Iphone 15: ಭಾರತದಲ್ಲಿ iPhone 15 ಬೆಲೆ ಎಷ್ಟು…? ಬಿಡುಗಡೆಗೂ ಮುನ್ನವೇ ಲಕ್ಷ ಲಕ್ಷ ಬುಕಿಂಗ್.
ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್, ಹೊಸ ಐಫೋನ್ 15 ಇಂದೇ ಬುಕ್ ಮಾಡಿ.
iPhone 15 Launch: ಐಫೋನ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳ, iPhone ಖರೀದಿಸಲು ಎಲ್ಲರಿಗೂ ಆಸೆ ಇರುತ್ತದೆ ಆದ್ರೆ ಈ ಫೋನ್ ನ ಬೆಲೆ ಕೇಳಿದರೆ ಶಾಕ್ ಆಗುವುದು ಖಚಿತ. ಹಾಗೆಯೆ ಆಪಲ್ ಕಂಪನಿಯು ತನ್ನ ನೂತನ iPhone ಅನ್ನು ಇಂದು ನಡೆಯಲಿರುವ ವಂಡರ್‌ಲಸ್ಟ್ ಕಾರ್ಯಕ್ರಮದಲ್ಲಿ ಘೋಷಿಸಲಿದೆ.
ಇಂದು ಬೆಳಗ್ಗೆ 10.30 ಗಂಟೆಗೆ ಕಾರ್ಯಕ್ರಮ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಆಪಲ್ ತನ್ನ ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ. ಯುಎಸ್‌ಬಿ ಸಿ, ಐಒಎಸ್ 17 ಶೆಡ್ಯೂಲ್, ಆಪಲ್ ಹೊಸ ವಾಚ್‌ಗಳು, ನೂತನ ಏರ್‌ಪಾಡ್ಸ್ ಪ್ರೊ ಇತ್ಯಾದಿಗಳೂ ಬಿಡುಗಡೆಯಾಗಲಿವೆ.
ಅತ್ಯುತ್ತಮವಾಗಿರುವುದನ್ನು ಖರೀದಿಸಲು ಗ್ರಾಹಕರು ತುಸು ತಮ್ಮ ಬಜೆಟ್ ಹೆಚ್ಚಿಸಿಕೊಳ್ಳಬೇಕಿದೆ
ನೂತನ ಐಫೋನ್ 15 ಮತ್ತು 15 ಪ್ಲಸ್ ದರವು ಇದರ ಈ ಹಿಂದಿನ ಮಾದರಿಗಳಂತೆ ತಲಾ 799 ಮತ್ತು 899 ಡಾಲರ್ ಇರುವ ನಿರೀಕ್ಷೆಯಿದೆ. ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ದರ ಮಾತ್ರ ಇದಕ್ಕಿಂತ ಹೆಚ್ಚಿರಲಿದೆ ಎಂದು ಟೆಕ್ ತಜ್ಞರು ಹೇಳಿದ್ದಾರೆ. ಪ್ರೊ ಮತ್ತು ಪ್ರೊ ಮ್ಯಾಕ್ಸ್ ದರ ಹೆಚ್ಚಿರುವ ಸೂಚನೆಯನ್ನು ಈಗಾಗಲೇ ಆಪಲ್ ಸಿಇಒ ಟಿಮ್ ಕುಕ್ ನೀಡಿದ್ದಾರೆ. “ಈ ಕೆಟಗರಿಯಲ್ಲಿ ಅತ್ಯುತ್ತಮವಾಗಿರುವುದನ್ನು ಖರೀದಿಸಲು ಗ್ರಾಹಕರು ತುಸು ತಮ್ಮ ಬಜೆಟ್ ಹೆಚ್ಚಿಸಿಕೊಳ್ಳಬೇಕಿದೆ” ಎಂದು ಅವರು ಹೇಳಿದ್ದಾರೆ.
ಐಫೋನ್ 15 ರ ಬೆಲೆ
ಇಂದು ನಡೆಯುತ್ತಿರುವ ವಂಡರ್‌ಲಸ್ಟ್ ಕಾರ್ಯಕ್ರಮದಲ್ಲಿ ಐಫೋನ್ 15 ರ ದರದ ಕುರಿತು ಅಪ್‌ಡೇಟ್ ದೊರಕಬಹುದು. ಭಾರತದಲ್ಲಿ ನೂತನ ಐಫೋನ್ ದರವು 79,900 ರೂಪಾಯಿಯಿಂದ ಆರಂಭವಾಗುವ ಸೂಚನೆಯನ್ನು ಟೆಕ್ ತಜ್ಞರು ನೀಡಿದ್ದಾರೆ. ಕಳೆದ ವರ್ಷ ಇದೇ ದರದಲ್ಲಿ ಐಫೋನ್ 15 ಭಾರತದಲ್ಲಿ ಲಾಂಚ್ ಆಗಿತ್ತು. ಐಫೋನ್ 15 ಪ್ಲಸ್ ಆರಂಭಿಕ ದರ ಸುಮಾರು 89,900 ರೂಪಾಯಿ ಇತ್ತು. ಇದೀಗ ಅಪ್‌ಡೇಟೆಡ್ ಆವೃತ್ತಿಗಳ ದರ ಎಷ್ಟಿದೆ ಎಂಬ ಕುತೂಹಲ ಜನರಲ್ಲಿ ಮೂಡಿದೆ.
ಹೊಸ ಐಫೋನ್ ವಿಶೇಷತೆಗಳು
ಹೊಸ ಐಫೋನ್ ನಲ್ಲಿ ಸಾಲಿಡ್ ಬಟನ್, ಯುಎಸ್‌ಬಿ ಸಿ ಮೂಲಕ ವೇಗದ ಚಾರ್ಜಿಂಗ್ ಇತ್ಯಾದಿ ಹಲವು ಫೀಚರ್‌ಗಳು ಇರಲಿವೆ. ಆದರೆ, ಜನರು ಮಾತ್ರ ಅದರ ಹೊಸ ಕ್ಯಾಮೆರಾದ ಕುರಿತು ಹೆಚ್ಚಿನ ಚರ್ಚೆ ನಡೆಸುತ್ತಿದ್ದಾರೆ. ಈಗಾಗಲೇ ಐಫೋನ್ 14ರಲ್ಲಿ ಅದ್ಭುತ ಕ್ಯಾಮೆರಾ ಇದೆ. ವೃತ್ತಿಪರ ಫೋಟೊಗ್ರಾಫರ್ ತೆಗೆದಂತಹ ಚಿತ್ರ ತೆಗೆಯಲು ಈ ಐಫೋನ್ ನೆರವು ನೀಡುತ್ತದೆ. ಅಂದರೆ, ಡಿಎಸ್‌ಎಲ್‌ಆರ್ ಕ್ಯಾಮೆರಾದ ಚಿತ್ರದಂತೆ ಗುಣಮಟ್ಟ ನೀಡುತ್ತದೆ. ಹಾಗಾದರೆ, ಇದಕ್ಕಿಂತಲೂ ಅತ್ಯುತ್ತಮವಾದ ಐಫೋನ್ 15ನ ಕ್ಯಾಮೆರಾ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.