iQOO: ಐಫೋನ್ ಮತ್ತು OnePlus ಗೆ ಪೈಪೋಟಿ ಕೊಡಲು ಬಂತು ಇನ್ನೊಂದು ಅಗ್ಗದ ಸ್ಮಾರ್ಟ್ಫೋನ್, ಬೆಲೆ ಕೂಡ ಕಡಿಮೆ.

ಕೈ ಗೆಟಕುವ ಬೆಲೆಯಲ್ಲಿ iQOO 12 5G ಸ್ಮಾರ್ಟ್ ಫೋನ್ ಅನ್ನು ಖರೀದಿಸಿ, ಹಲವು ವಿಶೇಶತೆಯೊಂದಿಗೆ ಈ ಫೋನ್ ಭಾರತದಲ್ಲಿ ಬಿಡುಗಡೆಗೊಳ್ಳಲಿದೆ

iQOO 12 5G Smart Phone : ಇಂದಿನ ಯುಗವನ್ನು ಸ್ಮಾರ್ಟ್ ಫೋನ್ (Smart Phone) ಯುಗ ಎಂದೇ ಕರೆಯಲಾಗುತ್ತಿದೆ. ಹೆಚ್ಚಿನ ಜನರು ಸ್ಮಾರ್ಟ್ ಫೋನ್ ಅನ್ನು ಬಳಸುತ್ತಾರೆ. ಈಗ ಬಾರಿ ಸದ್ದು ಮಾಡುತ್ತಿರುವ iQOO ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಲೇಟೆಸ್ಟ್ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಿದ್ಧವಾಗಿದೆ. ಭಾರತದಲ್ಲಿ ಈ ಫೋನ್ ಬಿಡುಗಡೆಯ ದಿನಾಂಕವನ್ನು ಕಂಪನಿಯು ಖಚಿತಪಡಿಸಿದೆ.

iQOO 12 5G ಕುರಿತು ಒಂದಿಷ್ಟು ಮಾಹಿತಿ ನೋಡುವುದಾದರೆ ಇದು ಶೀಘ್ರದಲ್ಲೇ ಚೀನೀ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು ಕ್ರಮವಾಗಿ ಭಾರತದಲ್ಲಿ ಈ ಫೋನ್ 12ನೇ ಡಿಸೆಂಬರ್ 2023 ರಂದು ಬಿಡುಗಡೆಯಾಗುವುದಾಗಿ ಖಚಿತವಾಗಿದೆ.     

iQOO 12 5G Smart Phone
Image Credit: Jagran

 

ಹಲವು ವಿಶೇಶತೆಯೊಂದಿಗೆ iQOO 12 5G ಫೋನ್‌

ಈ ಸ್ಮಾರ್ಟ್ಫೋನ್ ಭಾರತಕ್ಕಿಂತ ಮೊದಲು ಚೀನಾದಲ್ಲಿ ಬಿಡುಗಡೆಯಾಗಲಿದೆ. ಸ್ಮಾರ್ಟ್‌ಫೋನ್‌ನ ಡಿಸೈನಿಂಗ್ ಈಗಾಗಲೇ ಬಹಿರಂಗಪಡಿಸಲಾಗಿದೆ. ಕಂಪನಿಯು ಚೀನಾದ ಮಾರುಕಟ್ಟೆಯಲ್ಲಿ ಹಲವು ಬೇಡಿಕೆ ಹೊಂದಿದೆ. ಈ ಬಾರಿ ನಾವು ಸ್ವಲ್ಪ ಬದಲಾದ ವಿನ್ಯಾಸವನ್ನು ಪಡೆಯುತ್ತೇವೆ. ಕಂಪನಿಯು ಕರ್ವ್ ಡಿಸ್ಪ್ಲೇಯನ್ನು ಒದಗಿಸಬಹುದು ಎನ್ನಲಾಗಿದೆ.

iQOO 12 5G ವೈಶಿಷ್ಟತೆಗಳು

ಈ iQOO 12 5G ಫೋನ್‌ನಲ್ಲಿ 6.7 ಇಂಚಿನ AMOLED ಡಿಸ್ಪ್ಲೇಯನ್ನು ಪಡೆಯಬಹುದು. ಇದು 1.5K ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ದರ ಅನ್ನು ಬೆಂಬಲಿಸುತ್ತದೆ. ಸ್ಮಾರ್ಟ್ಫೋನ್ 16GB RAM ಆಯ್ಕೆಯನ್ನು ಹೊಂದಿರುತ್ತದೆ. ಈ ಹ್ಯಾಂಡ್‌ಸೆಟ್ Android 14 ಆಧಾರಿತ Funtouch OS 14 ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಈ ಫೋನ್ 50MP OmniVision OV50H ಪ್ರೈಮರಿ ಸೆನ್ಸರ್ ಅನ್ನು OIS ಬೆಂಬಲದೊಂದಿಗೆ ಹೊಂದುವ ನಿರೀಕ್ಷೆಗಳಿವೆ. ಇದಲ್ಲದೇ 50MP Samsung JN1 ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 64MP ಟೆಲಿಫೋಟೋ ಲೆನ್ಸ್ ಅನ್ನು 100X ಜೂಮ್ ಸಹ ನಿರೀಕ್ಷಿಸಬಹುದು.

iQOO 12 5G Smart Phone Price
Image Credit: Gadgets360

ಸ್ಮಾರ್ಟ್ಫೋನ್ ಪವರ್ ಮಾಡಲು 5000mAh ಬ್ಯಾಟರಿಯನ್ನು ಒದಗಿಸಬಹುದು ಹಾಗು 120W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿರುತ್ತದೆ. ಕಂಪನಿಯು ಈ ಹ್ಯಾಂಡ್‌ಸೆಟ್‌ನಲ್ಲಿ Q1 ಇ-ಸ್ಪೋರ್ಟ್ ಚಿಪ್ ಅನ್ನು ಒದಗಿಸಬಹುದು ಇದು ಗೇಮಿಂಗ್ ಅನುಭವವನ್ನು ಸುಧಾರಿಸುತ್ತದೆ. iQOO 11 5G ಫೋನ್ ಚೀನಾದಲ್ಲಿ ಕೆಂಪು, ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಭಾರತದಲ್ಲಿ ಕೊಂಚ ಕಲರ್ ಮತ್ತು ಹಲವು ವೈಶಿಷ್ಟ್ಯಗಳು ಯಥಾ ಪ್ರಕಾರ ಲಭ್ಯವಾಗುವ ನಿರೀಕ್ಷೆಗಳಿವೆ.

iQOO 11 5G ಫೋನ್ ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಯಾವ ಬೆಲೆಗೆ ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯು ಪ್ರಸ್ತುತ ಲಭ್ಯವಿಲ್ಲ. ಬ್ರ್ಯಾಂಡ್‌ನ ಇತರ ಫೋನ್‌ಗಳಂತೆ ಈ ಹ್ಯಾಂಡ್‌ಸೆಟ್ ಅಮೆಜಾನ್‌ನಲ್ಲಿಯೂ ಮಾರಾಟಕ್ಕೆ ಲಭ್ಯವಿರುತ್ತದೆ. ಇದು ಪ್ರೀಮಿಯಂ ಫೋನ್ ಆಗಿರುವುದರಿಂದ ಇದರ ಬೆಲೆ ಖಂಡಿತಾ ಹೆಚ್ಚಾಗಿರುತ್ತದೆ ಎನ್ನಲಾಗಿದೆ .

Leave A Reply

Your email address will not be published.