Ceiling Fan: ಹೊಸ ಫ್ಯಾನ್ ಖರೀದಿ ಮಾಡುವವರಿಗೆ ಕೇಂದ್ರದಿಂದ ಹೊಸ ನಿಯಮ, ಕೇಂದ್ರದ ದಿಡೀರ್ ಘೋಷಣೆ.

ಹೊಸ ಫ್ಯಾನ್ ಖರೀದಿ ಮಾಡುವವರಿಗೆ ಕೇಂದ್ರದಿಂದ ಹೊಸ ನಿಯಮ.

ISI Mark Mandatory For Ceiling Fan: ಪ್ರತಿಯೊಬ್ಬರ ಮನೆಯಲ್ಲೂ ಫ್ಯಾನ್ ಬಳಕೆ ಮಾಡುವುದು ಸಹಜ ಆಗಿದೆ. ಅದರಲ್ಲೂ ಎಲ್ಲಾ ಮನೆಯಲ್ಲೂ ಸೀಲಿಂಗ್ ಫ್ಯಾನ್ ಅಂತೂ ಇದ್ದೆ ಇರುತ್ತದೆ ಹಾಗು ಇದು ಅವಶ್ಯಕ ಕೂಡ ಹೌದು.

ಎಷ್ಟೇ ಎಸಿ, ಕೂಲರ್ ಇದ್ದರೂ ಸೀಲಿಂಗ್ ಗೆ ಫ್ಯಾನ್ ಬೇಕು. ಬೇಸಿಗೆ ಕಾಲದಲ್ಲಂತೂ ಸೀಲಿಂಗ್ ಫ್ಯಾನ್ ಅವಶ್ಯಕೆತೆ ಹೆಚ್ಚಾಗಿರುತ್ತದೆ ಹಾಗು ಪ್ರತಿ ನಿತ್ಯ ಬಳಕೆಯ ವಸ್ತು ಇದಾಗಿದ್ದು, ಸೀಲಿಂಗ್ ಫ್ಯಾನ್ ಅನ್ನು ಖರೀದಿ ಮಾಡುವಾಗ ಸುರಕ್ಷತೆ ಹಾಗು ಗುಣಮಟ್ಟಕ್ಕೆ ಹೆಚ್ಚಿನ ಆಧ್ಯತೆ ನೀಡುವಂತೆ ವರದಿ ಮಾಡಲಾಗಿದೆ.

ISI Mark Mandatory For Ceiling Fan
Image Credit: News 18

ಸೀಲಿಂಗ್ ಫ್ಯಾನ್ ಖರೀದಿಸುವಾಗ ಬಹಳ ಜಾಗರೂಕರಾಗಿರಬೇಕು

ಈಗ ಚಳಿಗಾಲವಾಗಿರುವುದರಿಂದ ಸೀಲಿಂಗ್ ಫ್ಯಾನ್ ಬಳಕೆ ಕಡಿಮೆಯಾದರೂ ಮುಂಬರುವ ಬೇಸಿಗೆಯ ದೃಷ್ಟಿಯಿಂದ ಸೀಲಿಂಗ್ ಫ್ಯಾನ್ ಅವಶ್ಯಕ ಇದೆ . ಅಂತಹ ಸೀಲಿಂಗ್ ಫ್ಯಾನ್ ಖರೀದಿಸುವಾಗ ನೀವು ಜಾಗರೂಕರಾಗಿರಬೇಕು. ಕೇಂದ್ರ ಸರ್ಕಾರವು ಸೀಲಿಂಗ್ ಫ್ಯಾನ್’ಗಳ ತಯಾರಿಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದ್ದು, ಫೆಬ್ರವರಿ 2024 ರಿಂದ ಜಾರಿಗೆ ಬರಲಿವೆ.

ಕೇಂದ್ರ ಸಚಿವ ಪಿಯೂಷ್ ಗೋಯಲ್ ಬಳಕೆದಾರರಿಗೆ ಈ ಬಗ್ಗೆ ವಿವರಗಳನ್ನ ನೀಡಿದ್ದಾರೆ. ಅವರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಈ ಬಗ್ಗೆ ಮಾಹಿತಿಯೊಂದಿಗೆ ವೀಡಿಯೊವನ್ನ ಹಂಚಿಕೊಂಡಿದ್ದಾರೆ. ಸೀಲಿಂಗ್ ಫ್ಯಾನ್ ಖರೀದಿಸುವಾಗ ಪ್ರತಿಯೊಬ್ಬರೂ ಕೆಲವು ವಿಷಯಗಳನ್ನ ಪರೀಕ್ಷಿಸಲು ಸಲಹೆ ನೀಡುತ್ತಾರೆ.

