Hardik Pandya: ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಬೇಸರದ ಸುದ್ದಿ, ಸ್ಟಾರ್ ಆಟಗಾರ ತಂಡಕ್ಕೆ ಮರಳಲಿಲ್ಲ.

ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಬೇಸರದ ಸುದ್ದಿ, ಹಾರ್ದಿಕ್ ಪಾಂಡ್ಯ ತಂಡಕ್ಕೆ ಬರಲ್ಲ.

IPL 2024 Latest Update: ಈಗ ಏಕದಿನ ವಿಶ್ವಕಪ್ ಟೂರ್ನಿ ಮುಗಿದು ಎಲ್ಲರ ಗಮನ ಐಪಿಎಲ್​ ನ ಕಡೆಗೆ ಸಾಗುತ್ತಿದೆ. ಯಾಕೆಂದರೆ 2024 ರ ಐಪಿಎಲ್​ ಟೂರ್ನಿ ತಯಾರಿ ಈಗಾಗಲೇ ಪ್ರಾರಂಭಗೊಂಡಿದ್ದು , 2024ನೇ ಸಾಲಿನ ಐಪಿಎಲ್​ ಹರಾಜಿಗೂ ಮುನ್ನ ಡಿಸೆಂಬರ್​ 19ರಂದು ದುಬೈನಲ್ಲಿ ನಡೆಯಲಿರುವ ಎಲ್ಲ 10 ಫ್ರಾಂಚೈಸಿಗಳು ರಿಟೇನ್​ ಮತ್ತು ರಿಲೀಸ್​ ಮಾಡಿದ ಆಟಗಾರರನ್ನು ಇಂದು ಘೋಷಣೆ ಮಾಡಿದೆ.

ಇದಕ್ಕೂ ಮುನ್ನ Hardik Pandya ಗುಜರಾತ್​ ಟೈಟಾನ್ಸ್​ ಬಿಟ್ಟು ಮುಂಬೈಗೆ ಮರಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದರಲ್ಲೂ ಬಹುತೇಕ ಖಚಿತವೆಂದೇ ಹೇಳಲಾಗಿತ್ತು. ಆದರೆ, ಅದೆಲ್ಲ ಸುಳ್ಳು ಎಂಬುದು ಇದೀಗ ಸಾಬೀತಾಗಿದೆ. ಗುಜರಾತ್​ ಟೈಟಾನ್ಸ್​ ಫ್ರಾಂಚೈಸಿ ಹಾರ್ದಿಕ್​ ಪಾಂಡ್ಯರನ್ನು ರಿಟೇನ್​ ಮಾಡಿಕೊಂಡಿದೆ.

Hardik Pandya Latest News
Image Credit: Zeebiz

ಹಾರ್ದಿಕ್​ ಪಾಂಡ್ಯರ ಕುರಿತು ಸುಳ್ಳು ಊಹಾಪೋಹಗಳನ್ನು ಹರಿಬಿಡಲಾಗಿದೆ

ಏಕದಿನ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿತು. ಇದರ ಮೇಲಿನ ಜನರ ಗಮನವನ್ನು ಬೇರೆ ಕಡೆ ತಿರುಗಿಸಲು Hardik Pandya ಕುರಿತು ಊಹಾಪೋಹಗಳನ್ನು ಹರಿಬಿಡಲಾಗಿದೆ ಎಂದು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಈ ಊಹಾಪೋಹಗಳ ಹಿಂದೆ ರೋಹಿತ್​ ಶರ್ಮ, ಪತ್ನಿ ರಿತಿಕಾ ಮತ್ತು ಬಿಸಿಸಿಐ ಕೈವಾಡ ಇದೆ ಎನ್ನುವ ಅರ್ಥದಲ್ಲಿ ನೆಟ್ಟಿಗರು ಆರೋಪಗಳ ಸುರಿಮಳೆಗೈದಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಬಿಸಿಸಿಐ ಮತ್ತು ಟೀಮ್​ ಇಂಡಿಯಾ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಟೀಕೆಗಳ ಸುರಿಮಳೆ

