು ಖರೀದಿ ಅಥವಾ ಪ್ರಯಾಣಕ್ಕೆ ಬಳಸಬಹುದು. ಹೀಗಾಗಿ ನಿವೃತ್ತಿ ಜೀವನಕ್ಕೆ ಹೇಗೆಲ್ಲ ಹಣ ಉಳಿತಾಯ ಮಾಡಬಹುದು ಎಂಬ ಕೆಲವು ಟಿಪ್ಸ್ ಇಲ್ಲಿದೆ.
ಸರ್ಕಾರಿ ನೌಕರರು ತಮ್ಮ ನಿವೃತ್ತಿಯ ಹಣವನ್ನು ಪಿಂಚಣಿಗಾಗಿ ಅಥವಾ ಹೆಚ್ಚಿನ ಮೊತ್ತಕ್ಕೆ ಹೂಡಿಕೆ ಮಾಡಬಹುದು. ಮತ್ತೊಂದೆಡೆ, ಸಾಮಾನ್ಯ ಜನರು ಉಳಿತಾಯದ ಹಣವನ್ನು ಹೂಡಿಕೆ ಮಾಡುವ ಮೂಲಕ ಗರಿಷ್ಠ ನಿವೃತ್ತಿ ನಿಧಿಯನ್ನು ಸೃಷ್ಟಿಸಲು ಯೋಜಿಸಬಹುದು. ಖಾಸಗಿ ವಲಯದ ಉದ್ಯೋಗಿಗಳು ಇಪಿಎಫ್‌ನ ಆಯ್ಕೆ ಹೊಂದಿದ್ದರೂ, ಕೇವಲ ಅದೊಮದೇ ಯೋಜನೆಯಿಂದ ಉತ್ತಮ ಮೊತ್ತವನ್ನು ಸಂಗ್ರಹಿಸಲು ಆಗದು. ಹೀಗಾಗಿ ಇಪಿಎಫ್ ಜತೆಗೆ ವಿವಿಧ ರೀತಿಯ ಉಳಿತಾಯ ಯೋಜನೆಗಳಲ್ಲಿ ಉಳಿತಾಯ ಮಾಡಬೇಕಾಗುತ್ತದೆ.
ನೀವು ನಿವೃತ್ತಿಗಾಗಿ ಹೆಚ್ಚಿನ ಹಣ ಸಂಗ್ರಹಿಸಲು ಬಯಸಿದರೆ, ನೀವು ಯಾವೆಲ್ಲ ವಿಧಾನಗಳಲ್ಲಿ ಉಳಿತಾಯ ಮತ್ತು ಹೂಡಿಕೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.
ಪಿಂಚಣಿ ಮತ್ತು ಇಪಿಎಫ್
ಸರ್ಕಾರವು ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಪ್ರಾರಂಭಿಸಿದೆ. ಅದರ ಅಡಿಯಲ್ಲಿ ನೀವು ನಿಗದಿತ ಮೊತ್ತವನ್ನು ಹೂಡಿಕೆ ಮಾಡಬಹುದು. ಇದು ನಿಮ್ಮ ಕೊಡುಗೆಯ ಮೇಲೆ ನಿವೃತ್ತಿಯ ನಂತರ ಪಿಂಚಣಿ ಪ್ರಯೋಜನ ನೀಡುತ್ತದೆ. ಇದರೊಂದಿಗೆ ನಿವೃತ್ತಿ ಮೇಲೆಯೂ ನಿಗದಿತ ಮೊತ್ತ ನೀಡಲಾಗುವುದು. ಎನ್‌ಪಿಎಸ್ ಅಡಿಯಲ್ಲಿ ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಖಾಸಗಿ ವಲಯದ ಉದ್ಯೋಗಿಗಳಿಗೆ ಇದು ಐಚ್ಛಿಕವಾಗಿರುತ್ತದೆ. ಅದೇ ಸಮಯದಲ್ಲಿ, ಅವರು ಕಡ್ಡಾಯವಾಗಿ EPF ನಲ್ಲಿ ಹೂಡಿಕೆ ಮಾಡಬೇಕು.
ಉದ್ಯೋಗಿ ಮತ್ತು ಕಂಪನಿ ಇಬ್ಬರೂ EPF ಗೆ ಕೊಡುಗೆ ನೀಡುತ್ತಾರೆ. ಇಪಿಎಫ್ ಠೇವಣಿ ಮೇಲೆ ಸರ್ಕಾರವು ಪ್ರತಿ ವರ್ಷವೂ ಬಡ್ಡಿ ಪಾವತಿಸುತ್ತದೆ. ನಿವೃತ್ತಿ ಮತ್ತು ತುರ್ತು ಸಮಯದಲ್ಲಿ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು.
ಉಳಿತಾಯ ಯೋಜನೆಗಳು
ಯಾವುದೇ ವ್ಯಕ್ತಿ ತನ್ನ ನಿವೃತ್ತಿಗಾಗಿ ಹಣಕ್ಕಾಗಿ ಪಿಪಿಎಫ್, ಮ್ಯೂಚುವಲ್ ಫಂಡ್‌ಗಳು, ಸಣ್ಣ ಉಳಿತಾಯ ಯೋಜನೆಗಳು, ವಿಮಾ ಯೋಜನೆಗಳು, ಬ್ಯಾಂಕ್‌ನ ಸ್ಥಿರ ಠೇವಣಿ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಇದಲ್ಲದೆ, ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.
ನಿವೃತ್ತಿ ಜೀವನಕ್ಕೆ ಹಣ ಉಳಿಸುವ ಬಗ್ಗೆ ಮಾಹಿತಿ ಇಲ್ಲಿದೆ..
ನೀವು ನಿವೃತ್ತಿಗಾಗಿ ಹಣ ಉಳಿಸುತ್ತಿದ್ದರೆ, ನಿಮ್ಮ ವಾರ್ಷಿಕ ಆದಾಯಕ್ಕಿಂತ 20 ರಿಂದ 30 ಪಟ್ಟು ಹೆಚ್ಚಿನ ಮೊತ್ತವನ್ನು ಸಂಗ್ರಹಿಸುವ ಗುರಿ ಹೊಂದಿರಬೇಕು. ಅದಕ್ಕೆ ಅನುಗುಣವಾಗಿ ಉಳಿತಾಯ ಮತ್ತು ಹೂಡಿಕೆ ಯೋಜನೆಯನ್ನು ಆರಿಸಿಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡಿ. ನಿವೃತ್ತಿಗಾಗಿ ಹಣವನ್ನು ಸಂಗ್ರಹಿಸುವಾಗ, ನೀವು ಅಪಾಯ ಮತ್ತು ರಿಟರ್ನ್ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಅನೇಕ ತಜ್ಞರು ಹೇಳುತ್ತಾರೆ.