ಸೀಲಿಂಗ್ ಫ್ಯಾನ್‌’ಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ISI ಮಾರ್ಕ್ ಹೊಂದಿರಬೇಕು

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ನವೆಂಬರ್ 24,2023 ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಗ್ರಾಹಕರು ಖರೀದಿಸುವ ಮುನ್ನ ಫ್ಯಾನ್‌ಗಳು ಇಂಡಿಯನ್ ಸ್ಟಾಂಡರ್ಡ್ ಇನ್‌ಸ್ಟಿಟ್ಯೂಷನ್ ಮಾರ್ಕ್ (ISI) ಮಾರ್ಕ್’ನ್ನ ಹೊಂದಿದ್ದೀರಾ ಎಂದು ಪರಿಶೀಲಿಸುವಂತೆ ಅವರು ಸೂಚಿಸಿದರು.

ಫೆಬ್ರವರಿ 2024 ರಿಂದ ಮಾರಾಟವಾಗುವ ಎಲ್ಲಾ ಸೀಲಿಂಗ್ ಫ್ಯಾನ್‌’ಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ISI ಮಾರ್ಕ್ ಹೊಂದಿರಬೇಕು ಎಂದು ತಿಳಿಸುವ ಎಲ್ಲಾ ಫ್ಯಾನ್ ತಯಾರಕರಿಗೆ ಗುಣಮಟ್ಟ ನಿಯಂತ್ರಣ ಆದೇಶಗಳನ್ನ ನೀಡಿದೆ ಎಂದು ಸಚಿವಾಲಯ ತಿಳಿಸಿದೆ. ISI ಮಾರ್ಕ್ ಇಲ್ಲದ ಉತ್ಪನ್ನಗಳನ್ನ ಇನ್ನು ಮುಂದೆ ಮಾರಾಟ ಮಾಡಲು, ಸಂಗ್ರಹಿಸಲು ಅಥವಾ ರಫ್ತು ಮಾಡಲು ಅನುಮತಿಸಲಾಗುವುದಿಲ್ಲ.

ನಿಯಮ ಉಲ್ಲಂಘನೆಗೆ ದಂಡ ಹಾಗು ಜೈಲು ಶಿಕ್ಷೆ ನಿಶ್ಚಿತ

ಹೊಸ ನಿಯಮಗಳು ಸೀಲಿಂಗ್ ಫ್ಯಾನ್‌ಗಳಿಗೆ ಸುರಕ್ಷತಾ ಮಾನದಂಡಗಳನ್ನ ಸುಧಾರಿಸುವ ಗುರಿಯನ್ನ ಹೊಂದಿರುವುದರಿಂದ, ಕಾನೂನು ಪರಿಣಾಮಗಳನ್ನ ತಪ್ಪಿಸಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅನುಸರಿಸುವ ಫ್ಯಾನ್‌ಗಳನ್ನ ಖರೀದಿಸಲು ಗ್ರಾಹಕರು ಜಾಗರೂಕರಾಗಿರಲು ಸಲಹೆ ನೀಡಲಾಗುತ್ತದೆ. ಪೀಯೂಷ್ ಗೋಯಲ್ ಅವರು ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಈ ಹಂತವು ಸೀಲಿಂಗ್ ಫ್ಯಾನ್‌ಗಳು ಉತ್ತಮ ಗುಣಮಟ್ಟದ್ದಾಗಿರುವುದನ್ನ ಖಚಿತಪಡಿಸುತ್ತದೆ.

ಈ ಮಾರ್ಗಸೂಚಿಗಳನ್ನ ಅನುಸರಿಸಲು ವಿಫಲವಾದ್ರೆ ಭೀಕರ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ. ಮೊದಲ ಬಾರಿ ಉಲ್ಲಂಘಿಸುವವರಿಗೆ ರೂ. 2 ಲಕ್ಷ ದಂಡ ಮತ್ತು 2 ವರ್ಷಗಳವರೆಗೆ ಜೈಲು ಶಿಕ್ಷೆ. ಮತ್ತೊಮ್ಮೆ ಅದನ್ನೇ ಪುನರಾವರ್ತಿಸುವವರಿಗೆ ರೂ. 5 ಲಕ್ಷ ದಂಡ ಅಥವಾ ಉತ್ಪನ್ನದ ಮೌಲ್ಯಕ್ಕಿಂತ 10 ಪಟ್ಟು ವಸೂಲಿ ಮಾಡಲಾಗುವುದು ಎನ್ನಲಾಗಿದೆ.

Leave A Reply

Your email address will not be published.