ಎಲ್ಲ ವರದಿಗಾರರು ಮತ್ತು ಪಿಆರ್​ ಏಜೆನ್ಸಿಗಳು ನಿಮ್ಮ ಎಲ್ಲ ಕಾರ್ಯಗಳಲ್ಲಿ ಯಶಸ್ವಿಯಾಗಿದ್ದೀರಿ. ನೀವೆಲ್ಲರೂ ವಿಶ್ವಕಪ್‌ನಿಂದ ಐಪಿಎಲ್ ವಹಿವಾಟಿನತ್ತ ನಮ್ಮ ಗಮನವನ್ನು ಎಷ್ಟು ಸುಲಭವಾಗಿ ಬದಲಾಯಿಸಿದ್ದೀರಿ. ಇದು ನಿಜಕ್ಕೂ ಚೆನ್ನಾಗಿದೆ ಮತ್ತು ಹೇಳಲು ಕರುಣಾಜನಕವಾಗಿದೆ. ಹಾರ್ದಿಕ್​ ಹೋಗುತ್ತಾರೆ ಎಂದು ಎಲ್ಲರು ಭಾವಿಸಿದ್ದೇವು, ಆದರೆ ಅವರು ಉಳಿದುಕೊಂಡಿದ್ದಾರೆ ಎಂದು ನೆಟ್ಟಿಗರೊಬ್ಬರು ಎಕ್ಸ್​ ಖಾತೆಯಲ್ಲಿ ಟೀಕಿಸಿದ್ದಾರೆ.

ವಿಶ್ವಕಪ್​ ಸೋಲು ಮತ್ತು ರೋಹಿತ್​ ಶರ್ಮ ಕಳಪೆ ನಾಯಕತ್ವದ ಮೇಲಿನ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಹಾರ್ದಿಕ್​ ಪಾಂಡ್ಯ ವರ್ಗಾವಣೆ ನಾಟಕವನ್ನು ಬಿಸಿಸಿಐ ಚೆನ್ನಾಗಿ ಎಣೆದಿದೆ. ಇಡೀ ಡ್ರಾಮಾದಲ್ಲಿ BCCI ಯಶಸ್ವಿಯಾಗಿದೆ. ಇದೀಗ ಬಹುತೇಕ ಮಂದಿ ವಿಶ್ವಕಪ್​ ಮರೆತಿದ್ದಾರೆ. ಇದೀಗ ಎಲ್ಲರ ಕಣ್ಣು IPL​ ಮೇಲಿದೆ ಎಂದು ಸಾಕಷ್ಟು ನೆಟ್ಟಿಗರು ಬಿಸಿಸಿಐ, ರೋಹಿತ್​ ಶರ್ಮ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.

IPL 2024 Latest Update
Image Credit: Vijayvani

ವಿಶ್ವಕಪ್ ಸೋಲಿನಿಂದ ಪಾರಾಗಲು ಮಾಡಿದ ತಂತ್ರ

ವಿಶ್ವಕಪ್​ ಸೋತ ಬಳಿಕ ರೋಹಿತ್​ ಶರ್ಮ ಅವರ ಪಿಆರ್​ ತಂಡ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದೆ. ಇದೀಗ ಎಲ್ಲರ ಕಣ್ಣು ಐಪಿಎಲ್​ ಮೇಲಿದ್ದು, ವಿಶ್ವಕಪ್​ ಸೋಲನ್ನು ಬಹುಬೇಗನೆ ಮರೆತಿದ್ದಾರೆ. ಇದೀಗ ಯಾರೋಬ್ಬರು ವಿಶ್ವಕಪ್​ ಸೋಲನ್ನು ಪ್ರಶ್ನಿಸುವುದಿಲ್ಲ ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾರೆ. ಮೊದಲು ಹಾರ್ದಿಕ್​ ಪಾಂಡ್ಯ ಕುರಿತು ಊಹಾಪೋಹಗಳನ್ನು ಮಾಡಲಾಯಿತು. ಇದಾದ ಬಳಿಕ ರೋಹಿತ್​ ಅವರ ಮುಂಬೈ ಇಂಡಿಯನ್ಸ್​ ನಾಯಕತ್ವದ ಬಗ್ಗೆ ವದಂತಿಗಳನ್ನು ಹಬ್ಬಿಸಲಾಯಿತು.  ಈ ಮೂಲಕ ವಿಶ್ವಕಪ್​ ಸೋಲಿನ ಗಮನವನ್ನು ಸುಲಭವಾಗಿ ಬೇರೆಡೆಗೆ ತಿರುಗಿಸಿದ್ದಾರೆ ಎಂದು ಟೀಕಿಸಲಾಗಿದೆ.

Leave A Reply

Your email address will not be published.